ಕ್ರಿಯಾಯೋಜನೆಯಲ್ಲಿ ತಾರತಮ್ಯ ಆರೋಪ: ತಾಪಂ ಸಾಮಾನ್ಯ ಸಭೆಯಿಂದ ಹೊರ ನಡೆದ ಬಿಜೆಪಿ ಸದಸ್ಯರು !

Source: SO News | By MV Bhatkal | Published on 1st August 2018, 8:09 AM | Coastal News |

ಭಟ್ಕಳ: ಇಲ್ಲಿನ ತಾಲೂಕಾ ಪಂಚಾಯತ ಸಾಮಾನ್ಯ ಸಭೆಯೂ ತಾಲೂಕಾ ಪಂಚಾಯತ್ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ ಅಧ್ಯಕ್ಷತೆಯಲ್ಲಿ ಮಂಗಳವಾರದಂದು ತಾ.ಪಂ.ಸಭಾಗೃಹದಲ್ಲಿ ಜರುಗಿತು.
ಸಭೆಯ ಆರಂಭದಲ್ಲಿ ತಾ.ಪಂ. ಬಿಜೆಪಿ ಚುನಾಯಿತ ಜನಪ್ರತಿನಿಧಿಗಳು 2015 ಏಪ್ರಿಲ್ 1 ರಿಂದ 2016ಮಾರ್ಚ 31ರ ಅವಧಿಯ ಮುದ್ರಾಂಕ ಶುಲ್ಕ ಯೋಜನೆಯಡಿ 14,64,221 ಲಕ್ಷ ಅನುದಾನದಲ್ಲಿ ಪ.ಜಾತಿ/ಪ.ಪಂಗಡಗಳಿಗೆ ಮತ್ತು ಶೇ.20ಮೀರದಂತೆ ರಸ್ತೆ ಹಾಗೂ ಇತರೇ ಕಾಮಗಾರಿ ಕ್ರಿಯಾಯೋಜನೆಯನ್ನು ತಾ.ಪಂ. ಅಧ್ಯಕ್ಷ ಈಶ್ವರ ನಾಯ್ಕ ಹಾಗೂ ಇಲ್ಲಿನ ಕಾಂಗ್ರೆಸ ಪಕ್ಷದ ಚುನಾಯಿತ ಸದಸ್ಯರೆಲ್ಲರು ತಮ್ಮಿಚ್ಛೆಯಂತೆ ತಯಾರಿಸಿ ಠರಾವು ಮಾಡಿದ್ದು ಕಳುಹಿಸಿದ ಕ್ರಿಯಾಯೋಜನೆ ಠರಾವು ವಾಪಸ್ಸು ತೆಗೆದುಕೊಳ್ಳುವಂತೆ ತಾ,ಪಂ. ಬಿಜೆಪಿ ಪಕ್ಷದ ಚುನಾಯಿತ ಸದಸ್ಯ ಪಾಶ್ರ್ವನಾಥ ಶೆಟ್ಟಿ ಅಧ್ಯಕ್ಷರಿಗೆ ತಾಕೀತು ಮಾಡಿದರು. ಇಲ್ಲಿನ ನಾಲ್ಕು ತಾ.ಪಂ. ಚುನಾಯಿತ ಜನಪ್ರತಿನಿಧಿಗಳ ಅನುಮತಿ ಕೇಳದೇ ಹೇಗೆ ಕ್ರಿಯಾಯೋಜನೆ ತಯಾರಿಸಿ ಠರಾವು ಮಾಡಿದ್ದೀರಿ ಇದರಲ್ಲಿ ಅಧ್ಯಕ್ಷರು ಪಕ್ಷಾತೀತವಾಗಿ ಕಾರ್ಯ ಮಾಡಿಲ್ಲ. ಬದಲಿಗೆ ಈ ಕ್ರಿಯಾಯೋಜನೆ ಕಾಂಗ್ರಸ ಪಕ್ಷದಿಂದ ಅವರ ಚುನಾಯಿತ ಸದಸ್ಯರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸದಸ್ಯ ಹನುಮಂತ ನಾಯ್ಕ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಈಶ್ವರ ನಾಯ್ಕ ಈಗಾಗಲೇ ಕ್ರಿಯಾಯೋಜನೆಯನ್ನು ತಯಾರಿಸಿ ಠರಾವು ಕಳುಹಿಸಲಾಗಿದ್ದು ಅದನ್ನು ಕ್ರಿಯಾಯೋಜನೆ ತಯಾರಿಕೆಯಲ್ಲಿ ಎಲ್ಲಾ ಸದಸ್ಯರ ಬಳಿ ಕೇಳಿಯೇ ಮಾಡಬೇಕೆಂದಿಲ್ಲವಾಗಿದ್ದು ಕಳೆದ ಬಾರಿ ನಿಮ್ಮ ವಾರ್ಡಗಳಿಗೆ ಅನುದಾನ ನೀಡಿದ್ದು ಈ ಬಾರಿ ನಾನು ತಯಾರಿಸಿದ್ದೇವೆ. ಇದರಲ್ಲಿ ಯಾವುದೇ ತಾರತಮ್ಮ ಮಾಡಿಲ್ಲ ಎಂದು ಉತ್ತರಿಸಿದರು. ತಯಾರಿಸಿ ಕಳುಹಿಸಲಾದ ಕ್ರಿಯಾಯೋಜನೆ ಮರು ತಯರಿಕೆ ಮಾಡಬೇಕು ಇಲ್ಲವಾದಲ್ಲಿ ಮುಂದಿನ ಸಭೆಯಲ್ಲಿ ನಮಗೆ ಸಬೆಗೆ ಹಾಜರಾಗುವಂತೆ ನೋಟಿಸ ನೀಡಬೇಡಿ ಎಂದು ತಾ,ಪಂ.ಕಾರ್ಯನಿರ್ವಾಹಣಾಧಿಕರಿಗಳಿಗೆ ಸದಸ್ಯ ಪಾಶ್ರ್ವನಾಥ ಶೆಟ್ಟಿ ಪಟ್ಟು ಹಿಡಿದರು. ಈ ಬಗ್ಗೆ ಅಧ್ಯಕ್ಷರು ಯಾವುದೇ ಪ್ರತಿಕ್ರಿಯಿಸದೇ ಸಭೆಯನ್ನು ಮುಂದುವರೆಸಿದ್ದಕ್ಕೆ ಬಿಜೆಪಿ ಚುನಾಯಿತ ತಾ.ಪಂ. ಸದಸ್ಯರಾದ ಪಾಶ್ರ್ವನಾಥ ಶೆಟ್ಟಿ, ಹನುಮಂತ ನಾಯ್ಕ ಹಾಗೂ ಮಾಲತಿ ದೇವಾಡಿಗ ಸಭಾತ್ಯಾಗ ಮಾಡಿ ಸಭೆಯಿಂದ ನಿರ್ಗಮಿಸಿದರು. ಕ್ರಿಯಾ ಯೋಜನೆ ತಯರಿಕೆಯಲ್ಲಿ ಅಧ್ಯಕ್ಷರ ಕಾರ್ಯವನ್ನು ಸಭಾತ್ಯಾಗ ಮಾಡಿದ 3 ಸದಸ್ಯರು ಖಂಡಿಸಿದ್ದಾರೆ. 
ಇನ್ನು ಚುನಾಯಿತ ಜನಪ್ರತಿನಿಧಿಗಳ ಜಟಾಪಟಿ ಗದ್ದಲ ಸಭೆಯ ವಾತಾವರಣ ಕೆಡಿಸಿದ್ದು, ಜನಪ್ರತಿನಿಧಿಗಳ ಜಗಳ ಹಾಜರಿದ್ದ ವಿವಿಧ ಇಲಾಖೆ ಅಧಿಕಾರಿಗಳಿಗೆ ಮುಜುಗರ ಉಂಟಾಗುವುದರೊಂದಿಗೆ ಹಾಸ್ಯಾಸ್ಪದ ಸಂಗತಿಯಾಯಿತು. 
ನಂತರ ತಾ.ಪಂ.ಸದಸ್ಯೆ ಜಯಲಕ್ಷ್ಮೀ ಗೊಂಡ ಇಲ್ಲಿನ ತಾಲೂಕಾ ಆಸ್ಪತ್ರೆಯಲ್ಲಿ ರಕ್ಷಪರಿಶೀಲನಾ ಘಟಕದಲ್ಲಿ ಸಿಬ್ಬಂದಿಗಳು ಖಾಸಗಿಯಾಗಿ ರಕ್ಷ ಪರೀಕ್ಷೆ ಮಾಡಿಕೊಂಡು ಬರುವುದಾಗಿ ಜನರಿಂದಹಣ ಪಡೆದುಕೊಂಡು ಹೊರಗಡೆಯಿಂದ ರಕ್ಷ ಪರೀಕ್ಷೆ ಮಾಡಿಕೊಡುವ ಬಗ್ಗೆ ಸಭೆಯಲ್ಲಿ ತಿಳಿಸಿದ್ದು, ಈ ಬಗ್ಗೆ ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ದಿನಕರ ಸಮಮಂಜಸ ಉತ್ತರವನ್ನು ಸಭೆಗೆ ತಿಳಿಸಿದೇ ಈ ಬಗ್ಗೆ ತನಗೆನು ಗೊತ್ತಿಲ್ಲ ಎಂಬ ಉತ್ತರ ನೀಡಿದರು. ಇನ್ನು ರಕ್ಷ ಪರೀಕ್ಷೆ ಕೆಂದ್ರದಲ್ಲಿನ ಉಪಕರಣ ಸರಿಯಿಲ್ಲ ಎಂಬ ಬಗ್ಗೆ ಜನರು ಆರೋಪಿಸಿದ್ದು ಉಪಕರಣ ಸರಿಯಿದೆಯಾ ಎಂದಿದ್ದಕ್ಕೆ ಯಾವ ಉಪಕರಣ ಯಾವ ರಕ್ಷ ಪರೀಕ್ಷೆ ಎಂಬ ಉತ್ತರ ನೀಡಿ ಜವಾಬ್ದಾರಿ ಮರೆತಂತೆ ಉತ್ತರಿಸಿದರು. ಅದೇ ರೀತಿ ಆಸ್ಪತ್ರೆಯ ಮೂಳೆ ತಜ್ಷರು ಆಸ್ಪತ್ರೆಗೆ ಬಂದ ಅಂಗವಿಕಲರಿಗೆ ಸರ್ಟಿಫಿಕೇಟ್ ನೀಡುವ ವಿಚಾರದಲ್ಲಿ ಬಂದವರಿಗೆ ಬೈಯ್ದು ವಾಪಸ್ಸು ಕಳುಹಿಸಿದ ಬಗ್ಗೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ ಅವರಿಗೆ ದೂರು ಬಂದ ಬಗ್ಗೆ ಪ್ರಶ್ನಿಸಿದ್ದು ಇದಕ್ಕು ಅವರಿಂದ ಸಮಂಜಸ ಉತ್ತರ ಬಾರದ ಹಿನ್ನೆಲೆ ಅವರಿಗೆ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ ಎಂದು ವೈದ್ಯರಿಗೆ ನೋಟಿಸ ನೀಡುವಂತೆ ಸೂಚಿಸಿದರು.  
ನಂತರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯೂ ಅಧ್ಯಕ್ಷರ ಸಮ್ಮುಖದಲ್ಲಿ ನಡೆಯಿತು. 
ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ರಾಧಾ ವೈದ್ಯ, ಸ್ಥಾಯಿ ಸಮಿತಿ ಅದ್ಯಕ್ಷೆ ಮೀನಾಕ್ಷಿ ನಾಯ್ಕ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...