ಚೀನಾ: ಚಂಡಮಾರುತ ’ಮೆರಾಂತಿ’ ಆರ್ಭಟ - ಇಪ್ಪತ್ತೆಂಟು ಸಾವು, ಇನ್ನೊಂದು ಚಂಡಮಾರುತ ಅಪ್ಪಳಿಸುವ ಭೀತಿ

Source: so english | By Arshad Koppa | Published on 18th September 2016, 9:57 AM | Global News |

ಚೀನಾ, ಸೆ ೧೮: ಚೀನಾದ ಪೂರ್ವ ಭಾಗದ ಫುಜಿಯಾನ್ ಮತ್ತು ಜೆಜಿಯಾಂಗ್ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಬಾಧಿಸುತ್ತಿರುವ ’ಮೆರಾಂತಿ’ ಚಂಡಮಾರುತ ವ್ಯಾಪಕ ಹಾನಿಯುಂಟುಮಾಡಿದೆ. 

ಇದು ಈ ವರ್ಷದ ಅತಿ ಪ್ರಬಲ ಚಂಡಮಾರುತವಾಗಿದ್ದು ನಿಸರ್ಗ ಪ್ರಕೋಪಕ್ಕೆ ಇದುವರೆಗೆ ಇಪ್ಪತ್ತೆಂಟು ಜನರು ಸಾವಿಗೀಡಾಗಿದ್ದಾರೆ ಹಾಗೂ ಹದಿನೈದು ಜನರು ಕಾಣಿಯಾಗಿದ್ದಾರೆ. 

ಚಂಡಮಾರುತದ ಪ್ರಾಬಲ್ಯವನ್ನು ಅಳೆಯುವ ಮಾಪಕದಲ್ಲಿ ಗರಿಷ್ಟ ಹದಿನೇಳನೇ ಮಟ್ಟವನ್ನು ತಲುಪಿರುವ ಈ ಮಾರುತ ತನ್ನೊಂದಿಗೆ ಭಾರೀ ಮಳೆಯನ್ನೂ ತಂದಿದೆ. 

ಆದರೆ ಈ ಮಾರುತದ ಪ್ರಕೋಪ ತಣ್ಣಗಾಗುತ್ತಿದ್ದಂತೆಯೇ ಆಗಸದಲ್ಲಿ ದಟ್ಟೈಸಿರುವ ಮೋಡಗಳು ಇನ್ನೊಂದು ಚಂಡಮಾರುತ ಬರುವ ಮುನ್ಸೂಚನೆಯನ್ನು ನೀಡುತ್ತಿವೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ ಶೀಘ್ರವೇ ಇನ್ನೊಂದು ಚಂಡಮಾರುತ "ಮಲಕಾಸ್" ಚೀನಾದ ಪೂರ್ವತೀರವನ್ನು ಅಪ್ಪಳಿಸಲಿದೆ. 

ಈ ಚಂಡಮಾರುತ ಮುಂದಿನ ಇಪ್ಪತ್ತನಾಲ್ಕು ಘಂಟೆಗಳಲಿ ಚೀನಾದ ಪೂರ್ವತೀರದಿಂದ ದಕ್ಷಿಣದವರೆಗೆ, ಪೂರ್ವ ಚೀನಾ ಸಾಗರ, ತೈವಾನ್ ಪೂರ್ವ ತೀರ, ದಿಯಾವೋಯೂ ದ್ವೀಪಗಳ ಮೇಲೆ ಧಾಳಿ ನಡೆಸಲಿದೆ. 
 

Read These Next