ಜ.18ರಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ‘ದಾರಿ ದೀವಿಗೆ’ ಕಾರ್ಯಕ್ರಮ

Source: sonews | By Staff Correspondent | Published on 15th January 2019, 12:46 AM | Coastal News | Don't Miss |

ಭಟ್ಕಳ: ದಿ ನ್ಯೂ ಇಂಗ್ಲೀಷ್ ಪಿ.ಯು.ಕಾಲೇಜು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ  ಸಂಪನ್ಮೂಲ ಕೇಂದ್ರ, ಭಟ್ಕಳ ಇವರ ಸಯುಕ್ತ ಆಶ್ರಯದಲ್ಲಿ ಜ.18ರಂದು ದಿ ನ್ಯೂ ಇಂಗ್ಲೀಷ್ ಪಿ.ಯು.ಕಾಲೇಜಿನ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ‘ದಾರಿ ದೀವಿಗೆ’ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಗಾರದಲ್ಲಿ ತಾಲೂಕಿನ ಎಸ್ ಎಸ್ ಎಲ್ ಸಿ  ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ರಸ ಪ್ರಶ್ನಾ ಸ್ಪರ್ಧಾ ಕಾರ್ಯಕ್ರಮ ಮತ್ತು  ಎಸ್ ಎಸ್ ಎಲ್ ಸಿ  ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವಲ್ಲಿ, “ಪರೀಕ್ಷೆ ಸಜಾ ಅಲ್ಲ ಮಜಾ” ಎನ್ನುವ ಪರೀಕ್ಷಾ  ಭಯ ನಿವಾರಣ ಕ್ರಮಗಳ ಬಗ್ಗೆ ಮುರ್ಡೇಶ್ವರದ ಅರ್.ಎನ್.ಎಸ್ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾ. ದಿಪೀಕಾ ಕಲ್ಕುರಾ ಇವರ ಉಪನ್ಯಾಸ ನೀಡಲಿದ್ದಾರೆ. “ಪರೀಕ್ಷೆ ಬರೆದು ಹೆಚ್ಚಿನ ಅಂಕ ಪಡೆಯಲು ಬರೇ ಜ್ಞಾನ ಸಾಲದು, ತಂತ್ರ ಬೇಕು” ಹಾಗೂ ಸುಂದರ ಕೈ ಬರಹದ ಪ್ರಾಯೋಗಿಕ ತರಬೇತಿ ಮತ್ತು ಉಪನ್ಯಾಸವನ್ನು ಮೂರ್ತಿ ಸರ್ ಇವರಿಂದ ನಡೆಯಲಿದೆ.

ಎಸ್ ಎಸ್ ಎಲ್ ಸಿ; ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಘಟ್ಟ ಮತ್ತು ಎಸ್ ಎಸ್ ಎಲ್ ಸಿ. ನಂತರ ಮುಂದೇನು. . . ? ಈ ವಿಷಯದ ಕುರಿತು  ವಿರೇಂದ್ರ ಶಾನಭಾಗ ಉಪನ್ಯಾಸ ನೀಡಲಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಆರ್ ಮುಂಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು. ಡಾ.ಸುರೇಶ ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮನ್ವಯಾಧಿಕಾರಿ ಯಲ್ಲಮ್ಮ ಮರಿಸ್ವಾಮಿ ಮತ್ತು  ಭಟ್ಕಳ ಎಜ್ಯುಕೇಶನ ಟ್ರಷ್ಟ ಟ್ರಷ್ಟಿ ಮ್ಯಾನೇಜರ ರಾಜೇಶ ನಾಯಕ ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾ¯ರಾದ ಡಾ.ನರಸಿಂಹ ಮೂರ್ತಿ ಮತ್ತು ಬೆಳಕೆಯ ಸರಕಾರಿ ಪ್ರೌಢಶಾಲೆಯ ಮುಖ್ಯಾಧಾಪಕ ಡಾ ಸವಿತಾ ನಾಯಕ ಭಾಗವಹಿಸಲಿದ್ದಾರೆ. 

ಈ ಕಾರ್ಯಕ್ರಮದಲ್ಲಿ ಪ್ರತಿ ಪ್ರೌಢಶಾಲೆಯಿಂದ 8 ವಿದ್ಯಾರ್ಥಿಗಳನ್ನು ಆಹ್ವಾನಿಸಿದ್ದು, ಹೆಚ್ಚ್ಚಿನ ಮಾಹಿತಿಗಾಗಿ ಕಾರ್ಯಕ್ರಮ ಸಂಯೋಜಕ ಸರಕಾರಿ ಪ್ರೌಢಶಾಲೆ ಬೆಳಕೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ ಶಿರಾಲಿ ಇವರನ್ನು 9448182571 ಸಂಪರ್ಕಿಸಲು ಕೋರಿದೆ. 

Read These Next

ನಾಲ್ಕು ತಿಂಗಳಿಂದ ವೇತನವಿಲ್ಲದ ಶಿಕ್ಷಕರು ಕಂಗಾಲು; ಡಿಡಿಪಿಐ ಕಚೇರಿ ಮುಂದೆ ಧರಣಿ-ವೇತನ ಬಿಡುಗಡೆಗೆ ಆಗ್ರಹ

ಕೋಲಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ,ಕುಟುಂಬ ನಿರ್ವಹಣೆಗೆ ...