ಬೆಳಕಿಂಡಿ ಪ್ರಕಾಶನದಿಂದ ಜಾನಪದ ಹಬ್ಬ ಶ್ರೀ ಹರಿಸೇವಾ ಕಾರ್ಯ ಕೃತಿ ಬಿಡುಗಡೆ

Source: sonews | By I.G. Bhatkali | Published on 15th July 2017, 8:02 PM | Coastal News | State News | Don't Miss |

ಭಟ್ಕಳ: ಬೆಳಕಿಂಡಿ ಪ್ರಕಾಶನ ಶಿರಾಲಿಯ ವತಿಯಿಂದ ಡಾ. ಆರ್. ವಿ. ಸರಾಫ್ ಅವರು ರಚಿಸಿದ ಕೃತಿ ಭಟ್ಕಳ ತಾಲೂಕಿನ ಜಾನಪದ ಹಬ್ಬ ಶ್ರೀ ಹರಿಸೇವಾ ಕಾರ್ಯ ಕೃತಿಯನ್ನು ಶಿರಾಲಿಯ ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶಾಸಕ ಮಂಕಾಳ ವೈದ್ಯ ಬಿಡುಗಡೆಗೊಳಿಸಿದರು. 
ನಂತರ ಮಾತನಾಡಿದ ಅವರು ವಿಶೇಷವಾಗಿ ಭಟ್ಕಳ ತಾಲೂಕಿನಲ್ಲಿ ಮಾತ್ರ ತಿರುಪತಿ ತಿಮ್ಮಪ್ಪ ದೇವರ ಪ್ರೀತ್ಯರ್ಥವಾಗಿ ನಡೆಯುತ್ತಿರುವ ಹರಿಸೇವಾ ಕಾರ್ಯವು ಅತ್ಯಂತ ಭಕ್ತಿ-ಭಾವದಿಂದ ನಡೆಯುವ ದೇವತಾ ಕಾರ್ಯಗಳಲ್ಲಿ ಒಂದಾಗಿದೆ. ಇಲ್ಲಿಯ ತನಕ ಹರಿಸೇವಾ ಕಾರ್ಯಗಳು ನಡೆಸಿಕೊಂಡು ಬರಲಾಗುತ್ತಿದ್ದು ಅದಕ್ಕೆ ಅದರದೇ ಆದ ಹಲವಾರು ಕಟ್ಟುಪಾಡುಗಳಿವೆ. ಅಂತಹ ಕಟ್ಟುಪಾಡುಗಳಿಗೆ ಇಲ್ಲಿಯ ತನಕ ಲಿಖಿತ ರೂಪವಿಲ್ಲವಾಗಿತ್ತು. ಡಾ. ಆರ್. ವಿ. ಸರಾಫ್ ಅವರು 2-34 ವರ್ಷಗಳಿಂದ ಅವುಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರ ತಂದಿರುವುದು ಒಂದು ದಾಖಲೆಯಾಗಿ ಉಳಿಯಲಿದೆ. ಯಾವುದೇ ಒಂದು ವ್ಯಕ್ತಿ ಇರುವ ತನಕ ಮಾತ್ರ, ಆದರೆ ಪುಸ್ತಕಗಳು ಸರ್ವಕಾಲಿಕ ದಾಖಲೆಯಾಗಬಲ್ಲವು ಎಂದೂ ಹೇಳಿದರು. 
ಇಂದು ಕರಾವಳಿಯಲ್ಲಿ ಮಳೆ, ಬೆಳೆ, ಜನ-ಜೀವನ ಉತ್ತಮವಾಗಿರಬೇಕಾದರೆ ನಮ್ಮ ಧಾರ್ಮಿಕ ಕಟ್ಟಳೆಗಳು, ನಂಬಿಕೆಗಳೇ ಕಾರಣವಾಗಿದೆ. ನಾವು ಆಚರಿಸುವ ಧಾರ್ಮಿಕ ಆಚರಣೆಗಳು ನಮ್ಮ ಈ ಭಾಗವನ್ನು ಸುರಕ್ಷಿತವಾಗಿಟ್ಟಿದೆ ಎಂದೂ ಅವರು ಅಭಿಪ್ರಾಯ ಪಟ್ಟರು. ಹರಿಸೇವಾ ಕಾರ್ಯದ ಕುರಿತು ಎಲ್ಲರಿಗೂ ತಿಳಿಯುವಂತೆ ಈ ಪುಸ್ತಕವನ್ನು ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ ಹಾಗೂ ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕವನ್ನು ಇಡುವಂತೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. 
ಕಾರ್ಯಕ್ರಮದಲ್ಲಿ  ಉಧ್ಯಮಿ ಡಿ.ಜೆ. ಕಾಮತ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಶಿರಾಲಿ ಗ್ರಾ.ಪಂ.ಅಧ್ಯಕ್ಷ ವೆಂಕಟೇಶ ನಾಯ್ಕ, ಜ್ಯೂನಿಯರ್ ಕಾಲೇಜು ಉಪನ್ಯಾಸಕ ದೇವೇಂದ್ರ ನಾಯ್ಕ,  ಅತಿಥಿಗಳಾಗಿ ನಾಮಧಾರಿ ಸಮಾಜದ ಪ್ರಮುಖ ಜೆ.ಜೆ.ನಾಯ್ಕ,  ಮೊಗೇರ ಸಮಾಜದ ಪ್ರಮುಖ ಗೋವಿಂದ ನಾರಾಯಣ ಮೊಗೇರ, ದೇವಾಡಿಗ ಸಮಾಜದ ಪ್ರಮುಖ ವೆಂಕ್ಟಯ್ಯ ಭೈರುಮನೆ, ನಿವೃತ್ತ ಶಿಕ್ಷಕ ಎಂ.ಬಿ.ನಾಯ್ಕ  ಮುಂತಾದವರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಶಾರದಹೊಳೆಯ ಜೆ.ಜೆ. ನಾಯ್ಕ ಕೃತಿ ಪರಿಚಯ ಮಾಡಿದರು. 
ವಿದ್ಯಾರ್ಥಿನಿಯರಾದ ದೀಕ್ಷಾ ಮತ್ತು ಫಾತಿಮಾ ಪ್ರಾರ್ಥನೆ ಹಾಡಿದರು. ಕೃತಿ ರಚಿಸಿದ ಡಾ. ಆರ್. ವಿ. ಸರಾಫ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶ್ರೀಧರ ಶೇಟ್ ಕಾರ್ಯಕ್ರಮ ನಿರೂಪಿಸಿದರು. 

ಶಿರಾಲಿ ಜನತಾವಿದ್ಯಾಲಯ ಶಾಲೆಯಲ್ಲಿ ಧ್ಯಾನ ಮತ್ತು ಯೋಗ ಶಿಬಿರ
ಭಟ್ಕಳ: ಧ್ಯಾನದಿಂದ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ಕಾಣಬಹುದು, ಅತ್ಯಂತ ಶಾಂತಚಿತ್ತರಾಗಿ ಧ್ಯಾನ ಕೈಗೊಂಡಾಗ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ಶಿರಾಲಿಯ ಸಮಾಜ ಸೇವಕ ಡಾ. ಆರ್. ವಿ. ಸರಾಫ್ ಹೇಳಿದರು. 
ಅವರು ಶಿರಾಲಿಯ ಜನತಾ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ಎರ್ಪಡಿಸಲಾಗಿದ್ದ 2016-17ನೇ ಸಾಲಿನ ಧ್ಯಾನ ಮತ್ತು ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು. 
ಪ್ರತಿಯೊಂದು ವಿದ್ಯಾರ್ಥಿಗೂ ಕೂಡಾ ಧ್ಯಾನ, ಯೋಗದಿಂದ ಮನಸ್ಸಿನ ಎಕಾಗ್ರತೆ ದೊರೆತು ವಿದ್ಯಾಭ್ಯಾಸದಲ್ಲಿಯೂ ಅದು ಅತ್ಯಂತ ಸಹಕಾರಿಯಾಗುವುದು.  ಅಲ್ಲದೇ ಜೀವನದಲ್ಲಿ ಎಂತಹ ಕಠಿಣ ಪರಿಸ್ಥಿತಿ ಬಂದರೂ ಸಹ ಅದನ್ನು ಎದುರಿಸುವಂತಹ ಧೈರ್ಯ ಬರುವುದು. ಜೀವನದಲ್ಲಿ ಎಲ್ಲವೂ ಇದ್ದು ಮಾನಸಿಕ ಶಾಂತಿಯೇ ಇಲ್ಲವಾದಲ್ಲಿ ಎಲ್ಲವೂ ಗೌಣವಾಗುವುದು. ಧ್ಯಾನ, ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡು ಶಾಂತಿಯಿಂದ ಜೀವನ ನಡೆಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತಾ ವಿದ್ಯಾಲಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಂ. ಎ. ನಾಯ್ಕ ವಹಿಸಿದ್ದರು. 
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯೋಗ ಗುರು ಗೋವಿಂದ ದೇವಡಿಗ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕಲಿತ ವಿದ್ಯೆಯು ಜೀವನ ಶಿಕ್ಷಣವಾಗುವುದು.  ಮುಂದೆ ತಮ್ಮ ಜೀವನದಲ್ಲಿ ಅದು ಅತ್ಯಂತ ಸಹಕಾರಿ. ಪ್ರೌಢ ಶಾಲಾ ಹಂತದಲ್ಲಿಯೇ ಧ್ಯಾನ, ಯೋಗವನ್ನು ಮಾಡುವುದರಿಂದ ಮನಸ್ಸಿನ ಎಕಾಗ್ರತೆ ಹೆಚ್ಚಿ ವಿದ್ಯಾಭ್ಯಾಸಕ್ಕೆ ಅತ್ಯಂತ ಸಹಕಾರಿಯಾಗುವುದು. ದೊರೆತಿರುವ ಅವಕಾಶವನ್ನು ಬಳಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. 
ಇನ್ನೋರ್ವ ಮುಖ್ಯ ಅತಿಥಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಜೀವನ ಶಿಕ್ಷಣದ ಕಡೆಗೆ ಗಮನವನ್ನೇ ನೀಡಿಲ್ಲ.  ಇಂದಿನ ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಎದುರಿಸಬೇಕಾದ ಸುಖ-ಕಷ್ಟಗಳ ಕುರಿತು ಅರಿಯದೇ ಇರುವುದರಿಂದ ಅನೇಕರು ಸಂಕಷ್ಟಕ್ಕೆ ಸಿಲುಕುತ್ತಾರೆ.  ಅದು ನಮ್ಮ ಶಿಕ್ಷಣವಾಗಬೇಕು, ಶಿಕ್ಷಣ ಪದ್ಧತಿ ಬದಲಾದಾಗ ಮಾತ್ರ ವಿದ್ಯಾರ್ಥಿ ಮುಂದೆ ಯಶಸ್ವೀ ನಾಗರೀಕನಾಗಬಲ್ಲ.  ಯೋಗ ಶಿಕ್ಷಣದಲ್ಲಿ ಕಡ್ಡಾಯ ಗೊಳಿಸಿದಾಗ ಮಾತ್ರ ನಾವು ಮುಂದಿನ ಸಮಾಜವನ್ನು ಸದೃಢ ಸಮಾಜವನ್ನಾಗಿ ನೋಡಲು ಸಾಧ್ಯವಾಗುವುದು ಎಂದರು. 
ಸಾನಿಯಾ ಮತ್ತು ದೀಕ್ಷಾ ಪ್ರಾರ್ಥನೆ ಹಾಡಿದರು.  ಶಿಕ್ಷಕಿ ಸುಕನ್ಯಾ ಭಟ್ಟ ಸ್ವಾಗತಿಸಿದರು. ಶಿಕ್ಷಕಿ ಲೀಲಾವತಿ ಮೊಗೇರ ನಿರ್ವಹಿಸಿದರು. ಶಿಕ್ಷಕಿ ಆಶಾ ಭಟ್ಟ ವಂದಿಸಿದರು. 

Read These Next

ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ಜಾಣ ಜಾಣೆಯರ ಬಳಗವನ್ನು ರಚಿಸಲು ಅರ್ಜಿ ಅಹ್ವಾನ 

ಕಾರವಾರ: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಯುವಜನರನ್ನು ಸಾಹಿತ್ಯಾಭಿರುಚಿಗೆ ಆಕರ್ಷಿಸಲು ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ...

ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

ಕಾರವಾರ  : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 238.1 ಮಿಮೀ ಮಳೆಯಾಗಿದ್ದು ಸರಾಸರಿ 21.6 ಮಿ.ಮೀ ಮಳೆ ದಾಖಲಾಗಿದೆ. ಜೂನ್ ತಿಂಗಳ ...

ಭಟ್ಕಳದಲ್ಲಿ ಭಯಹುಟ್ಟಿಸಿದೆ ಆಸಿಡ್ ಫ್ಲೈ ಹುಳುಗಳ ಕಾಟ: ಕತ್ತಲೆಯಲ್ಲಿ ಮೊಬೈಲ್ ನೋಡುವವರಿಗೆ ಎಚ್ಚರ 

ಭಟ್ಕಳ: ಈಗಂತೂ ಮಳೆಗಾಲ ಆರಂಭವಾಗುತ್ತಿದಂತೆಯೇ ವಿಧವಿಧದ ಕೀಟಗಳು, ಹುಳು ಹುಪ್ಪಟಗಳು ಮನೆಯತ್ತ ಲಗ್ಗೆ ಇಡಲು ಆರಂಭಿಸುತ್ತಿದ್ದು, ಜನರು ...

ಗೌರಿಲಂಕೇಶ್ ಸೇರಿದಂತೆ ವಿಚಾರವಾದಿಗಳ ಹತ್ಯಗೆ ಬಳಕೆಯಾದ ಪಿಸ್ತೂಲ್ ಮಧ್ಯಪ್ರದೇಶದಿಂದ ಬಂದಿತ್ತೆ?

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸೇರಿದಂತೆ ಮಹಾರಾಷ್ಟ್ರ ಮತ್ತಿತರೆಡೆ ವಿಚಾರವಾದಿಗಳ ಹತ್ಯೆಗೆ ಬಳಕೆಯಾದ ...

ಶಿಕ್ಷಕರ ಬಳಗದಿಂದ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಯವರ ಅಭಿನಂದನಾ ಸಮಾರಂಭ

ಶ್ರೀನಿವಾಸಪುರ :   ಪಟ್ಟಣದ ಶ್ರೀ ಶ್ರೀನಿವಾಸಕಲ್ಯಾಣ ಮಂಟಪದಲ್ಲಿ ಶಿಕ್ಷಕರ ಬಳಗದಿಂದ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ...

ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ಜಾಣ ಜಾಣೆಯರ ಬಳಗವನ್ನು ರಚಿಸಲು ಅರ್ಜಿ ಅಹ್ವಾನ 

ಕಾರವಾರ: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಯುವಜನರನ್ನು ಸಾಹಿತ್ಯಾಭಿರುಚಿಗೆ ಆಕರ್ಷಿಸಲು ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ...

ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

ಕಾರವಾರ  : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 238.1 ಮಿಮೀ ಮಳೆಯಾಗಿದ್ದು ಸರಾಸರಿ 21.6 ಮಿ.ಮೀ ಮಳೆ ದಾಖಲಾಗಿದೆ. ಜೂನ್ ತಿಂಗಳ ...

ಗೌರಿಲಂಕೇಶ್ ಸೇರಿದಂತೆ ವಿಚಾರವಾದಿಗಳ ಹತ್ಯಗೆ ಬಳಕೆಯಾದ ಪಿಸ್ತೂಲ್ ಮಧ್ಯಪ್ರದೇಶದಿಂದ ಬಂದಿತ್ತೆ?

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸೇರಿದಂತೆ ಮಹಾರಾಷ್ಟ್ರ ಮತ್ತಿತರೆಡೆ ವಿಚಾರವಾದಿಗಳ ಹತ್ಯೆಗೆ ಬಳಕೆಯಾದ ...