ಭಟ್ಕಳ :ಮಾರುಕೇರಿ ಎಸ್ಪಿ ಹೈಸ್ಕೂಲಿನ ನೂತನ ಬಸ್ ಉದ್ಘಾಟನೆ 

Source: nazir | By Arshad Koppa | Published on 22nd August 2017, 8:26 AM | Coastal News | Guest Editorial |

ಭಟ್ಕಳ : ಮಾರುಕೇರಿಯ ಶಿವಶಾಂತಿಕಾ ಪರಮೇಶ್ವರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಕರೆತರಲು ಖರೀಧಿಸಲಾದ ನೂತನ ಶಾಲಾ ಬಸ್ಸನ್ನು ಸೋಮವಾರ ಬೆಳಿಗ್ಗೆ ಶಾಸಕ ಮಂಕಾಳ ಎಸ್ ವೈದ್ಯ ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. 


ನಂತರ ಮಾತನಾಡಿದ ಅವರು ಶಾಲೆಗೆ ಬಸ್ಸಿನ ವ್ಯವಸ್ಥೆ ಮಾಡಿರುವುದರಿಂದ ದೂರದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ಬರಲು ಅನುಕೂಲವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಹೆಚ್ಚಿನ ಅಂಕಗಳಿಸಿ ಶಾಲೆಗೆ ಕೀರ್ತಿ ತರಬೇಕೆಂದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಂಠ ಹೆಬ್ಬಾರ,ಉಪಾಧ್ಯಕ್ಷ ಶಿವಾನಂದ ಹೆಬ್ಬಾರ,ಜಿ.ಪಂ.ಸದಸ್ಯ ಅಲ್ಬರ್ಟ ಡಿಕೋಸ್ತ,ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ,ಮಾರುಕೇರಿ ಗ್ರಾ.ಪಂ.ಅಧ್ಯಕ್ಷ ನಾರಾಯಣ ಎಸ್ ಹೆಬ್ಬಾರ, ಗ್ರಾ.ಪಂ.ಸದಸ್ಯರಾದ ಮೋಹನ ಗೊಂಡ, ನಾಗವೇಣಿ ಗೊಂಡ, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಎಸ್ ಎನ್ ಹೆಬ್ಬಾರ, ಸದಸ್ಯರಾದ ಪುಟ್ಟಯ್ಯ ಹೆಬ್ಬಾರ, ಗಣೇಶ ಹೆಬ್ಬಾರ ಮೂಡ್ಲಿಕೇರಿ,ಸುಧಾ ಹೆಗಡೆ, ಗ್ರಾಮಸ್ಥರಾದ ಮಾದೇವ ನಾಯ್ಕ, ಶ್ರೀನಿವಾಸ ಹೆಬ್ಬಾರ, ಜೈರಾಮ ಶೆಟ್ಟಿ,ಕೃಷ್ಣ ಹೆಬ್ಬಾರ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಪಿ ಟಿ ಚವ್ವಾಣ ಸ್ವಾಗತಿಸಿ, ವಂದಿಸಿದರು. 

Read These Next

ಜು.27,28 ರಂದು ಭಟ್ಕಳದ ವೇಲ್ಪೇರ ಆಸ್ಪತ್ರೆಯಲ್ಲಿ ದೇಶದ ಖ್ಯಾತ ಹೃದ್ರೋಗ ತಜ್ಞರಿಂದ ಉಚಿತ ಹೃದಯ ತಪಾಸಣೆ ಶಿಬಿರ

ಕೇರಳದ ಪ್ರಖ್ಯಾತ ಮೈತ್ರಾ ಆಸ್ಪತ್ರೆ ಹಾಗು ವೆಲ್ಫೇರ್ ಆಸ್ಪತ್ರೆ ಭಟ್ಕಳ ಇದರ ಸಹಯೋಗದೊಂದಿಗೆ ಜುಲೈ 27 ಮತ್ತು 28ರಂದು ಉಚಿತ ಹೃದ್ರೋಗ್ರ ...

ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ:ದಿಟ್ಟ ನಿರ್ಧಾರದಂತೆ ವಿದ್ಯಾರ್ಥಿಗಳ ಪರಿಶ್ರಮ ಅವಶ್ಯಕ- ವೈದ್ಯ ದೇವೇಂದ್ರ ನಾಯ್ಕ'

ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ:ದಿಟ್ಟ ನಿರ್ಧಾರದಂತೆ ವಿದ್ಯಾರ್ಥಿಗಳ ಪರಿಶ್ರಮ ಅವಶ್ಯಕ- ವೈದ್ಯ ದೇವೇಂದ್ರ ನಾಯ್ಕ'

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...