ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ ಸಿಲಿಂಡರಗಳ ವಿತರಣೆ

Source: SO News | By Manju Naik | Published on 1st August 2018, 8:26 AM | Coastal News |

ಭಟ್ಕಳ : ಮಹಿಳೆಯರು ಅಡುಗೆ ಮಾಡುವ ವೇಳೆ ಒಲೆಯ ಹೊಗೆಯಿಂದ ಭಾರಿ ಸಮಸ್ಯೆಯಾಗಿದ್ದು, ಪ್ರತಿ ಕುಟುಂಬವೂ ಅಡುಗೆ ಗ್ಯಾಸ ಸಂಪರ್ಕ ಪಡೆದುಕೊಳ್ಳಬೇಕೆಂಬ ಉದ್ದೇಶ ಕೇಂದ್ರ ಸರಕಾರದ ಯೋಜನೆಯೂ ಜನರಿಗೆ ಸಾಕಾರವಾಗುತ್ತಿದೆ ಎಂದು ಶಾಸಕ ಸುನಿಲ ನಾಯ್ಕ ಹೇಳಿದರು.

ಅವರು ಮಂಗಳವಾರದಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಇಲ್ಲಿನ ರಂಜನ್ ಇಂಡೇನ್ ಏಜನ್ಸಿ ಮತ್ತು ರಫಾತ್ ಏಜನ್ಸಿ ಭಟ್ಕಳ ಸಹಯೋಗದಲ್ಲಿ ನಡೆದ ಪ್ರಧಾನ ಮಂತ್ರಿ ಉಜ್ವಲ ಗ್ಯಾಸ ವಿಸ್ತೃತ ಯೋಜನೆಯಲ್ಲಿ ಪರಿಶಿಷ್ಟವರ್ಗ, ಪರಿಶಿಷ್ಟ ಪಂಗಡಗಳು ಹಾಗೂ ಅಂತ್ಯೋದಯ ಪಡಿತರರಿಗೆ ಉಚಿತ ಅನಿಲ ಸಂಪರ್ಕ  ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

‘ಉಜ್ವಲ ವಿಸ್ತøತ ಯೋಜನೆಯೂ ಪ್ರಧಾನಿ ಮೋದಿಯವರ ಕನಸು ಹಾಗೂ ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ಉತ್ತಮ ಯೋಜನೆಯಾಗಿದೆ. ಒಲೆಯಿಂದ ಹೊರಬರುವ ಹೊಗೆಯಿಂದಾಗುತ್ತಿರುವ ಮನೆಯ ಮಹಿಳೆಯರು ಸಾಕಷ್ಟು ಪರಿಣಾಮ ಎದುರಿಸುತ್ತಿದ್ದು, ಹೊಗೆ ಮುಕ್ತವಾಗಿ ಜನರು ಬದುಕು ರೂಪಿಸಿಕೊಳ್ಳಬೇಕು. ಈ ಹಿಂದೆಯಲ್ಲಜನರು ಮನೆಗೆ ಅಡುಗೆ ಗ್ಯಾಸ ಸಂಪರ್ಕ ಕಲ್ಪಿಸಿಕೊಳ್ಳಬೇಕಿದ್ದರೆ ಸಾಕಷ್ಟು ಕಷ್ಟದಾಯಕ ಸ್ಥಿತಿ ಇದ್ದಿದ್ದು, ಈಗ ಮನೆಗೆ ಅಡುಗೆ ಗ್ಯಾಸ ಬರಲಿದ್ದು ವ್ಯವಸ್ಥೆ ಬದಲಾಗಿದೆ. ಇದರ ಸದುಪಯೋಗ ಎಲ್ಲರು ಪಡೆದುಕೊಂಡು ಮುಂದಿನ ದಿನದಲಿ ತಾಲೂಕನ್ನು ಹೊಗೆ ಮುಕ್ತವನ್ನಾಗಿಸುವ ಸಂಕಲ್ಪವಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ರಂಜನ ಗ್ಯಾಸ ಎಜೆನ್ಸಿ ಮಾಲಕಿ ಶಿವಾನಿ ಶಾಂತಾರಾಮ ಅವರು ಕಾರ್ಯಕ್ರಮಕ್ಕೆ ಬಂದ ಮಹಿಳೆಯರಿಗೆ ಗ್ಯಾಸ ಬಳಕೆಯ ಬಗ್ಗೆ ವಿವರ ಮಾಹಿತಿ ನೀಡಿದರು. ಹಾಗೂ ಇಲ್ಲಿನ ಅಗ್ನಿ ಶಾಮಕ ಕಛೇರಿ ಅಧಿಕಾರಿ ಎಸ್.ರಮೇಶ ಅವರು ಗ್ಯಾಸ ಬಳಕೆ ಹಾಗೂ ಅದರ ಸಂಪರ್ಕದ ಬಗ್ಗೆ ಉಪನ್ಯಾಸವನ್ನು ನೀಡಿದರು.

ಶಾಸಕ ಸುನಿಲ ನಾಯ್ಕ ಸಾಂಕೇತಿಕವಾಗಿ 5 ಮಹಿಳೆಯರಿಗೆ ಗ್ಯಾಸ ಒಲೆ, ಸಿಲಿಂಡರ ವಿತರಿಸಿದರು. ಒಟ್ಟು ಪರಿಶಿಷ್ಟವರ್ಗ, ಪರಿಶಿಷ್ಟ ಪಂಗಡಗಳು ಹಾಗೂ ಅಂತ್ಯೋದಯ ಪಡಿತರ ಪೈಕಿ ರಂಜನ್ ಇಂಡೇನ್ ಏಜನ್ಸಿಯಿಂದ 118 ಫಲಾನುಭವಿಗಳಿಗೆ ಮತ್ತು ರಫಾತ್ ಏಜನ್ಸಿ ಭಟ್ಕಳ ಇವರು 25 ಫಲಾನುಭವಿಗಳಿಗೆ ಗ್ಯಾಸ ಸಂಪರ್ಕ ನೀಡಲಾಯಿತು. 

Read These Next