10ನೇ ಒಪ್ಪೋ ಟೈಮ್ಸ್ ಫ್ರೆಶ್ ಫೇಸ್ ಫೈನಲ್: ಭರ್ಜರಿ ಜಯಗಳಿಸಿದ ಆಂಚಲ್‍ಎನ್.ಜಿ, ಕನಿಷ್ಕ್‍ರೈ

Source: Press Release | By I.G. Bhatkali | Published on 22nd October 2017, 11:37 PM | State News | Don't Miss |

ಬೆಂಗಳೂರು: ದಿ ಟೈಮ್ಸ್‍ಆಫ್‍ಇಂಡಿಯಾ ಹಾಗೂ ಒಪ್ಪೋ ಸಹಯೋಗದಲ್ಲಿರಾಷ್ಟ್ರಾದ್ಯಂತ ಕಾಲೇಜುಗಳಲ್ಲಿ ಪರ್ಸನಾಲಿಟಿ ಮತ್ತುಟ್ಯಾಲೆಂಟ್ ಹಂಟ್‍ಅದ್ದೂರಿಕಾರ್ಯಕ್ರಮ ಒಪ್ಪೋಟೈಮ್ಸ್ ಫ್ರೆಶ್ ಫೇಸ್-2017 ಕಾರ್ಯಕ್ರಮವುರಾಷ್ಟ್ರಾದ್ಯಂತ ನಡೆಯುತ್ತಿವೆ. ಈ ಕಾರ್ಯಕ್ರಮವು 11 ನಗರಗಳ ಹಲವಾರು ಕಾಲೇಜುಗಳಲ್ಲಿ ನಡೆದಿದ್ದು, ಸಮಾರೋಪಕಾರ್ಯಕ್ರಮವು ಬೆಂಗಳೂರಿನ ಕೋರಮಂಗಲದ ಫಾರಂ ಮಾಲ್ ನಲ್ಲಿ ಅ.21ರಂದು ನಡೆಯಿತು. ಕಾರ್ಯಕ್ರಮದ ವಿಜೇತರಾಗಿ ಆಂಚಲ್‍ಎನ್.ಜಿ ಹಾಗೂ ಕನಿಷ್ಕ್‍ರೈ ಮೂಡಿಬಂದರು.

ಕಾರ್ಯಕ್ರಮದ ವಿಜೇತೆಯಾದ ಆಂಚಲ್‍ಎನ್.ಜಿ, ತಮ್ಮಅತ್ಯುತ್ತಮವಾದ ಸಮಕಾಲೀನ ನೃತ್ಯವನ್ನು ಪ್ರದರ್ಶಿಸಿ ಮೆಚ್ಚುಗೆಯನ್ನು ಪಡೆದರೆ, ತಮ್ಮಅಮೋಘವಾದ ಕಂಠಸಿರಿಯ ಮೂಲಕ ಕನಿಷ್ಕ್, ತೀರ್ಪುಗಾರರು ಮತ್ತು ಸಭಿಕರುತಮ್ಮಜೊತೆಯಲ್ಲಿಯೇ ಹಾಡುಗುನುಗುವಂತೆ ಮಾಡಿದರು. ಸ್ಪರ್ಧಿಗಳ ಪ್ರತಿಭೆ, ರಚನಾತ್ಮಕಗುಣ, ಸಮಕಾಲೀನ ವಿಷಯಗಳ ಕುರಿತಾದಂತಹ ತಿಳುವಳಿಕೆ ಮುಂತಾದ ಕ್ಷೇತ್ರಗಳ ಅನುಗುಣವಾಗಿತೀರ್ಪುಗಾರರು ವಿಜೇತರನ್ನುಆಯ್ಕೆ ಮಾಡಿದರು. ತೀರ್ಪುಗಾರರಾಗಿಖ್ಯಾತ ನಟಿ ಪ್ರಣೀತಾ ಶುಭಾಷ್, ಕನ್ನಡರ್ಯಾಪರ್‍ಅಲೋಕ್ ಬಾಬು ಹಾಗೂ ಬೀನಾ ಸೊಂಧುಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಹುಭಾಷಾ ನಟಿ ಪ್ರಣೀತಾ ಶುಭಾಷ್, ಒಪ್ಪೋಟೈಮ್ಸ್ ಫ್ರೆಶ್ ಫೇಸ್ ಸ್ಪರ್ಧೆಯು ನಾನು ಕಾಲೇಜಿನಲ್ಲಿರುವಂತಹ ಸಂದರ್ಭಗಳಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ನಾನು ಪ್ಲಸ್ ವನ್ ವ್ಯಾಸಂಗ ಮಾಡುತ್ತಿದ್ದೆ. ನನ್ನಕಾಲೇಜಿನಲ್ಲಿಇಂತಹಾಉತ್ತಮ ಅವಕಾಶಗಳಿದ್ದರೂ ನನಗೆ ಅದನ್ನು ಸಮರ್ಪಕವಾಗಿಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆಇಲ್ಲಿರುವ ಸ್ಪರ್ಧಿಗಳು ಈ ಸವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದು, ಈ ಕಾರಣಕ್ಕಾಗಿ ನಾನು ಅವರನ್ನುಅಭಿನಂದಿಸುತ್ತೇನೆಎಂದರು. ಇಲ್ಲಿ ಸ್ಪರ್ಧಿಸಿದಂತಹ ಪ್ರತಿಯೋರ್ವ ಸ್ಪರ್ಧಿಯುತುಂಬಾಉತ್ತಮವಾದ ಪ್ರದರ್ಶನವನ್ನು ನೀಡಿದ್ದಾರೆ. ಇಂತಹಾಕಾರ್ಯಕ್ರಮವನ್ನು ಸಂಘಟಿಸಿದ ಸಂಘಟಕರಿಗೆ ನಾನು ಅಭಿನಂದಿಸುತ್ತೇನೆ. ಅಲ್ಲದೇ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದುದಕ್ಕಾಗಿ ನನಗೆ ತುಂಬಾ ಹೆಮ್ಮೆಯೆನಿಸುತ್ತದೆಎಂದು ಹೇಳಿದರು.

ತೀರ್ಪುಗಾರರಾಗಿತಮ್ಮಅನುಭವ ಹೇಗಿತ್ತುಎಂದು ಪ್ರಣೀತಾರನ್ನು ಪ್ರಶ್ನಿಸಿದಾಗ, ಒಪ್ಪೋಟೈಮ್ಸ್ ಫ್ರೆಶ್ ಫೇಸ್‍ಕಾರ್ಯಕ್ರಮದಲ್ಲಿ ತೀರ್ಪುಗಾರಳಾಗಿ ಭಾಗವಹಿಸಿದ್ದು ನನಗೆ ಸಂತೋಷವಾಗಿದೆ. ಇಲ್ಲಿನ ಸ್ಪರ್ಧೆ ನಿಜಕ್ಕೂತುಂಬಾನೇಕಷ್ಟಕರವಾಗಿತ್ತು. ಆದರೆ ನನ್ನೊಂದಿಗಿದ್ದಇತರತೀರ್ಪುಗಾರರು ನನಗೆ ಸಹಕಾರ ನೀಡಿದರು. ಬೆಂಗಳೂರಿನಲ್ಲಿ ಸುಂದರಿ, ಸುಂರರಿಗೇನೂಕಡಿಮೆಯಿಲ್ಲ. ಪ್ರತಿಯೊಬ್ಬರೂಇಂತಹಾ ಅವಕಾಶಗಳನ್ನು ಹೇರಳವಾಗಿ ಬಳಸಿ ಬದುಕಿನಲ್ಲಿ ಮುನ್ನಡೆಯಬೇಕು. ಕಳೆದ ವರ್ಷದಂತೆ ಈ ವರ್ಷವೂ ಬೆಂಗಳೂರು ವಿನ್ ಆಗಲಿದೆಎಂದುಅವರು ಹೇಳಿದರು.

ನಗರಗಳಲ್ಲಿ ವಿಜೇತರಾದ ಸ್ಪರ್ಧಿಗಳು ಮುಂದೆರಾಷ್ಟ್ರಮಟ್ಟದಲ್ಲಿ ನಡೆಯಲಿರುವ ಸ್ಪರ್ಧೆಗೆಆಯ್ಕೆಯಾಗುತ್ತಾರೆ. ಸ್ಪರ್ಧೆಯು ಮುಂಬೈ ಮಹಾನಗರಿಯಲ್ಲಿ ನಡೆಯಲಿದ್ದು, ಇಬ್ಬರುರಾಷ್ಟ್ರಮಟ್ಟದ ವಿಜೇತರಿಗೆಒಪ್ಪೋ ಎಫ್3 ಸೆಲ್ಫೀಎಕ್ಸ್ ಪರ್ಟ್‍ಡ್ಯುಯಲ್‍ಕ್ಯಾಮ್ ಮೊಬೈಲ್ ಫೋನ್ ಮತ್ತುಅಂತಾರಾಷ್ಟ್ರೀಯ ಪ್ರವಾಸ ತೆರಳುವ ಅವಕಾಶ ದೊರೆಯಲಿದೆ. ಸದ್ಯಒಪ್ಪೋಟೈಮ್ಸ್ ಫ್ರೆಶ್ ಫೇಸ್‍ಕಾರ್ಯಕ್ರಮವು ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಅತ್ಯುತ್ತಮ ವೇದಿಕೆಯಾಗಿದ್ದು, ನಿಮ್ಮಲ್ಲಿರುವತಾಜಾತನದ ಅಂಶವೇನು? ಎಂಬ ಪ್ರಶ್ನೆಯೊಂದಿಗೆಇದು ಸ್ಪರ್ಧಿಗಳನ್ನು ಮುಖಾಮುಖಿಯಾಗುತ್ತದೆ.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...