'ಎ ಕನ್ಫೆಕ್ಷನರ್ಸ್ ಸಿಕ್ರೇಟ್ಸ್' ಅಡುಗೆ ರಸೀಪಿ ಪುಸ್ತಕ ಬಿಡುಗಡೆ

Source: sonews | By sub editor | Published on 27th August 2018, 11:52 PM | Coastal News | Don't Miss |

ಭಟ್ಕಳ: ಅಂತರಾಷ್ಟ್ರೀಯ ಮಟ್ಟದ ಅಡುಗೆ ರಸೀಪಿ ಪುಸ್ತಕ 'ಎ ಕನ್ಫೆಕ್ಷನರ್ಸ್ ಸಿಕ್ರೇಟ್ಸ್' ಸೋಮವಾರ ಇಲ್ಲಿನ ರಾ.ಹೆ. 66 ರಲ್ಲಿನ ದಿ.ಎಸ್.ಎಂ.ಯಾಹ್ಯಾರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುಸ್ತಕದ ಲೇಖಕಿ ಮುಬೀನ್ ಮಖ್ಬೂಲ್ ಬಿಡುಗಡೆಗೊಳಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾನು ಬಹರೇನ್ ನಲ್ಲಿದ್ದಾಗ ರಾಜಮನೆತನದವರಿಗೆ ಅಡುಗೆ ರಸೀಪಿಯನ್ನು ಮಾಡಿದ್ದು ಅದನ್ನು ಇಷ್ಟಪಟ್ಟ ರಾಜಮನೆತನದ ಸ್ಪೂರ್ತಿಯೊಂದಿಗೆ ಎಲ್ಲರಿಗೂ ಇಷ್ಟವಗುವ ವಿವಿಧ ರೀತಿಯ ಅಡುಗೆ ಪಾಕಶಾಸ್ತ್ರ ಪುಸ್ತಕವನ್ನು ರಚಿಸಬೇಕಾಯಿತು. ಈಗಾಗಲೆ ಬಹರೇನ್ ನಲ್ಲಿ ಇದನ್ನು ಬಿಡುಗಡೆಗೊಳಿಸಲಾಗಿದ್ದು ರಾಜ್ಯದ ರಾಜಧಾನಿಯಲ್ಲೂ ಇದನ್ನು ಬಿಡುಗಡೆಗೊಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಡಾ.ಮಖ್ಬೂಲ್ ಆಹ್ಮದ್, ಮುಹಮ್ಮದ್ ಅಕ್ರಮುಲ್ಲಾ, ಶಾಕೀರಾ ನಿಝಾಮ್, ನವೀನ್ ವಸಾತುಲ್ಲಾ ಸೇರಿದಂತೆ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. 

Read These Next