ಭಟ್ಕಳದಲ್ಲಿ 9 ಎಕರೆ ಜಮೀನು ಬೆಳೆ ನಷ್ಟ     

Source: S.O. News Service | By Manju Naik | Published on 19th October 2018, 3:06 PM | Coastal News | Special Report |

ಭಟ್ಕಳ : 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿಯಿಂದ ಭತ್ತದ ಬೆಳೆಯೂ ಹಾನಿಯುಂಟಾಗಿದ್ದು, ತಾಲೂಕಿನಲ್ಲಿ 10 ರೈತರ ಒಟ್ಟು 9 ಎಕರೆ 2 ಗುಂಟೆ ಕೃಷಿ ಜಮೀನಿನಲ್ಲಿ ಬೆಳೆ ನಷ್ಟ ಸಂಭವಿಸಿದೆ ಎಂದು ಕೃಷಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಈ ಬಾರಿಯ ಅತಿವೃಷ್ಠಿ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರೈತರು ಬೆಳೆದ ಭತ್ತಗಳು ನೆಲಕ್ಕೆ ಅಡ್ಡಬಿದ್ದು, ತೆನೆಗಳು ಮಣ್ಣು ಕಚ್ಚಿ ಹೋಗಿರುವುದರಿಂದ ಬೆಳೆಗಳು ನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಇಲ್ಲಿನ ಮಾವಳ್ಳಿ-1 ಹಾಗೂ ಬೆಂಗ್ರೆ ಹೋಬಳಿಯಲ್ಲಿನ 10 ರೈತರ ಒಟ್ಟು 9 ಎಕರೆ 2 ಗುಂಟೆ ಕೃಷಿ ಜಮೀನಿನಲ್ಲಿ ಭತ್ತದ ಬೆಳೆಯು ನಾಶವಾಗಿದೆ. ಮಾವಳ್ಳಿ-1ರಲ್ಲಿ 6 ರೈತರ 5 ಎಕರೆ 2 ಗುಂಟೆ ಕೃಷಿ ಜಮೀನಿನಲ್ಲಿ 14,076 ರೂ ಹಾನಿಯಾಗಿದ್ದು, ಬೆಂಗ್ರೆ 4 ರೈತರ 3 ಎಕರೆ 35 ಗುಂಟೆ ಕೃಷಿ ಜಮೀನಿನಲ್ಲಿ 10,450 ರೂ ಹಾನಿಯಾಗಿದ್ದು, ಒಟ್ಟು 9 ಎಕರೆ 2 ಗುಂಟೆ ಕೃಷಿ ಜಮೀನಿನಲ್ಲಿ 24,616 ರೂ ಹಾನಿ ಮೊತ್ತವನ್ನು ಕೃಷಿ ಇಲಾಖೆಯಿಂದ ತಿಳಿಸಿದ್ದಾರೆ.
ಈಗಾಗಲೇ ಮುಂಗಾರು ಬೆಳೆಯಾಗಿ ಬೆಳೆದ ಬಹುತೇಕ ಗದ್ದೆಗಳಲ್ಲಿ ಭತ್ತದ ತೆನೆಗಳು ಕಟಾವು ಕಾರ್ಯ ನಡೆಯುತ್ತಿದ್ದು, ಈ ಸಮಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ತೆನೆಗಳು ನೀರಿನಲ್ಲಿ ತೋಯ್ದು ಹೋಗುತ್ತಿದೆ. ಹವಾಮಾನ ವೈಪರೀತ್ಯದಿಂದ ಸುರಿದ ಮಳೆಯಿಂದಾಗಿ ಬೆಳೆದು ನಿಂತ ಭತ್ತದ ಕೊಯ್ಲಿನ ಕಾರ್ಯಕ್ಕೆ ರೈತರಿಗೆ ತೀವ್ರ ತೊಂದರೆ ಉಂಟಾಗಿದೆ.

Read These Next

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...