ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯರು & ಮಕ್ಕಳು ಸುರಕ್ಷಿತ,ಇನ್ನೂ 8ಜ‌ನ ಸೊಂಕಿತ ಗರ್ಭಿಣಿ ‌ಮಹಿಳೆಯರ ಮೇಲೂ ನಿಗಾ

Source: S.O. News Service | Published on 25th June 2020, 7:41 PM | State News | Don't Miss |

ಬಳ್ಳಾರಿ: ಬಳ್ಳಾರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೊಂಕಿತ ಮಹಿಳೆಯರಿಬ್ಬರ ಹೆರಿಗೆಯಾಗಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಆಸ್ಪತ್ರೆಯಲ್ಲಿ ಇನ್ನೂ ಎಂಟು ಜನ ಗರ್ಭಿಣಿ ಸೊಂಕಿತ ಮಹಿಳೆಯರಿದ್ದು,ಅವರ ಮೇಲೂ ವಿಶೇಷ ನಿಗಾವಹಿಸಲಾಗಿದೆ.
ಬಳ್ಳಾರಿ ನೆಹರು ಕಾಲೋನಿಯ 29ವಯಸ್ಸಿನ ಪಿ-6416 ಮಹಿಳೆಗೆ ಗುರುವಾರ ಬೆಳಗ್ಗೆ 5ಕ್ಕೆ ನುರಿತ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ಮಹಿಳೆಯ ಆರೋಗ್ಯ ಚೆನ್ನಾಗಿದೆ. ಗಂಡು ಮಗು ಹುಟ್ಟಿದ್ದು 2.8ಕೆಜಿ ತೂಕವಿದ್ದು ಆರೋಗ್ಯವಾಗಿದೆ.
ಇವರ ಪತಿ ಎರಡು ದಿನಗಳ ಹಿಂದೆಯೇ ಕೋವಿಡ್ ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದರು.ಈ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಇದ್ದರೂ ಸಹ ಯಾವುದೇ ರೀತಿಯ ಸೋಂಕಿನ ಲಕ್ಷಣಗಳು ಇಲ್ಲ. ಈ ಮಹಿಳೆಗೆ ಇದು ಮೂರನೇ ಮಗು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ತಿಳಿಸಿದ್ದಾರೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಕೋರೊನಾ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿದ್ದ ರಾಯದುರ್ಗದ 28ವಯಸ್ಸಿನ ಪಿ-7094 ಯುವತಿಯ ಸಾಮಾನ್ಯ ಹೆರಿಯಾಗಿದ್ದು,ತಾಯಿ ಆರೋಗ್ಯವಾಗಿದ್ದಾಳೆ. ಗಂಡು ಮಗು ಹುಟ್ಟಿದ್ದು,3.2ಕೆಜಿ ತೂಕವಿದೆ. ಈ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಇದ್ದರೂ ಸಹ ಯಾವುದೇ ರೀತಿಯ ಸೋಂಕಿನ ಲಕ್ಷಣಗಳು ಇಲ್ಲ. ಈ ಮಹಿಳೆಗೂ ಸಹ ಇದು ಮೂರನೇ ಮಗು.
ಇವರ ಪತಿಯಿಂದ ಈ ಮಹಿಳೆಗೆ ಸೊಂಕು ಹರಡಿದ ಹಿನ್ನೆಲೆಯಿದ್ದು, ಅವರು ಸಹ ಕೆಲದಿನಗಳ ಹಿಂದೆ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಮಕ್ಕಳ ಆರೋಗ್ಯ ನೋಡಿಕೊಂಡು ಸ್ವ್ಯಾಬ್ ಟೆಸ್ಟ್ ಮಾಡಿಸುವುದಕ್ಕೆ ಸಂಬಂಧಿಸಿದಂತೆ ಸಮಿತಿ ನಿರ್ಣಯದ ಅನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಇನ್ನೂ 8ಜನ ಗರ್ಭಿಣಿ ಸೊಂಕಿತ ಮಹಿಳೆಯರಿದ್ದು,ಅವರ ಮೇಲೂ ವಿಶೇಷ ನಿಗಾವಹಿಸಲಾಗಿದೆ.
ನುರಿತ ತಜ್ಞ ವೈದ್ಯರಾದ ಡಾ.ಸುಯಗ್ನ ಜೋಶಿ,ಡಾ.ವಿಜಯಲಕ್ಷ್ಮೀ,ಡಾ.ಸರಸ್ವತಿ,ಡಾ.ರಾಜೇಶ್ವರಿ, ಡಾ.ಮಲ್ಲಣ್ಣ,ಡಾ.ಸತೀಶ್,ಡಾ.ಭಾಸ್ಕರ್, ಡಾ.ನಿತೀಶ್,ಡಾ.ವೀರಶಂಕರ್, ಡಾ.ಸುನೀಲ್,ಡಾ.ಜಯಲಕ್ಷ್ಮಿ ,ಡಾ.ಸಂಪತ್‌ ಹಾಗೂ ಒಟಿ ವಿಭಾಗದ ಸಿಬ್ಬಂದಿಗಳು ಈ ಹೆರಿಗೆ ಮಾಡಿಸುವ ಕಾರ್ಯದಲ್ಲಿ ಭಾಗಿಯಾಗಿದ್ದರು.
--

 

 

Read These Next

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟ; ಬಾಲಕಿಯರೇ ಮೇಲುಗೈ; ಶೇ.73.40ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ರಾಜ್ಯಾದ್ಯಂತ 2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.73.40ರಷ್ಟು ಉತ್ತೀರ್ಣತೆ ದಾಖಲಾಗಿದೆ. ...

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟ; 76.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ

ಈ ವರ್ಷದ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ 94 ರಷ್ಟು ಪ್ರಥಮ ಹಾಗೂ ದಕ್ಷಿಣ ಕಾಂಡ ಶೇ 92.12 ರಷ್ಟು ಫಲಿತಾಂಶದೊಂದಿಗೆ ದ್ವಿತೀಯ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...