ಹೆಬ್ಬಾರ ಲೆಕ್ಕಾಚಾರ ಬುಡಮೇಲಾಗಿದೆ ಭೀಮಣ್ಣ ಗೆಲವು ಖಚಿತ ಪ್ರಮೋದ ಮಧ್ವರಾಜ

Source: S O News service | By I.G. Bhatkali | Published on 2nd December 2019, 3:08 PM | Coastal News |

ಮುಂಡಗೋಡ : ಬಿಜೆಪಿ ಯ ಅಭ್ಯರ್ಥಿ ಶಿವರಾಮ ಹೆಬ್ಬಾರ  ಹೇಳುತ್ತಿದ್ದರು ಒನ್ ಸೈಡ್  ಚುನಾವಣೆ ಎಂದು ಆದರೆ ಯಲ್ಲಾಪುರ ಕ್ಷೇತ್ರದ ಚುನಾವಣೆ ಚಿತ್ರಣ ಬದಲಾಗಿದ್ದರಿಂದ ಹೆಬ್ಬಾರ ಲೆಕ್ಕಾಚಾರ ತಲೆಕೆಳಗಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯಕ್ ಗೆಲ್ಲುವುದು ಖಚಿತ ಎಂದು ಮುಂಡಗೋಡ ತಾಲೂಕ ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ಸಚಿವ ಪ್ರಮೋದ ಮಧ್ವರಾಜ ಹೇಳಿದರು

ಅವರು ಭಾನುವಾರ  ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು 

ತಮ್ಮ ಜತೆ ಕಾಂಗ್ರೆಸ್‍ನವರೆಲ್ಲ ಬರುತ್ತಾರೆ ಎಂಬ ಹೆಬ್ಬಾರ  ನಿರೀಕ್ಷೆಯು ಸುಳ್ಳಾಗಿದೆ ಕೆಲ ಧುರಿಣರು ಅವರ ಜತೆ ಹೋಗಿದ್ದಾರೆ. ಪಕ್ಷದ ಆಸ್ತಿಯಾಗಿರುವ ಕಾರ್ಯಕರ್ತರು ಯಾರೂ ಹೋಗಿಲ್ಲಾ ಪಕ್ಷದ ಬೆನ್ನಲುಬಾದ ಕಾರ್ಯಕರ್ತರು ಪಕ್ಷಕ್ಕೆ  ದ್ರೋಹ ಮಾಡಿದ ಶಿವರಾಮ ಹೆಬ್ಬಾರ ವಿರುದ್ದ  ಸೇಡು ತೀರಿಸಿಕೊಳ್ಳುವ ದೃಷ್ಠಿಯಿಂದ ಕೆಲಸ ಮಾಡುತ್ತಿದ್ದಾರೆ. ಹೆಬ್ಬಾರ ಅವರ ಫಲಿತಾಂಶದ ಅಂತಿಮ ಲೆಕ್ಕಾಚಾರ ಕೂಡ ಬುಡಮೇಲಾಗಲಿದೆ ಎಂದರು
ಕ್ಷೇತ್ರದ ಜನರು ಪ್ರವಾಹ ಬಂದಾಗ ಕಷ್ಟ ಅನುಭವಿಸುತ್ತಿದ್ದರು ಹೆಬ್ಬಾರ  ಜನರ ಸಹಾಯಕ್ಕೆ ಬರದೇ ಮುಂಬೈ ಐಶಾರಾಮಿ ಹೋಟಲ್‍ನಲ್ಲಿ ತಮ್ಮ ಸ್ವಾರ್ಥ ಲಾಭಕ್ಕಾಗಿ ಉಳಿದುಕೊಂಡಿದ್ದು ಜನ ಹತ್ತಿರದಿಂದ ಗಮನಿಸಿದ್ದಾರೆ. ಪಕ್ಷಾಂತರಿಗಳಿಗೆ ಸೋಲಿಸಬೇಕು ಎಂಬ ನಿರ್ಧಾರಕ್ಕೆ ಮತದಾರರು  ಬಂದಿದ್ದಾರೆ. ಈಗ ಅವರು ಯಾವುದೇ ಮಸಲತ್ತು ಮಾಡಿದರೂ ನಡೆಯುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಸರಳ ಸಜ್ಜನ ಹಾಗೂ ನಿಷ್ಠಾವಂತ ವ್ಯಕ್ತಿ ಎಂಬ ಭಾವನೆ ಜನರರಲ್ಲಿ ಬಂದಿದೆ. ಹಾಗಾಗಿ ಭೀಮಣ್ಣ ನಾಯ್ಕ ಗೆಲವು ಖಚಿತ ಎಂದು ಹೇಳಿದರು
 
ಯಲ್ಲಾಪುರ ಕ್ಷೇತ್ರದ ವಿಕ್ಷಕ ವೆಂಕಟೇಶ ಹೆಗಡೆ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗಣ್ಣವವರ, ಜಿ.ಪಂ ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ, ತಾಲೂಕಾ ಕಾರ್ಯದರ್ಶಿ ಧರ್ಮರಾಜ ನಡೆಗೆರ, ಧುರಿಣ ವಾದಿರಾಜ, ಧಾರವಾಡ ಜಿಪಂ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ, ಕಲಘಟಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಂಜುನಾಥ ಮರಕಳ್ಳಿ, ಹನಮಂತ ಅಸ್ತಕಟ್ಟಿ ಸೇರಿದಂತೆ ಮುಂತಾದವರು ಇದ್ದರು
 

Read These Next

ಐಸಿಎಸ್‍ಇ 10ನೇತರಗತಿ ಫಲಿತಾಂಶ; ನ್ಯೂ ಶಮ್ಸ್ ಸ್ಕೂಲ್‍ಗೆ ಸತತ ನಾಲ್ಕನೇ ವರ್ಷವೂ ಶೇ.100 ಫಲಿತಾಂಶ

ಭಟ್ಕಳ: ಇಲ್ಲಿನ ಪ್ರತಿಷ್ಠಿತ ತರಬಿಯತ್ ಎಜ್ಯುಕೇಶನ್ ಸೂಸೈಟಿಯಿಂದ ನಡೆಸಲ್ಪಸಡುವ ನ್ಯೂ ಶಮ್ಸ್ ಸ್ಕೂಲ್ (ಐಸಿಎಸ್‍ಇ ಪಠ್ಯಕ್ರಮ)ದ ...