ಪುಲ್ವಾಮ ದಾಳಿ ಹುತಾತ್ಮ ಯೋಧನ ಪತ್ನಿ ಸೇನೆಗೆ ಸೇರ್ಪಡೆ: ಹೆಗಲಿಗೆ ಸ್ಟಾರ್ ಹಾಕಿದ ಲೆಫ್ಟಿನೆಂಟ್ ಜನರಲ್ ವೈ.ಕೆ. ಜೋಶಿ

Source: PTI | Published on 29th May 2021, 7:51 PM | National News |

ಜಮ್ಮು: 2019 ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಪತ್ನಿ ಸೇನೆ ಸೇರಿ ತಮ್ಮ ಪತಿಯ ಹಾದಿಯಲ್ಲೇ ನಡೆದಿದ್ದಾರೆ.

ನಿಖಿತಾ ಕೌಲ್ ಶನಿವಾರ ಸೇನಾ ಸಮವಸ್ತ್ರ ಧರಿಸಿ ಸೇನೆಗೆ ಸೇರ್ಪಡೆಯಾಗಿದ್ದಾರೆ. ತಮಿಳುನಾಡಿನ ಚೆನ್ನೈ ಆಫೀಸರ್ಸ್ ತರಬೇತಿ ಅಕಾಡೆಮಿಯಲ್ಲಿ ಲೆಫ್ಟಿನೆಂಟ್ ಜನರಲ್ ವೈಕೆ ಜೋಶಿ ಆಕೆಯ ಹೆಗಲಿಗೆ ಸ್ಟಾರ್ ನೀಡಿದ್ದಾರೆ.

ಈ ಸಂಬಂಧ ಉಧಂಪುರ  ರಕ್ಷಣಾ ಇಲಾಖೆ ಪಿಆರ್ ಒ ಅಧಿಕೃತ ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೇಜರ್ ದೌಂಡಿಯಾಲ್ ಹುತಾತ್ಮರಾಗಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅವರಿಗೆ ಶೌರ್ಯ ಚಕ್ರ ನೀಡಲಾಗಿತ್ತು.

ಸೈನಿಕ ಇಲ್ಲ ಎಂದ ಕೂಡಲೇ ಸೇನೆಯೂ ಅವರ ಕುಟುಂಬವನ್ನು ಬಿಟ್ಟುಬಿಡುವುದಿಲ್ಲ, ನಮ್ಮ ಸಹೋದರನ್ನು ಮದುವೆಯಾದ ವೀರನಾರಿ ಈಗ ಸೇನೆಯ ಸಮವಸ್ತ್ರ ಧರಿಸಿ ದೇಶ ಕಾಯಲು ನಿಂತಿದ್ದಾರೆ. ಅವರಿಗೆ ನಮ್ಮ ಬೆಂಬಲ ಮತ್ತು ಪ್ರೋತ್ಸಾಹ ಸದಾ ಇರುತ್ತದೆ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಇನ್ನೂ ಅನೇಕರು ಕೌಲ್‌ನನ್ನು ಹೊಗಳಿದ್ದಾರೆ, ಅವರಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ, ದಿವಂಗತ ಪತಿಗೆ ಎಂತಾ ಗೌರವ. ನಿಜಕ್ಕೂ ಸ್ಪೂರ್ತಿದಾಯಕ ಕಥೆ ಎಂದು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...