ಚುನಾವಣಾ ಬಾಂಡ್ ಗಳೆಂದರೇನು?

Source: Vb | By I.G. Bhatkali | Published on 17th February 2024, 4:23 PM | National News | Don't Miss |

ಚುನಾವಣಾ ಬಾಂಡ್‌ಗಳೆಂದರೆ ನಾಗರಿಕರು ಮತ್ತು ಕಾರ್ಪೊರೇಟ್ ಕಂಪೆನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಳಸಬಹುದಾದ ಬಾಂಡ್‌ಗಳು. ಇವುಗಳನ್ನು ನಾಗರಿಕರು ಮತ್ತು ಕಂಪೆನಿಗಳು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ನ ಶಾಖೆಗಳಿಂದ ಖರೀದಿಸಿ ತಮಗೆ ಬೇಕಾದ ಪಕ್ಷಗಳಿಗೆ ನೀಡಬಹುದಾಗಿದೆ. ಹೀಗೆ ಸ್ವೀಕರಿಸುವ ಬಾಂಡ್‌ಗಳನ್ನು ರಾಜಕೀಯ ಪಕ್ಷಗಳು ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗಳಿಗೆ ನೀಡಿ ನಗದೀಕರಿಸಬಹುದಾಗಿದೆ.

ಈ ಯೋಜನೆಯನ್ನು ಕೇಂದ್ರದ ಭಾರತೀಯ ಜನತಾ ಪಕ್ಷ ಸರಕಾರವು 2018 ಜನವರಿಯಲ್ಲಿ ಪರಿಚಯಿಸಿತ್ತು.

ಚುನಾವಣಾ ಬಾಂಡ್‌ಗಳ ಖರೀದಿ ಮತ್ತು ನಗದೀಕರಣಗಳ ಇಡೀ ಪ್ರಕ್ರಿಯೆಯು ಅನಾಮಧೇಯವಾಗಿ ನಡೆಯುತ್ತದೆ. ಈ ಬಡ್ಡಿರಹಿತ ಬಾಂಡ್‌ಗಳನ್ನು ಖರೀದಿಸಿದ್ದೇವೆ ಎನ್ನುವುದನ್ನು ಖರೀದಿದಾರರು ಘೋಷಿಸಬೇಕಾಗಿಲ್ಲ ಮತ್ತು ರಾಜಕೀಯ ಪಕ್ಷಗಳು ತಮ್ಮ ಹಣದ ಮೂಲವನ್ನೂ ತೋರಿಸಬೇಕಾಗಿಲ್ಲ. ಚುನಾವಣಾ ಬಾಂಡ್‌ಗಳ ಮೂಲಕ ಸ್ವೀಕರಿಸಲಾಗಿರುವ ಒಟ್ಟು ಮೊತ್ತವನ್ನಷ್ಟೇ ಲೆಕ್ಕ ಪರಿಶೋಧನೆಗೆ ಒಳಗಾದ ಬ್ಯಾಂಕ್ ಹೇಳಿಕೆಗಳ ಮೂಲಕ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಬಹಿರಂಗಪಡಿಸಿದರೆ ಸಾಕಾಗುತ್ತದೆ.

ಆದರೆ, ಚುನಾವಣಾ ಬಾಂಡ್‌ಗಳ ದೇಣಿಗೆದಾರರ ವಿವರಗಳನ್ನು ಕೇಂದ್ರ ಸರಕಾರ ಪಡೆಯಬಹುದಾಗಿದೆ. ಯಾಕೆಂದರೆ, ಭಾರತೀಯ ಸ್ಟೇಟ್ ಬ್ಯಾಂಕ್ ಅದರ ಒಡೆತನಕ್ಕೆ ಒಳಪಟ್ಟಿದೆ.

Read These Next

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ರಾಜ್ಯಸಭಾ ಸಂಸದ ಸೀತಾರಾಂ ಯೆಚೂರಿ ನಿಧನ

72 ವರ್ಷದ ಸೀತರಾಂ ಯೆಚೂರಿ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.   ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ...

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

ಕೋಲ್ಕತಾದ ಆರ್.ಜಿ.ಕರ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ...

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಇಬ್ಬರು ವೈದ್ಯರು, ಮಾಜಿ ಬಿಜೆಪಿ ಸಂಸದೆಗೆ ಕೋಲ್ಕತಾ ಪೊಲೀಸರ ಸಮನ್ಸ್

ನಗರದ ಆರ್.ಜಿ. ಕರ್ ವೈದ್ಯಕೀಯ ಕಾಲೇಜ್;ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಕಿರಿಯ ವೈದ್ಯೆಯ ಗುರುತನ್ನು ...