ಭಟ್ಕಳ: ಗುರು ಸುಧೀಂದ್ರ ಕಾಲೇಜಿನಲ್ಲಿ ನೂತನ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 'ಸ್ವಾಗತ ಕಾರ್ಯಕ್ರಮ

Source: Press release | By I.G. Bhatkali | Published on 26th November 2022, 6:12 PM | Coastal News |

ಭಟ್ಕಳ: ಭಟ್ಕಳ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ 2022-23 ನೇ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ 'ಸ್ವಾಗತ ಕಾರ್ಯಕ್ರಮವು' ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉತ್ತಮ ಉಪನ್ಯಾಸಕ ರಾಜ್ಯ ಪ್ರಶಸ್ತಿ ವಿಜೇತ ಬೈಂದೂರು ಸರ್ಕಾರಿ ಪಿ.ಯು ಕಾಲೇಜಿನ ಗಣಿತ ಉಪನ್ಯಾಸಕರಾದ ಶ್ರೀ ಉದಯಕುಮಾರ ಎಂ.ಪಿ ಕಾರ್ಯಕ್ರಮ ಉದ್ಘಾಟಿಸಿ 'ನಿರಂತರ ಪ್ರಯತ್ನ ಯಶಸ್ಸಿಗೆ ಕಾರಣ - ವಿದ್ಯಾರ್ಥಿಗಳು ತಮ್ಮೆದುರಿಗಿರುವ ಸಮಸ್ಯೆಯನ್ನೇ ಅವಕಾಶವಾಗಿ ಮಾರ್ಪಡಿಸಿಕೊಳ್ಳಬೇಕು' ಎಂದು ಕಿವಿ ಮಾತು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ಉಡುಪಿ ಜಿಲ್ಲೆಯ ಗಂಗೊಳ್ಳಿಯ ನಿನಾದ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು, ಸಮಾಜ ಸೇವಕರಾದ ಶ್ರೀ ಎಂ.ಮುಕುಂದ ಪೈ ಮಾತನಾಡಿ 'ನೈತಿಕತೆಯನ್ನು ಪಾಲಿಸಿ ಉತ್ತಮ ಪ್ರಜೆಗಳಾಗಿರಿ ಆಗಲೇ ಸಂವಿಧಾನ ದಿನದ ಈ ಆಚರಣೆಯು ಅರ್ಥಪೂರ್ಣ ವೆನಿಸಿವುದು' ಎಂದು ಸೂಚಿಸಿದರು.

ಭಾರತೀಯ ಸಂವಿಧಾನ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ "ಸಂವಿಧಾನ ಓದು" ಪುಸ್ತಕವನ್ನು ಪರಿಚಯಿಸುವದರೊಂದಿಗೆ ಮಾತನಾಡಿದ ಕನ್ನಡ ರಂಗಭೂಮಿಯ ಕಿರುತೆರೆ, ಚಿತ್ರರಂಗ ಕಲಾವಿದರು, ಕಾಂತಾರ ಚಿತ್ರದ ಸಹನಟರು ಆದ ಶ್ರೀ ಯೋಗಿ ಬಂಕೇಶ್ವರ ರವರು ವಿದ್ಯಾರ್ಥಿಗಳಿಗೆ ಕಾಲೇಜು ಎನ್ನುವುದು ಜ್ಞಾನ ದೇಗುಲ, ಅಧ್ಯಯನದೊಂದಿಗೆ  ಕೌಶಲ್ಯವಂತರಾಗಲು ತಿಳಿಸಿದರು.

ಟ್ರಸ್ಟಿ ಮ್ಯಾನೇಜರ ರಾಜೇಶ ನಾಯಕ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಪಾಲಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ'ನ ಅಧ್ಯಕ್ಷ ಡಾ. ಸುರೇಶ ನಾಯಕ್ 'ವಿದ್ಯಾರ್ಥಿಗಳು ಪದವಿಯ ಮೂರು ವರ್ಷಗಳನ್ನು ಸೂಕ್ತವಾಗಿ ಉಪಯೋಗಿಸಿ, ಉನ್ನತ ಹುದ್ದೆಯನ್ನೇರಬೇಕು' ಎಂದು ಹೇಳಿದರು.

2021-22ನೇ ಸಾಲಿನ ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರಾಂಶುಪಾಲರಾದ ಶ್ರೀನಾಥ ಪೈ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳನ್ನು  ಉಪಪ್ರಾಂಶುಪಾಲರಾದ ವಿಶ್ವನಾಥ ಭಟ್ಟ, ವಿಖ್ಯಾತ ಪ್ರಭು, ಉಪನ್ಯಾಸಕರಾದ ಆನಂದ ದೇವಾಡಿಗ ಪರಿಚಯಿಸಿದರೆ, ಬಿ.ಕಾಂ ವಿಭಾಗದ ಉಪಪ್ರಾಂಶುಪಾಲ ಪಿ.ಎಸ್. ಹೆಬ್ಬಾರ್ ಭಾರತೀಯ ಸಂವಿಧಾನ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಉಪನ್ಯಾಸಕಿ ದೀಪಾ ನಾಯ್ಕ ಸ್ವಾಗತಿಸಿದರು, ಉಪನ್ಯಾಸಕರಾದ ಸುಬ್ರಮಣ್ಯ ನಾಯ್ಕ  ವಂದಿಸಿದರು. ವಿದ್ಯಾರ್ಥಿಗಳಾದ ಲೆಥೇಸಿಯಾ ಹಾಗೂ ನೂತನ ನಾಯ್ಕ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರಗಿದವು.                       

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...