ಮೌಲಾನ ಸಯ್ಯದ ಹಸನ ಅಸ್ಕರಿಮಿಯಾ ಆಶ್ರಫಿ ಮುಂಡಗೋಡಗೆ ಭೇಟಿ

Source: sonews | By Staff Correspondent | Published on 29th November 2019, 5:50 PM | Coastal News |

ಮುಂಡಗೋಡ :  ಹುಬ್ಬಳ್ಳಿ ಸೇರಿದಂತೆ ಭಾರತದ ತುಂಬೆಲ್ಲಾ ಇರುವ ಮದನಿಮಿಯಾ ಮದರಸಾಗಳ ಮುಖ್ಯಸ್ಥರಾದ ಉತ್ತರಪ್ರದೇಶ ಕಚವೇಶಾ ಶರೀಫ ದ ಮೌಲಾನ ಸಯ್ಯದ ಹಸನ ಅಸ್ಕರಿಮಿಯಾ ಆಶ್ರಫಿ ಅವರ ಅನುಯಾಯಿಗಳ ಕರೆ ಮೆರೆಗೆ ಮುಂಡಗೋಡಗೆ ಭೇಟಿನೀಡಿದರು.

ಅವರು ಮುಂಡಗೋಡ ಗೆ ಆಗಮಿಸುತ್ತಿದ್ದಂತೆ ಮೊಹದ್ದೇಸೆ ಆಝಾಮ್ ಏ ಕಮಿಟಿಯ ಅಧ್ಯಕ್ಷ ಮೌಲಾಲಿ ಹರಕೋಣಿ, ಕಾರ್ಯದರ್ಶಿ ಮುಸ್ತಾಕ ನೇರ್ತಿ,  ಮಹ್ಮದಗೌಸ ಅತ್ತಾರ, ಮಹಬೂಬಖಾನ ಪಠಾಣ ನೂರಹ್ಮದ ಗಡವಾಲೆ ಮಕ್ಬೂಲ್ ಮಿರ್ಚೋನಿ ಮುಂತಾದವರು ಅವರನ್ನು ಹೂಮಾಲೆ ಹಾಕಿ ಸ್ವಾಗತಿಸಿಕೊಂಡರು. ಅವರು ಬರುತ್ತಿರುವ ಪ್ರಯುಕ್ತ ಪಟ್ಟಣದ ನೂರಾನಿ ಮಸೀದಿಯನ್ನು ಶ್ರಂಗರಿಸಲಾಗಿತ್ತು ಸಂಜೆಯ(ಮಗರೀಬ) ನಮಾಜನ್ನು ಮೌಲಾನ ಸಯ್ಯದ ಹಸನ ಅಸ್ಕ್ರೀಮಿಯಾ ಆಶ್ರಫಿ ಇಮಾಮತಿನಲ್ಲಿ ನಡೆಯಿತು ನಂತರ ಆಶೀರ್ವಚನ ನೀಡಿದ ಅವರು ಮುಸ್ಲೀಂ ಬಾಂದವರು 5 ಹೊತ್ತಿನ ನಮಾಜನ್ನು ಮಾಡಬೇಕು.  ಮಹ್ಮದ ಪೈಗಂಬರ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಗರ್ವವನ್ನು ಬಿಡಬೇಕು ಯಾವುತ್ತು ಮಾನವಿತೆ ಮರೆಯಬಾರದು  ಆಗ ಅಲ್ಹಾ(ದೇವರು) ಖುಷಿಯಾಗುತ್ತಾನೆ. ಅಲ್ಹಾನ ದೃಷ್ಠಿಯಲ್ಲಿ ಎಲ್ಲರೂ ಸಮಾನರು ಬಡವರಿಗೆ ಸಹಾಯ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು. ನಂತರ ಅವರ ಅನುಯಾಯಿಗಳ ಮನೆಗಳಿಗೆ ಭೇಟಿನೀಡಿ ರಾತ್ರಿ ಊಟವನ್ನು ಮೌಲಾಲಿ ಹರಕೋಣಿ ಮನೆಯಲ್ಲಿ ಸೇವಿಸಿ ಪ್ರಯಾಣ ಬೆಳಸಿದರು.

ನೂರಾನಿ ಮಸ್ಜೀದ ಅಧ್ಯಕ್ಷ ಮಹ್ಮದಸಲೀಂ ನಂದಿಗಟ್ಟಿ,  ಗೌಸಮೋದ್ದಿನ ಬೆಂಡಿಗೇರಿ, ಸೇಕ್ರೇಟರಿ ಅನ್ವರಖಾನ ಪಠಾಣ ನೂರಬೇಗ್,ಅಲೆಮುಸ್ತಫಾ ಬೇಂಡಿಗೇರಿ, ಮೋದಿನಖಾನ ಪಠಾಣ, ನಜೀರಹ್ಮದ ದರ್ಗಾವಾಲೆ, ಮಕ್ತುಂಸಾಬ ಅಂಟಾಳ ಸೇರಿದಂತೆ ಪಟ್ಟಣದ ಐದು ಮಸೀದಿಗಳ ಮುಸ್ಲೀಂಬಾಂದವರು ಉಪಸ್ಥಿತರಿದ್ದರು
 

Read These Next