ಇನ್ನಷ್ಟು ಬಿಜೆಪಿ ನಾಯಕರಿಗೆ ಎಸ್‌ಪಿ ಸೇರಲು ಅವಕಾಶವಿಲ್ಲ; ಅಖಿಲೇಶ್ ಯಾದವ್

Source: S O News | By I.G. Bhatkali | Published on 16th January 2022, 1:08 PM | National News |

ಲಕ್ನೋ: ಮುಂಬರುವ ಉ.ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಯೋಗಿ ಆದಿತ್ಯನಾಥ್ ಸಂಪುಟವನ್ನು ತೊರೆದ ಇಬ್ಬರು ಸಚಿವರು ಸೇರಿದಂತೆ ಏಳು ಮಾಜಿ ಶಾಸಕರನ್ನು ಶುಕ್ರವಾರ ಪಕ್ಷಕ್ಕೆ ಸ್ವಾಗತಿಸಿದ್ದ ಸಮಾಜವಾದಿ ಪಕ್ಷ (ಎಸ್‌ಪಿ)ದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ತನ್ನ ಪಕ್ಷದಲ್ಲಿ ಯಾವುದೇ ಬಿಜೆಪಿ ಶಾಸಕ, ಸಚಿವರಿಗೆ ಇನ್ನು ಮುಂದೆ ಜಾಗವಿಲ್ಲ ಎಂದು ಶನಿವಾರ ಇಲ್ಲಿ ಹೇಳಿದ್ದಾರೆ.

ನಾನು ಇನ್ನಷ್ಟು ಬಿಜೆಪಿ ಶಾಸಕರು ಅಥವಾ ಸಚಿವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಅಖಿಲೇಶ್ ಸುದ್ದಿಗಾರರಿಗೆ ತಿಳಿಸಿದರು.

ಅಖಿಲೇಶ್ ಶುಕ್ರವಾರ ಇಬ್ಬರು ಮಾಜಿ ಸಚಿವರು ಮತ್ತು ಪ್ರಮುಖ ಒಬಿಸಿ ನಾಯಕರಾದ ಸ್ವಾಮಿಪ್ರಸಾದ್ ಮೌರ್ಯ ಮತ್ತು ಧರಮ್ ಸಿಂಗ್ ಸೈನಿ ಹಾಗೂ ಐವರು ಇತರ ಬಿಜೆಪಿ ಶಾಸಕರು ಮತ್ತು ಬಿಜೆಪಿಯ ಮಿತ್ರಪ್ಪ ಅಪ್ಪಾ ದಳದ ಓರ್ವ ಶಾಸಕರನ್ನು ಪಕ್ಕಕ್ಕೆ ಸೇರಿಸಿಕೊಂಡಿದ್ದರು.

ಈ ವಾರದಲ್ಲಿ ಕೇವಲ 72 ಗಂಟೆಗಳ ಅವಧಿಯಲ್ಲಿ ಬಿಜೆಪಿ ಮತ್ತು ಆದಿತ್ಯನಾಥ್ ಸರಕಾರದಿಂದ ನಿರ್ಗಮಿಸಿರುವ ಒಬಿಸಿ  ನಾಯಕರ ದಂಡು ಮತ್ತೆ ಅಧಿಕಾರಕ್ಕೇರುವ ಬಿಜೆಪಿಯ ಪ್ರಯತ್ನಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ಪರಿಗಣಿಸಲಾಗುತ್ತಿದೆ.

ಮೌರ್ಯ ಮತ್ತು ಸೈನಿ ಜೊತೆಗೆ ಐವರು ಬಿಜೆಪಿ ಶಾಸಕರಾದ ರೋಶನಲಾಲ್ ವರ್ಮಾ, ಬೃಜೇಶ್ ಪ್ರಜಾಪತಿ, ಮುಕೇಶ್ ವರ್ಮಾ, ವಿನಯ ಶಾಕ್ಯ ಮತ್ತು ಭಗವತಿ ಸಾಗರ್ ಅವರೂ ಶುಕ್ರವಾರ ಎಸ್‌ಪಿಗೆ ಸೇರ್ಪಡೆಗೊಂಡಿದ್ದಾರೆ. ಅಪ್ಪಾ ದಳದ ಶಾಸಕ ಚೌಧರಿ ಅಮರ್ ಸಿಂಗ್ ಕೂಡ ಎಸ್‌ಪಿ ಸೇರಿದ್ದಾರೆ.

ಬಿಜೆಪಿಯನ್ನು ತೊರೆದಿರುವ ಮೂರನೇ ಸಚಿವ ದಾರಾ ಸಿಂಗ್ ಚೌಹಾಣ್ ಅವರೂ ಶೀಘ್ರವೇ ಎಸ್‌ಪಿಗೆ ಸೇರಲಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಬೆಳಗ್ಗೆ ತನ್ನ ಆಝಾದ್ ಸಮಾಜ್ ಪಾರ್ಟಿ ಮತ್ತು ಎಸ್‌ಪಿ ನಡುವಿನ ಸ್ಥಾನ ಹೊಂದಾಣಿಕೆ  ಮಾತುಕತೆಗಳು ವಿಫಲಗೊಂಡಿವೆ ಎಂದು ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಅಖಿಲೇಶ್‌ರ ಈ ಘೋಷಣೆ ಹೊರಬಿದ್ದಿದೆ.

“ನಾವು ಇನ್ನು ಮುಂದೆ ಯಾವುದೇ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಜನರನ್ನು ಒಟ್ಟುಗೂಡಿಸಲು ನಾವು ಬಹಳಷ್ಟು ತ್ಯಾಗ ಮಾಡಿದ್ದೇವೆ, ಆದರೆ ಈಗ ಬೇರೆ ಯಾರನ್ನೂ ಸೇರಿಸಿಕೊಳ್ಳಲು ಅವಕಾಶವಿಲ್ಲ ಎಂದು ಅಖಿಲೇಶ್ ಹೇಳಿದರು.

ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಅಖಿಲೇಶ್ ಬಿಜೆಪಿಯನ್ನು ಸೋಲಿಸಲು ಯಾದವೇತರ ಒಬಿಸಿ ಸಮುದಾಯಗಳ ಮೇಲೆ ಪ್ರಭಾವ ಹೊಂದಿರುವ ಪಕ್ಷಗಳು ಸೇರಿದಂತೆ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟವನ್ನು ರಚಿಸಿಕೊಂಡಿದ್ದಾರೆ.

Read These Next

ಹೈದರಾಬಾದ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣ; ಆರೋಪಿಗಳ ಎನ್‌ಕೌಂಟರ್‌ ನಕಲಿ. ಸುಪ್ರೀಂ ಕೋರ್ಟ್ ನೇಮಿತ ಆಯೋಗ

ದಿಶಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಸಾವಿನ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನಿಂದ ...

ಶಾಲಾ ಪಠ್ಯ ಪುಸ್ತಕಗಳು ಆರೆಸಸ್ ಮಯ; ಕೇಜ್ರಿವಾಲ್, ಭಗವಂತ್ ಮಾನ್ ಸಹಿತ ಹಲವು ಮುಖಂಡರಿಂದ ಆಕ್ರೋಶ

ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ರಂತಹ ರಾಷ್ಟ್ರ ಪ್ರೇಮಿಗಳ ಅಧ್ಯಾಯಗಳನ್ನು ಕಿತ್ತು ಹಾಕಿ, ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವೂ ...

ದೇಶದ್ರೋಹ ಕಾನೂನಿಗೆ ತಡೆ; ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪು; ಪುನರ್‌ಪರಿಶೀಲನೆ ಪೂರ್ಣಗೊಳ್ಳುವವರೆಗೆ ವಿರಾಮ

ಸರಕಾರದಿಂದ ದೇಶದ್ರೋಹ ಕಾನೂನಿನ ಪುನರ್‌ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಈ ವಿವಾದಾತ್ಮಕ ಕಾನೂನಿನಿಂದ ಕೇಂದ್ರ ಮತ್ತು ರಾಜ್ಯ ...