ದಾಖಲೆ‌ ಇಲ್ಲದೇ 14 ಲಕ್ಷಕ್ಕೂ ಅಧಿಕ ಹಣ ಸಾಗಾಟ: ಅಕ್ರಮ ಹಣದೊಂದಿಗೆ ಮೂವರು ಪೋಲಿಸ್ ವಶಕ್ಕೆ

Source: so news | By MV Bhatkal | Published on 31st March 2023, 11:56 PM | Coastal News | Don't Miss |

ಭಟ್ಕಳ: ದಾಖಲೆ‌ ಇಲ್ಲದೇ ಲಕ್ಷಾಂತರ ಮೌಲ್ಯದ ಅಕ್ರಮ ಹಣವನ್ನು ಕಾರಿನಲ್ಲಿ ಸಾಗಿಸುವ ವೇಳೆ ತಾಲೂಕಿನ ಸರ್ಪನಕಟ್ಟೆ ಪೋಲಿಸ್ ಚೆಕ್ ಪೋಸ್ಟ ಬಳಿ ತಪಾಸಣೆ ವೇಳೆ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಶುಕ್ರವಾರದಂದು ವರದಿಯಾಗಿದೆ.

ಯಶ್ವಂತ ಸುಕ್ರ ಗೊಂಡ ಕಟಗಾರಕೊಪ್ಪ  ಭಟ್ಕಳ, ಶ್ರೀನಿವಾಸ ನಾರಾಯಣ ಗೌಡ ಗುಣವಂತೆ ಹೊನ್ನಾವರ, ರಘು ಅನಂತ ನಾಯ್ಕ ಈ ಮೂವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡವರು ಎಂದು ತಿಳಿದು ಬಂದಿದೆ. 
ಶುಕ್ರವಾರದಂದು ನಗರ ಠಾಣೆಯ ಪಿಎಸ್ಐ ಸಂತೋಷ ಹಾಗೂ ಸಿಬ್ಬಂದಿಗಳು ಸರ್ಪನಕಟ್ಟೆ ಪೋಲಿಸ್ ಚೆಕ್ ಪೋಸ್ಟ್ ಬಳಿ  ತಪಾಸಣೆಗೆ ನಿಂತ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಭಟ್ಕಳ ಕಡೆಗೆ ಇಕೋ ಕಾರನಲ್ಲಿ ರೂ. 14,90,125 ಲಕ್ಷ  ಮೊತ್ತದ ಯಾವುದೇ ದಾಖಲೆ ಹಣವನ್ನು ಸಾಗಿಸುತ್ತಿದ್ದರು. ಈ ವೇಳೆ ತಪಾಸಣೆಯ ಮಾಡಿದಾಗ ಮೂವರು ಆರೋಪಿಗಳು ಹಣವನ್ನು  
ಮುರುುಡೇಶ್ವರದ ಕಡೆಗೆ ಸಾಗಿಸುತ್ತಿರುವುದಾಗಿ ಪೋಲಿಸರಲ್ಲಿ ತಿಳಿಸಿದ್ದಾರೆ. 

ಮೂವರು ಆರೋಪಿಗಳೊಂದಿಗೆ, ಹಣ ಹಾಗೂ ಕಾರನ್ನು ವಶಕ್ಕೆ ಪಡೆದ ನಗರ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು  ಪಿಎಸ್ಐ ಯಲ್ಲಪ್ಪ ತನಿಖೆ ಕೈಗೊಂಡಿದ್ದಾರೆ.

Read These Next

ಎರಡು ವರ್ಷಗಳಿಂದ ಮೃತ ಮೀನುಗಾರ ಕುಟುಂಬಕ್ಕೆ ಪರಿಹಾರವಿಲ್ಲ. ಅಧಿಕಾರಿಗಳ ಉತ್ತರಕ್ಕೆ ಸಚಿವ ಮಂಕಾಳ ವೈದ್ಯ ಅಸಮಧಾನ.

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಮೃತಪಟ್ಟಿರುವ 40 ಮೀನುಗಾರ ಕುಟುಂಬಕ್ಕೆ ಸಂಕಷ್ಟ ಪರಿಹಾರ ನಿಧಿಯಿಂದ ...

ಪಕ್ಷದ ಕಾರ್ಯಕರ್ತರ ಹಿತಕಾಪಾಡಲು ಕುಮಟಾ ಕ್ಷೇತ್ರದಲ್ಲೇ ವಾಸ್ತವ್ಯ: ನಿವೇದಿತ್ ಆಳ್ವಾ

ಹೊನ್ನಾವರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಹಗಲು-ರಾತ್ರಿ ಪರಿಶ್ರಮಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಿತ ...

ಉಡಾಫೆ, ಅಸಡ್ಡೆ ಮಾಡುವ ಅಧಿಕಾರಿಗಳಿಗೆ ಜಾಗ ಇಲ್ಲ. ಅಧಿಕಾರಿಗಳ ಸಭೆಯಲ್ಲಿ ಖಡಕ್ ಎಚ್ಚರಿಕೆ ನೀಡಿದ ಸಿ.ಎಂ. ಸಿದ್ದರಾಮಯ್ಯ

ದಾವಣಗೆರೆ : ಪ್ರಜಾಪ್ರಭುತ್ವದಲ್ಲಿ ಜನರೇ ಮಾಲಿಕರಾಗಿದ್ದು ಜನರ ಆಶೋತ್ತರಗಳಿಗೆ ಸ್ಪಂಧಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ...