ಕಾರವಾರ: ಸಾಂಪ್ರದಾಯಕ ಮೀನುಗಾರಿಕೆಗೆ ಅವಕಾಶ

Source: S O News Service | By I.G. Bhatkali | Published on 4th June 2019, 8:19 PM | Coastal News |

ಕಾರವಾರ: ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಸಾಂಪ್ರದಾಯಕ ಮೀನುಗಾರರಿಗೆ ತಮ್ಮ ಜೀವನೋಪಾಯಕ್ಕೆ 9.9 ಹೆಚ್.ಪಿ. ಔಟ್ ಬೋರ್ಡ ಇಂಜಿನ್ ಬಳಸಿ ಮೀನುಗಾರಿಕೆ ಮಾಡಲು ಅವಕಾಶ ನೀಡಲಾಗಿದ್ದು, ಸರ್ಕಾರದ ಆದೇಶ ಮೇರೆಗೆ ಕೇವಲ ಒಂದು ಔಟ್ ಬೋರ್ಡ್ ಇಂಜಿನ್ ಹೊಂದಿದ ಪಾತಿ ದೋಣಿಗಳಿಗೆ 5 ನಾಟಿಕಲ್ ಮೈಲ್ ಪ್ರದೇಶದೊಳಗೆ ಮಾತ್ರ ಮೀನುಗಾರಿಕೆ ಮಾಡಲು ಅನುಮತಿ ಇರುತ್ತದೆ ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೀನುಗಾರರು ತಮ್ಮ ಸುರಕ್ಷತೆಯ ಬಗ್ಗೆ ಗಮನವಿಡಬೇಕು ಈ ಅವಧಿಯಲ್ಲಿ ಮೀನಿಗೆ ಹೆಚ್ಚಿನ ಬೇಡಿಕೆ      ಇರುವುದರಿಂದ ಹೆಚ್ಚು ಮೀನು ಹಿಡಿಯಲು ಹಂಬಲಿಸಿ ಕೆಲ ಮೀನುಗಾರರು ತಮ್ಮ ಪ್ರಾಣವನ್ನು ಅಪಾಯದಲ್ಲಿಡುವ ಸಾಧ್ಯತೆಗಳಿರುತ್ತದೆ ಆದ್ದರಿಂದ, ಮೀನುಗಾರಿಕೆ ಮಾಡುವ ಪಾತಿ ದೋಣಿಗಳು ಕಡ್ಡಾಯವಾಗಿ ಪರ್ಯಾಪ್ತ ಜೀವ ರಕ್ಷಣಾ ಸಾಧನಗಳಾದ ಲೈಫ್ ಜಾಕೆಟ್ ಮತ್ತು ಲೈಫ್ ಬಾಯ್‍ಗಳನ್ನು ಹೊಂದಿರಬೇಕು ಮತ್ತು ಮೀನುಗಾರರು ಅವುಗಳನ್ನು ಬಳಸಿ ಮೀನುಗಾರಿಕೆ ಮಾಡಬೇಕೆಂದು ತಿಳಿಸಿದ್ದಾರೆ.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...