ಮುಂದುವರಿದ ಭಾರತದ ಪದಕ ಬೇಟೆ; 1 ಬೆಳ್ಳಿ, 2 ಕಂಚು

Source: VB | By I.G. Bhatkali | Published on 1st September 2021, 1:55 PM | National News | Sports News |

ಟೋಕಿಯೋ: ಹಾಲಿ ಚಾಂಪಿಯನ್ ಮಾರಿಯಪ್ಪನ್ ತಂಗವೇಲು ಹಾಗೂ ಶರದ್ ಕುಮಾರ್‌ ಮಂಗಳವಾರ ನಡೆದ ಪ್ಯಾರಾಲಿಂಪಿಕ್ಸ್‌ನ ಪುರುಷರ ಹೈಜಂಪ್ ಟಿ42 ವಿಭಾಗದ ಫೈನಲ್‌ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.

ಮಾರಿಯಪ್ಪನ್ 1.86 ಮೀ. ಎತ್ತರಕ್ಕೆ ಜಿಗಿದು 2ನೇ ಸ್ಥಾನ ಪಡೆದರೆ, ಅಮೆರಿಕದ ಸ್ಯಾಮ್ ಗ್ರೇವ್ 1.88 ಮೀ.ಎತ್ತರಕ್ಕೆ ಜಿಗಿದು ಮೊದಲ ಸ್ಥಾನ ಪಡೆದರು.

ಕುಮಾರ್ 1.83 ಮೀ. ಎತ್ತರಕ್ಕೆ ಜಿಗಿಯುವುದರೊಂದಿಗೆ ಕಂಚು ಜಯಿಸಿದರು. ತಂಗವೇಲು ಪ್ಯಾರಾಲಿಂಪಿಕ್ಸ್ ನಲ್ಲಿ 2ನೇ ಪದಕ ಜಯಿಸಿದರು. 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದರು. ಕೇವಲ 4 ವರ್ಷಗಳ ಹಿಂದೆ ಕ್ರೀಡೆಯನ್ನು ಆಯ್ದುಕೊಂಡಿರುವ ಭಾರತೀಯ ಶೂಟರ್‌ ಸಿಂಗ್‌ರಾಜ್ ಅಧಾನ ಮಂಗಳವಾರ ಪ್ಯಾರಾಲಿಂಪಿಕ್ಸ್‌ನ ಪುರುಷರ 10 ಮೀ. ಏರ್ ಪಿಸ್ತೂಲ್ ಎಸ್ಎಚ್1 ಸ್ಪರ್ಧೆಯ ಫೈನಲ್‌ನಲ್ಲಿ ಕಂಚಿನ ಪದಕ ಜಯಿಸಿದರು. ಅಧಾನ ಒಟ್ಟು 216.8 ಅಂಕ ಕಲೆಹಾಕಿ 3ನೇ ಸ್ಥಾನ ಪಡೆದರು. ಭಾರತಕ್ಕೆ ಶೂಟಿಂಗ್‌ನಲ್ಲಿ ಲಭಿಸಿರುವ 2ನೇ ಪದಕ ಇದಾಗಿದೆ. ಸೋಮವಾರ ಮಹಿಳೆಯರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಅವನಿ ಲೇಖರ ಚಿನ್ನ ಜಯಿಸಿದ್ದರು.

Read These Next

ಹುಬ್ಬಳ್ಳಿ: ಹುಬ್ಬಳ್ಳಿಯ ಚರ್ಚ್‌ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ...

ಫೇಸ್ ಕ್ರೀಂನಲ್ಲಿ 24 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಯತ್ನ: ಏರ್ ಪೋರ್ಟ್ ನಲ್ಲಿ ಆರೋಪಿ ಬಂಧನ

ಹೈದರಾಬಾದ್: ಹೈದರಾಬಾದ್ ಆರ್ ಜಿ ಐ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಫೇಸ್ ಕ್ರೀಮ್ ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ...

ಐತಿಹಾಸಿಕ ಸ್ವರ್ಣ ಗೆದ್ದ ಸುಮಿತ್, ಅವನಿ; ಭಾರತಕ್ಕೆ ಒಂದೇ ದಿನ 2 ಚಿನ್ನ ಸಹಿತ ಐದು ಪದಕ

ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ...