ಕಾರವಾರ: ಮೂರನೇ ಅಂತರಾಷ್ಟ್ರೀಯ ವೈಜ್ಞಾನಿಕ ಸಮಾವೇಶ

Source: S O News service | By I.G. Bhatkali | Published on 6th December 2023, 4:37 PM | Coastal News |

ಕಾರವಾರ: ಯುರೇಷಿಯನ್ ಅಕೆಡಮಿ ಆಫ್ ಎನ್ವಿರೊನ್‌ಮೆಂಟಲ್ ಸೈನ್ಸ್ಸ್(ಇಂಇS), ಅಸೋಸಿಯೇಷನ್ ಫಾರ್ ಅಗ್ರಿಕಲ್ಚರಲ್ ಟೆಕ್ನೋಲಾಜಿ ಇನ್ ಸೌತ್‌ಈಸ್ಟ್ ಏಷಿಯಾ ಥೈಲೆಂಡ್, ಸದ್ಗುರು ಗದಗೆ ಮಹಾರಾಜ ಕಾಲೇಜು, ಕರಾಡ, ಮಹಾರಾಷ್ಟç, ಸೆಂಟರ್ ಫಾರ್ ಇನೋವೆಷನ್ ಇನ್ ಸೈಯೆನ್ಸ್ ಮತ್ತು ಸೋಷಿಯಲ್ ಆ್ಯಕ್ಷನ್ ತಿರುವನಂತರಪುರ, ಕೇರಳ, ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ, ಕಾರವಾರ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಇವರ ಸಹಯೋಗದಲ್ಲಿ ಪರಿಸರ ಸಂಶೋಧನೆ ಸಮಸ್ಯೆಗಳು, ಸವಾಲುಗಳು, ಸುಸ್ಥಿರ ಅಭಿವೃದ್ಧಿ ಮತ್ತು ಜೀವನೋಪಾಯದ ಭದ್ರತೆಗಾಗಿ ಕಾರ್ಯತಂತ್ರಗಳು ಎಂಬ ವಿಷಯದ ಮೇಲೆ ಮೂರನೇ ಅಂತರಾಷ್ಟ್ರೀಯ ವೈಜ್ಞಾನಿಕ ಸಮಾವೇಶವು ಇತ್ತಿಚಿಗೆ ಕಾರವಾರದ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆಯಿತು.

ರೋಮ್ ಇಟಲಿ ಅಂತರಾಷ್ಟ್ರೀಯ ಬಯೋವರ್ಸಿಟಿ ಉಪ ಪ್ರಾದೇಶಿಕ ಕಚೇರಿ ಸಂಪರ್ಕ ಅಧಿಕಾರಿ ಡಾ. ಎಸ್.ಬಿ. ದಂಡಿನ್, ಕಾರ್ಯಕ್ರವiವನ್ನು ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಪರಿಸರ ಸಂರಕ್ಷಣೆಗಾಗಿ ಹೆಚ್ಚಿನ ಸಂಶೋಧನೆ ಹಾಗೂ ಅಣ್ವೇಷಣೆ ನಡೆಯಲಿ ಎಂದು ಹೇಳಿದರು.
ಮಹಾರಾಷ್ಟç ಸದ್ಗುರು ಗದಗೆ ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೋಹನ ರಾಜಮಾನೆ ಹಾಗೂ ಹೈದರಾಬಾದ ತೆಲಂಗಾಣದ ಆರ್. ಮಹಿಳಾ ಕಾಲೇಜಿನ ಪ್ರಾಂಶುಪಾಲರದ ಡಾ. ಅಚ್ಯುತಾ ದೇವಿ ಆರ್.ಬಿ.ವಿ.ಆರ್, ವೈಜ್ಞಾನಿಕ ಸಮಾವೇಶ ಉದ್ದೇಶಿಸಿ ಮಾತನ್ನಾಡಿದರು.

ಅಂತರಾಷ್ಟ್ರೀಯ ಬಯೋವರ್ಸಿಟಿ ಉಪ ಪ್ರಾದೇಶಿಕ ಕಚೇರಿಯ ಸಂಪರ್ಕ ಅಧಿಕಾರಿ, ಡಾ. ಎಸ್.ಬಿ. ದಂಡಿನ್ ರೋಮ್ ಇಟಲಿ ಇವರಿಗೆ ಆಹಾರ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಜೀವಮಾನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 

ವೈಜ್ಞಾನಿಕ ಸಮಾವೇಶದಲ್ಲಿ ಭಾಗವಹಿಸಿದ ಸ್ಪರ್ಧಾಳುಗಳು ಪರಿಸರ ಸಂಶೋಧನೆ ಸಮಸ್ಯೆಗಳು, ಸವಾಲುಗಳು, ಸುಸ್ಥಿರ ಅಭಿವೃದ್ಧಿ ಮತ್ತು ಜೀವನೋಪಾಯದ ಭದ್ರತೆಗಾಗಿ ಕಾರ್ಯತಂತ್ರಗಳು ಎಂಬ ವಿಷಯದ ಮೇಲೆ ಸಂಶೋಧನಾ ಲೇಖನಗಳನ್ನು ಮಂಡಿಸಿದರು. ಇದರಲ್ಲಿ ಉತ್ತಮ ಸಂಶೋಧನಾ ಲೇಖನ ಮಂಡನೆ ಹಾಗೂ ಉತ್ತಮ ಭಿತ್ತಿಚಿತ್ರ ಪ್ರದರ್ಶನಕ್ಕೆ ಪ್ರಶಸ್ತಿಯನ್ನು ನೀಡಲಾಯಿತು. 

EAES ಅಧ್ಯಕ್ಷ ಹಾಗೂ ಕಾರ್ಯಕ್ರಮ ಸಂಘಟಕರಾದ ಡಾ. ದೇವರಾಜನ್ ತಂಗದುರೈ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತನ್ನಾಡಿದರು, EAES ಕಾರ್ಯದರ್ಶಿ ಡಾ. ಜೆ. ಸಂಗೀತಾ ಸ್ವಾಗತಿಸಿದರು, ವಿಜ್ಞಾನ ಕೇಂದ್ರ ಉಪ-ಪ್ರಾದೇಶಿಕ ಸದಸ್ಯ ಕಾರ್ಯದರ್ಶಿ ಡಾ. ಸಂಜೀವ ದೇಶಪಾಂಡೆ ವಂದಿಸಿದರು. 

ಮಾರನೇ ದಿನ ಕಾಳಿಕಾ ಮಾತಾ ನಡುಗಡ್ಡೆಯ ಕಾಂಡ್ಲಾ ಪ್ರದೇಶಕ್ಕೆ ಭೇಟಿ ನೀಡಿಡಿ ಅಲ್ಲಿರುವ ಕಾಂಡ್ಲಾ ಸಸ್ಯಗಳ ಮಹತ್ವ, ಅವುಗಳಿಂದ ಜಲಜೀವಿಗಳಿಗೆ ಆಗುವ ಪ್ರಯೋಜನಗಳ ಬಗ್ಗೆ ಸಾಗರದ ಇಂದಿರಾ ಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಸ್ಯಶಾಸ್ತç ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಭಟ್ ಸ್ಪರ್ಧಾಳುಗಳಿಗೆ ಮಾಹಿತಿ ನೀಡಿದರು. 
ಈ ಕಾರ್ಯಕ್ರಮದಲ್ಲಿ ಭಾರತದ ವಿವಿಧ ವಿಶ್ವವಿದ್ಯಾಲಯ, ವಿವಿಧ ಕೇಂದ್ರೀಯ ಹಾಗೂ ರಾಜ್ಯ ಸರಕಾರ ಅಧೀನ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು, ಉಪನ್ಯಾಸಕರು, ಪಿ.ಎಚ್.ಡಿ. ಸಂಶೋಧನಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿ 185 ಜನರು ಭಾಗವಹಿಸಿದ್ದರು. 

Read These Next