ಮುಂಡಗೋಡ ಸ್ಥಿತಿಗತಿ ಉತ್ತಮವಾಗಿದೆ ಸಚಿವ ಶಿವರಾಮ ಹೆಬ್ಬಾರ

Source: sonews | By Staff Correspondent | Published on 29th March 2020, 7:25 PM | Coastal News |

ಮುಂಡಗೋಡ : ಮುಂಡಗೋಡ ಆರೋಗ್ಯ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ   ಕಾರ್ಮಿಕ ಮತ್ತು ಸಕ್ಕರೆ ಸಚಿವ ಹೇಳಿದರು .

ಅವರು ಭಾನುವಾರ ಮುಂಡಗೋಡ ಭೇಟಿನೀಡಿ ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ತೆಗೆದುಕೊಂಡಿರುವ ಮುಂಜಾಗೃತ ಕ್ರಮಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಹೇಳಿದರು.  

ಮುಂದೆಯೂ ಆರೋಗ್ಯ ಇಲಾಖೆ ಇದೇ ರೀತಿ ಕ್ರಮಕೈಗೊಳ್ಳಬೇಕು. ಯಾವುದಕ್ಕೂ ನಿಷ್ಕಾಳಜಿ ಮಾಡುವಂತಿಲ್ಲ ಎಂದು ಕಿವಿಮಾತು ಹೇಳಿದರು. ತಹಶೀಲ್ದಾರ  ಜನತೆಯ ಕುರಿತು ಕೈಗೊಂಡಿರುವ ಕ್ರಮಗಳ ಮಾಹಿತಿ ಪಡೆದರು ತಾಲೂಕಾಡಳಿತ ಹಾಗೂ ಪೊಲೀಸ ಇಲಾಖೆ ಉತ್ತಮ ಕಾರ್ಯನಿರ್ವಹಿಸುತ್ತಿರುವುದರಿಂದ ಇಲ್ಲಿಯ ಜನತೆಗೆ ಯಾವುದೇ ತೊಂದರೆ ಉಂಟಾಗಿಲ್ಲ ಹಾಗೂ ಜನತೆ  ಅಧಿಕಾರಿಗಳಿಗೆ ಸ್ಪಂದಿಸುತ್ತಿರುವುದರಿಂದ ಮುಂಡಗೋಡ ಸ್ಥಿತಿ ಉತ್ತಮವಾಗಿದೆ .ಹೀಗೆ ಸಾರ್ವಜನಿಕರು ಮನೆಯಿಂದ ಹೊರಗೆ ಬರದೆ ಅಧಿಕಾರಿಗಳಿಗೆ ಮುಂದೆಯೂ ಸ್ಪಂದಿಸಬೇಕು ಎಂದರು ನಂತರ ಅವರು ಮುಂಡಗೋಡ ನಗರವನ್ನು ಸಂಚರಿಸಿ ಪರಿಶೀಲಿಸಿದರು. ಟಿಬೇಟ್ ಕ್ಯಾಂಪ್‍ಗೆ ತೆರಳಿ ಅಲ್ಲಿನ ಸ್ಥಿತಿಗತಿ ಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀಧರ ಮುಂದಲಮನಿ, ಆಡಳಿತ ವೈದ್ಯಾಧಿಕಾರಿ ಎಚ್.ಎಫ್ ಇಂಗಳೆ, ಪಿಆಯ್ ಶಿವಾನಂದ ಚಲವಾದಿ, ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ,ಬಿಜೆಪಿ ಅಧ್ಯಕ್ಷ ನಾಗಭೂಷಣ ಹಾವಣಗಿ, ಎಲ್‍ಎಸ್‍ಎಮ್‍ಪಿ ಅಧ್ಯಕ್ಷ ಉಮೇಶ ಬೀಜಾಪುರ, ಪಿಎಲ್‍ಡಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ ಗಾಣಗೇರ, ಧುರಿಣ ಗುಡ್ಡಪ್ಪ ಕಾತೂರ ಸೇರಿದಂತೆ ಮುಂತಾದವರು ಇದ್ದರು.

Read These Next

ಭಟ್ಕಳದಲ್ಲಿ ಭಾರಿ ಮಳೆಗಾಳಿಗೆ 7 ವಿದ್ಯುತ್ ಕಂಬಗಳು ಧರಾಶಾಹಿ, 3 ಟ್ರಾನ್ಸ್‍ಫಾರ್ಮರ್ಸ್ ಗೆ ಬೆಂಕಿ ಅಂದಾಜು ರೂ.1.10 ಲಕ್ಷ ಹಾನಿ

ಭಟ್ಕಳ: ಭಟ್ಕಳ ತಾಲೂಕಿನಾದ್ಯಂತ ಭಾರಿ ಬಿರುಗಾಳಿಯಿಂದ ಮಳೆ ಬೀಳುತ್ತಿದ್ದು ಪ್ರತಿ ಗಂಟೆಗೆ 50-60ಕಿ.ಮೀ ವೇಗದಲ್ಲಿ ಗಾಳಿ ಬೀಸುವ ...