ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ ಮುಖ್ಯಮಂತ್ರಿ ಅಭಿನಂದನೆ

Source: sonews | By Staff Correspondent | Published on 26th March 2020, 7:19 PM | State News |

ಬೆಂಗಳೂರು: ಕೋವಿಡ್-19 ಪಿಡುಗಿನಿಂದ ಜನಜೀವನದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಯಲು ಕೇಂದ್ರ ಸರ್ಕಾರವು ರೂ.1.70 ಲಕ್ಷ ಕೊಟಿ ಹಣ ಬಿಡುಗಡೆ ಮಾಡಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಪ್ರಧಾನಮಂತ್ರಿ  ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ  ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

“ಸಂಕಷ್ಟದ ಈ ಸಮಯದಲ್ಲಿ ಕೇಂದ್ರ ಸರಕಾರದ ಈ ನಿರ್ಧಾರವು ಬಡವರನ್ನು ರೈತರನ್ನು, ಮಹಿಳೆಯರನ್ನು ಮತ್ತು ಕೂಲಿ ಕಾರ್ಮಿಕರನ್ನು ನೆಮ್ಮದಿಯಾಗಿ ಬದುಕಲು ಅನುವು ಮಾಡಿಕೊಡುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್-19 ರ ವಿರುದ್ಧ ತೆಗೆದುಕೊಂಡ ಕ್ರಮಗಳನ್ನು ಹೆಚ್ಚು ಗಂಭೀರವಾಗಿ ಮತ್ತು ಚುರುಕಾಗಿ ಅನುಷ್ಠಾನಗೊಳಿಸುವಲ್ಲಿ ಸಹಕಾರಿಯಾಗುತ್ತದೆ.”  

“ಬಡವರ ಹಸಿವಿನ ಅರ್ಥ ಅರಿತುಕೊಂಡ ಸರ್ಕಾರವು 80 ಕೋಟಿ ಜನರಿಗೆ ಪ್ರತಿ ತಿಂಗಳು 5 ಕೆ.ಜಿ. ಹೆಚ್ಚುವರಿ ಗೋಧಿ ಅಥವಾ ಅಕ್ಕಿ ಮತ್ತು 1 ಕೆ.ಜಿ. ಬೇಳೆಯನ್ನು ಕೊಡಲು ನಿರ್ಧರಿಸಿದ್ದು ಒಂದು ದೊಡ್ಡ ಅಸಾಧಾರಣ ನಿರ್ಧಾರವನ್ನು ತೆಗೆದುಕೊಂಡಿದೆ.”

“ ಮಹಿಳೆಯರ ಜನಧನ್ ಖಾತೆಗೆ ಪ್ರತಿ ತಿಂಗಳು ರೂ.500 ರಂತೆ 3 ತಿಂಗಳಿಗೆ ರೂ. 1500/- ಗಳನ್ನು ಮುಂಗಡವಾಗಿ ಹಣ ನೇರವಾಗಿ ವರ್ಗಾವಣೆ ಮಾಡುವುದು, ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿನ ರೂ. 2,000 ಹಣವನ್ನು ಮುಂಗಡವಾಗಿ ಕೊಡುವುದು, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಯೋಜನೆ ರೂ. 10 ಲಕ್ಷದಿಂದ 20 ಲಕ್ಷಕ್ಕೆ ಏರಿಸಿದ್ದು ಇದರಿಂದ 63 ಲಕ್ಷ ಮಹಿಳಾ ಸ್ವಸಹಾಯ ಸಂಘಗಳಿಗೆ ಲಾಭವಾಗಲಿದೆ. 8.3 ಕೋಟಿ ಗೃಹಿಣಿಯರಿಗೆ ಉಜ್ವಲ್ ಯೋಜನೆ ಅಡಿ 3 ಉಚಿತ ಗ್ಯಾಸ್ ಸಿಲಿಂಡರ್ಗಳನ್ನು ನೀಡುವುದು, ಸಂಘಟಿತ ವಲಯದ ಕಾರ್ಮಿಕರಿಗೆ ಇ.ಪಿ.ಎಫ್. ಮೇಲೆ ಸಾಲ ಸೌಲಭ್ಯ ಮತ್ತು ಉದ್ಯೋಗ ಖಾತರಿ ಯೋಜನೆಯಡಿ ಅಡಿ ಕೂಲಿ ದರವನ್ನು ರೂ.182 ರಿಂದ ರೂ.202 ಏರಿಸಿದ್ದು, ದೇಶದ ಬಡವರು ಇಂತಹ ಸಂದಿಗ್ಧ ಸಮಯದಲ್ಲಿ ಹಸಿವಿನಿಂದ ಬಳಲದಂತೆ ಮಾಡುತ್ತದೆ.”

“ಇದರ ಜೊತೆಗೆ ವಯೋವೃದ್ಧರಿಗೆ, ವಿಧವೆಯರಿಗೆ ರೂ.1000/- ಗೌರವಧನವನ್ನು 3 ತಿಂಗಳವರೆಗೆ ಕೊಡುವುದು ಒಳ್ಳೆಯ ನಿರ್ಧಾರ. ಇದಲ್ಲದೇ ಕೇಂದ್ರ ಸರ್ಕಾರದಿಂದ ಉದ್ಯಮ ವಲಯಕ್ಕೆ ಹಲವಾರು ಹಣಕಾಸು ಸಹಾಯಕ ಯೋಜನೆಗಳನ್ನು ಕೊಡಮಾಡಿ ಕೋವಿಡ್-19 ಮಹಾಮಾರಿಯ ಪರಿಣಾಮದಿಂದ ಉಂಟಾದ ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸುವಲ್ಲಿ ಸಹಕಾರಿಯಾಗಲಿದೆ.”

“ಬಡವರಿಗೆ ಇಷ್ಟೊಂದು ದೊಡ್ಡಮಟ್ಟದ ಹಣಕಾಸು ಸಹಾಯ ಮಾಡಿದ ಪ್ರಧಾನಮಂತ್ರಿ  ನರೇಂದರ ಮೋದಿಯವರಿಗೆ ಇನ್ನೊಮ್ಮೆ ಅಭಿನಂದಿಸುತ್ತೇನೆ” ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...