ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಎನ್.ಇ.ಎಸ್. ಶಾಲಾ ವಿದ್ಯಾರ್ಥಿಗಳ ಉತ್ತಮ ಸಾಧನೆ

Source: sonews | By Staff Correspondent | Published on 22nd September 2019, 3:47 PM | Coastal News | Sports News |

ಭಟ್ಕಳ: ಇಲ್ಲಿನ ಬೆಳೆಕೆ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ತಾಲೂಕಾ ಮಟ್ಟದ ಪ್ರೌಢ ಶಾಲಾ ಮಕ್ಕಳ ಇಲಾಖಾ ಕ್ರೀಡಾಕೂಟದಲ್ಲಿ ಇಲ್ಲಿನ ನ್ಯೂ ಇಂಗ್ಲೀಷ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 

100 ಮೀ.ಓಟ ಮನು ನಾಯ್ಕ ಪ್ರಥಮ, ಬಾಲಕರ ಚೆಸ್ ದಿನೇಶ ನಾಯ್ಕ ಪ್ರಥಮ, ಬಾಲಕರ ಯೋಗ (ರಿದಮಿಕ್) ಧನರಾಜ ಮೊಗೇರ ಪ್ರಥಮ, ಬಾಲಕರ ಯೋಗ (ಆರ್ಟಿಸ್ಟಿಕ್) ಹರ್ಷ ಮೊಗೇರ ಪ್ರಥಮ, ಬಾಲಕಿಯರ ಯೋಗ ಮೂಕಾಂಬಿಕಾ ಗೊಂಡ ಪ್ರಥಮ, ಬಾಲಕಿಯರ ಯೋಗ ಅಮಿತಾ ನಾಯ್ಕ ಪ್ರಥಮ ಹಾಗೂ ಬಾಲಕರ ಕಬ್ಬಡ್ಡಿ ಮತ್ತು ಬಾಲಕಿಯರ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾರೆ. 

ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ನಾಯಕ, ಶಾಲಾ ಮುಖ್ಯೋಪಾಧ್ಯಾಯ ಗಣಪತಿ ಶಿರೂರು, ಶಿಕ್ಷಕ ವೃಂದ ಅಭಿನಂದಿಸಿದೆ.

Read These Next

ಪತ್ರಿಕಾ ವರದಿಗೆ ಸ್ಪಂದನೆ, ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ  ಅಂಗವಿಕಲ ಬಡ ಕುಟುಂಬಕ್ಕೆ ನೆರವು  

ಗಂಗೊಳ್ಳಿ:  ದೊಡ್ಡಹಿತ್ಲು ಪ್ರದೇಶದ ಬಡ ಅಂಗವಿಕಲ ಕುಟುಂಬದ ಬಗ್ಗೆ ಇತ್ತೀಚಿಗೆ ಪತ್ರಿಕಾ ಮಾಧ್ಯಮದಲ್ಲಿ ವರದಿಯಾಗಿತ್ತು. ಇದನ್ನು ...

ಅಂಕೋಲಾದಲ್ಲಿ 127.0 ಮಿ.ಮೀ. ಮಳೆ 

ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 127.0 ಮಿ.ಮೀ, ಭಟ್ಕಳ 80.0 ಮಿ.ಮೀ, ...

ಹಾವು ಕಚ್ಚಿ ವ್ಯಕ್ತಿಸಾವು

ಮುಂಡಗೋಡ :  ಹಾವು ಕಚ್ಚಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಮೈನಳ್ಳಿ ಪಂಚಾಯತ್ ವ್ಯಾಪ್ತಿಯ ಕಳಕಿಕಾರೆ ಗ್ರಾಮದಲ್ಲಿ ನಡೆದಿದೆ.