ಸಂಘಪರಿವಾರದ ನಾಯಕರನ್ನು ದೋಷಮುಕ್ತಗೊಳಿಸಿರುವ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪು ಆಘಾತಕಾರಿ

Source: sonews | By Staff Correspondent | Published on 30th September 2020, 11:49 PM | National News |

ಹೊಸದಿಲ್ಲಿ : 1992ರ ಡಿಸೆಂಬರ್ 6ರಂದು ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ ಸೇರಿ ದಂತೆ ಸಂಘಪರಿವಾರದ ನಾಯಕರನ್ನು ದೋಷಮುಕ್ತಗೊಳಿಸಿರುವ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪು ತನಗೆ ಆಘಾತವುಂಟು ಮಾಡಿದೆ ಎಂದು ನರಸಿಂಹರಾವ್ ಸರಕಾರದಲ್ಲಿ ಗೃಹ ಕಾರ್ಯದರ್ಶಿ ಮಾಧವ್ ಗೊಡ್ಬೋಲೆ ಹೇಳಿದ್ದಾರೆ.

 ಬಾಬರಿ ಮಸೀದಿ ಧ್ವಂಸ ಘಟನೆಯು ಪೂರ್ವಯೋಜಿತವಲ್ಲವೆಂಬ ಸಿಬಿಐ ನ್ಯಾಯಾಲಯದ ಅಭಿಪ್ರಾಯಕ್ಕೂ ಅವರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಪೂರ್ವಯೋಜನೆಯಿಲ್ಲದೆ ಬಾಬರಿ ಮಸೀದಿಯನ್ನು ಕೇವಲ ಐದು ತಾಸುಗಳಲ್ಲಿ ಕರಸೇವಕರು ಧ್ವಂಸಗೊಳಿಸಲು ಸಾಧ್ಯವೇ ಇರುತ್ತಿರಲಿಲ್ಲವೆಂದು ಅವರು ಹೇಳಿರುವುದಾಗಿ ‘ಹಫಿಂಗ್ಟನ್‌ಪೋಸ್ಟ್’ ಸುದ್ದಿಜಾಲ ತಾಣದಲ್ಲಿ ಪ್ರಕಟವಾದ ವರದಿಯೊಂದು ತಿಳಿಸಿದ.

 ‘‘ಪ್ರಾಮಾಣಿಕವಾಗಿ ಹೇಳುವುದಾದರೆ ಈ ತೀರ್ಪು ನನಗೆ ಗಾಬರಿಯುಂಟು ಮಾಡಿದೆ. ಮೊದಲನೆಯದಾಗಿ ಇಷ್ಟೊಂದು ಬೃಹತ್ ಗಾತ್ರದ ಮಸೀದಿಯನ್ನು ಯಾವುದೇ ಪೂರ್ವ ಯೋಜನೆಯಿಲ್ಲದೆ ಅಥವಾ ಪೂರ್ವಸಿದ್ಧತೆಯಿಲ್ಲದೆ ಐದು ತಾಸುಗಳ ಅವಧಿಯಲ್ಲಿ ಕೆಡವಿ ಹಾಕಲಾಯಿತೆಂಬುದನ್ನು ನಂಬಲು ಅಸಾಧ್ಯವಾದುದು’’ ಎಂದವರು ಹೇಳಿದ್ದಾರೆ. ನ್ಯಾಯಾಲಯದ ಈ ತೀರ್ಪು ನಮ್ಮ ನ್ಯಾಯಾಂಗ ವ್ಯವಸ್ಥೆಯ ಹಾಗೂ ಕ್ರಿಮಿನಲ್ ಕಾನೂನು ವ್ಯವಸ್ಥೆಯ ಮೇಲಿನ ವ್ಯಾಖ್ಯಾನವಾಗಿದೆ’’ ಎಂದವರು ಅಭಿಪ್ರಾಯಿಸಿರುವುದಾಗಿ ವರದಿಯು ತಿಳಿಸಿದೆ.

Read These Next

ಜನವರಿ 26ಕ್ಕೆ ಟ್ರ್ಯಾಕ್ಟರ್‌ ಪರೇಡ್‌ ಖಚಿತ; ಶಾಂತಿಯುತವಾಗಿ ದೆಹಲಿ ರಿಂಗ್‌ ರೋಡ್‌ನಲ್ಲಿ ರ್ಯಾಲಿ

ನವದೆಹಲಿ : ದೆಹಲಿ ಪೊಲೀಸ್‌ನ ತಕರಾರಿನ ನಡುವೆಯೂ ದೆಹಲಿ ಗಡಿಯಲ್ಲಿ ನೆರೆದಿರುವ ರೈತರು ತಮ್ಮ ಈ ಹಿಂದಿನ ನಿರ್ಧಾರದಂತೆ ಜನವರಿ 26ರ ...

ಸುಪ್ರೀಂ ಕೋರ್ಟ್‌ ಸಮಿತಿ ನೇಮಿಸಿದ ಸಮಿತಿಯ ಮುಂದೆ ಹೋಗುವುದಿಲ್ಲ : ರೈತ ಮುಖಂಡ ದರ್ಶನ್‌ ಪಾಲ್‌

9ನೇ ಸುತ್ತಿನ ಮಾತುಕತೆಯ ಮೂಲಕ ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ಜೊತೆಗೆ ಮಾತುಕತೆ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ ...

ಸರ್ಕಾರ-ರೈತರ ನಡುವೆ 9ನೇ ಸುತ್ತು; ತಾನು ಬಗ್ಗದೆ, ಮೃದುವಾಗುವಂತೆ ರೈತರಿಗೆ ಆಗ್ರಹಿಸಿದ ಸರ್ಕಾರ

ನವದೆಹಲಿ : ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ 9ನೇ ಸುತ್ತಿನ ಮಾತುಕತೆಯ ನಡೆಯುವುದೋ ಇಲ್ಲವೋ ಎಂಬ ಗೊಂದಲದ ನಡುವೆಯೇ ...

ರೈತ ಹೋರಾಟವನ್ನು ಖಾಲಿಸ್ತಾನಿ ತಂತ್ರವೆಂದ ಗೋದಿ ಮೀಡಿಯಾ: ಕಿಸಾನ್‌ ಏಕ್ತಾ ಮೋರ್ಚಾ ಖಂಡನೆ

ನವದೆಹಲಿ : ಕಳೆದ 50ದಿನಗಳಿಂದ ನಡೆಯುತ್ತಿರುವ ಹೋರಾಟವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸುವ ಪ್ರಯತ್ನವನ್ನು ಸರ್ಕಾರ ಹಾಗೂ ...