ಪ್ರಧಾನಿಗಳ ಅದರ್ಶದೊಂದಿಗೆ ಈ ದೇಶ ಮುನ್ನಡೆಯುತ್ತಿದೆ; ಯಡಿಯೂರಪ್ಪ.

Source: SO News | By Laxmi Tanaya | Published on 5th November 2020, 10:18 PM | State News |

ಮಂಗಳೂರು : ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ‍್ಯಕಾರಿ ಸಮಿತಿ ಸಭೆ ಗುರುವಾರ ಮಂಗಳೂರಿನ ಟಿ.ವಿ. ರಮಣ ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯಿತು.

 ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಾರ‍್ಯಕಾರಿಣಿ ಸಮಿತಿ ಸಭೆಯನ್ನು ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು,  ಯಾವುದೇ ಚುನಾವಣೆಯಲ್ಲಿ ಕಾರ್ಯಕರ್ತರು ಚುನಾವಣೆಯನ್ನು ಹಗುರವಾಗಿ ಪರಿಗಣಿಸಬಾರದು. ಸಂಘಟನೆ ಮುಖ್ಯ.ಅಧಿಕಾರ ಬಂದು ಜನರ ಆಶೋತ್ತರಗಳನ್ನು ಈಡೇರಿಸಲು ನಾವು ಪಕ್ಷವನ್ನು ಕಟ್ಟಬೇಕು. ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಅರ್ ಅರ್ ನಗರದಲ್ಲಿ ಬಾರೀ ಅಂತರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ವಿಪಕ್ಷಗಳಿಗೆ ಮುಖ ಬಂಗ ಮಾಡಲಿದೆ ಎಂದರು.

ಮುಂದಿನ‌ ವಿಧಾನ ಸಭೆಯಲ್ಲಿ ಬಾರೀ ಗೆಲುವು ಸಾಧಿಸಲು ಈಗಾಗಲೇ ಪಕ್ಷದ ಬಲವರ್ಧನೆ ಅಗಬೇಕು.ಕೊವೀಡ್ ನಂತರ ಅರ್ಥಿಕ ಸ್ಥಿತಿ ಗಂಭಿರವಾದರೂ ಈಗ ಯಥಾ ಸ್ಥಿತಿಗೆ  ಬರುತ್ತಿದೆ. ಮಂಗಳೂರು ಮಹಾತ್ಮಾಗಾಂಧಿ ವಿಕಾಸ ಯೋಜನೆಗೆ ೧೨೫ ಕೋಟಿ ಮಂಜೂರು ಮಾಡಲು ಯೋಚಿಸಿದ್ದೇನೆ. ಇತರ ಜಿಲ್ಲೆಗೆ ೫೦ಕೋಟಿ ನೀಡಿದ್ದೇನೆ. ಸ್ಮಾರ್ಟ್ ಸಿಟಿಯ ಮೂಲಕ ವಿವಿಧ ಯೋಜನೆಗೆ ಸಹಕಾರ ನೀಡುತ್ತೇನೆ. ರಾಜ್ಯವನ್ನ ಯಾವುದೇ ಮುಲಾಜಿಲ್ಲದೇ ಡ್ರಗ್ಸ್ ಮಾಫಿಯವನ್ನು ತಡೆಯಲು ಕಠಿಣ ಕ್ರಮ ಕೈಗೊಂಡಿದ್ದೇನೆ. ಮೀನುಗಾರಿಗೆ ವಿಶೇಷ ಅರ್ಥಿಕ ಭದ್ರತೆ ನೀಡುವುದು ಮತ್ತು ಪ್ರವಾಸೋದ್ಯವನ್ನು ಉತ್ತೇಜಿಸುವುದು ಈ ರೀತಿ ರಾಜ್ಯವನ್ನು  ಬಲಪಡಿಸುವುದು. ಮತ್ಸ್ಯ ಸಂಪದ ಯೋಜನೆಗೆ ವಿದ್ಯುತ್ ಸೌಲಭ್ಯ ನೀಡುವುದು. ಉದ್ಯೋಗವನ್ನು ಉತ್ತೇಜಿಸುವುದು ಕೊರೊನಾ ಪಿಡುಗು ದೂರ ಮಾಡಲು ಶ್ರಮ ವಹಿಸಲಿದ್ದೇವೆಂದರು.

 ರಾಜ್ಯದಲ್ಲಿ  ಹೆಣ್ಮಕ್ಕಳ ಮತಾಂತರ ಮಾಡುವವರ ಬಗ್ಗೆ   ಕಠಿಣ ಕ್ರಮ ಜರಗಿಸಲು ಕ್ರಮ ಕೈಗೊಳ್ಳುವುದು ಎಂಬುದಾಗಿ ಮುಖ್ಯಮಂತ್ರಿ ಗಳು ತಿಳಿಸಿದರು.  

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅಧ್ಯಕ್ಷತೆ ವಹಿಸಿದರು. ಕಮಿಟಿ ಸದಸ್ಯರಾಗಿರುವ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಪ್ರಹ್ಲಾದ್‌ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಸಿ.ಟಿ. ರವಿ, ಗೋವಿಂದ ಕಾರಜೋಳ್ವ ,ಆರ್,ಆಶೋಕ್,ಜಗದೀಶ್ ಶೆಟ್ಟರ್, ಈಶ್ವರಪ್ಪ ,ಅರವಿಂದ ಲಿಂಬಾವಳಿ ಮತ್ತಿತರರು ಭಾಗವಹಿಸಿದ್ದಾರೆ. ರಾಜ್ಯ ಬಿಜೆಪಿಯ ವಿವಿಧ ಪದಾಧಿಕಾರಿಗಳು, ಸಂಚಾಲಕರು, ಪ್ರಭಾರಿಗಳು, ಸಹ ಪ್ರಭಾರಿಗಳು,ಮೋರ್ಚಾಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...