ವಿವಿಧ ಇಲಾಖಾ ಅಧಿಕಾರಿಗಳ ತಾಲೂಕುಮಟ್ಟದ ಕಾರ್ಯಾಗಾರ

Source: SOnews | By Staff Correspondent | Published on 14th June 2024, 6:37 PM | Coastal News |


ಭಟ್ಕಳ: ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಮತ್ತು ಅಂದಾಜು ಪತ್ರಿಕೆ ಸಿದ್ದಪಡಿಸುವ ಕುರಿತು ಭಟ್ಕಳ ತಾಲ್ಲೂಕಾ ಮಟ್ಟದ ಇಲಾಖಾಧಿಕಾರಿಗಳು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಡಾಟಾ ಎಂಟ್ರಿ ಆಪರೇಟರ್ ಹಾಗೂ ವಾಟರಮನ್ ಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ತಾಲ್ಲೂಕಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರ ಜರುಗಿತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ತಾಲ್ಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವಿ.ಡಿ.ಮೊಗೇರ, ಕುಡಿಯುವ ನೀರಿನ ಮೂಲಗಳನ್ನು ಕಾಲ ಕಾಲಕ್ಕೆ ಸ್ವಚ್ಚಗೊಳಿಸುವುದು ಹಾಗೂ ನೀರಿನ ಗುಣಮಟ್ಟ ಪರಿಕ್ಷೀಸಿ ಶುದ್ದ ಕುಡಿಯುವ ನೀರು ಪೂರೈಸಲು ಕ್ರಮವಹಿಸಬೇಕು ಎಂದರು.  

ನೀರಿನ ಮೂಲದಿಂದ ಹರಡುವ ಸಾಂಕ್ರಾಮಿಕ ರೋಗಗಳ ದುಷ್ಪರಿಣಾಮಗಳು ಮತ್ತು ಮಾರ್ಗೋಪಾಯಗಳ ಬಗ್ಗೆ ಭಟ್ಕಳ ತಾಲ್ಲೂಕಾ ಆಸ್ಪತ್ರೆಯ ಮಕ್ಕಳ ತಜ್ಞ ಸುರಕ್ಷಿತಾ ಶೆಟ್ಟಿ ಉಪನ್ಯಾಸ ನೀಡಿದರು.

ಎಫ್.ಕೆ.ಟಿ ಕಿಟ್ ಮುಖಾಂತರ ನೀರಿನ ಗುಣಮಟ್ಟ ಪರೀಕ್ಷೆ ಕೈಗೊಳ್ಳುವ ಕಾರ್ಯವಿಧಾನದ ಬಗ್ಗೆ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ, ಶಿರಸಿಯ ಕು. ಅಶ್ವಿನಿ ರವರು ತರಬೇತಿ ನೀಡಿದರು.

ಗ್ರಾಮ ಪಂಚಾಯತಿಗಳ ಹಂತದಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾಮಗಾರಿಗಳ ಅಂದಾಜು ಪತ್ರಿಕೆ ತಯಾರಿಸುವ ಬಗ್ಗೆ ತಾಂತ್ರಿಕ ತರಬೇತಿಯನ್ನು ಹೊನ್ನಾವರ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಉಪವಿಭಾಗದ ಅಭಿಯಂತರರಾದ ಶ್ರೀಮತಿ ಮಾನಸ ತರಬೇತಿ ನೀಡಿದರು.

ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಹಾಗೂ ಕ್ರಮಬದ್ದ ನಿರ್ವಹಣೆ ಮುಖಾಂತರ ವಿಶ್ವ ಬ್ಯಾಂಕ್ ನೆರವು ಯೋಜನೆಯಡಿ ಡಿ.ಎಲ್.ಐ ಗಳ ಅನುಷ್ಠಾನ ಬಗ್ಗೆ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ವಿಭಾಗದ ಸಮಾಲೋಚಕರಾದ ಹರೀಶ್ ಕೆ ರವರು ತರಬೇತಿ ನೀಡಿದರು.

ಹರಿಯುವ ನೀರನ್ನು ತಡೆಹಿಡಿದು ಅಂತರ್ಜಲ ಮರುಪೂರ್ಣ ಮಾಡಲು ಇರುವ ವಿಧಾನಗಳು, ಮಳೆ ನೀರು ಕೊಯ್ಲು ಕುರಿತು ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ವಿಭಾಗದ ಭೂ ವಿಜ್ಞಾನಿ ಅನಿರುದ್ದ ಅವಧಾನಿ ತರಬೇತಿ ನೀಡಿದರು.

ಜಲಜೀವನ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿಗಳು & ಸಿಬ್ಬಂದಿಗಳ ಜವಾಬ್ದಾರಿ, ಹರ್ ಘರ್ ಜಲ್ ಘೋಷಣೆ ಕುರಿತು ಜಲಜೀವನ ಮಿಷನ್ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವೆಂಕಟೇಶ ನಾಯ್ಕ ರವರು ತರಬೇತಿ ನೀಡಿದರು.

ಸ್ವಚ್ಚ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣ, ದೃವ ತ್ಯಾಜ್ಯ ನಿರ್ವಹಣೆ, ಮಾದರಿ ಗ್ರಾಮಗಳ ಘೋಷಣೆ ಕುರಿತು ಜಿಲ್ಲಾ ಪಂಚಾಯತ ಸ್ವ.ಭಾ.ಮಿ ಸಮಾಲೋಚಕರಾದ ಸರ‍್ಯನಾರಾಯಣ ಭಟ್ ಹಾಗೂ ಅಶ್ವಿನ್ ರವರು ತರಬೇತಿ ನೀಡಿದರು.
ತರಬೇತಿ ಕಾರ್ಯಾಗಾರದಲ್ಲಿ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಲ್ಲಪ್ಪ ಮಡಿವಾಳ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಶೀಲಾ ಮೊಗೇರ, ತಾಲ್ಲೂಕಾ ಪಂಚಾಯತ ವ್ಯವಸ್ಥಾಪಕಿ ಲತಾ ನಾಯ್ಕ ಹಾಗೂ ಎಲ್ಲಾ ಅಭಿಯಂತರರು, ಎಲ್ಲಾ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು. 

ತಾಲ್ಲೂಕಾ ಪಂಚಾಯತ ಲೆಕ್ಕ ಸಹಾಯಕರಾದ ರಾಘವೇಂದ್ರ ಎಸ್ ಪೂಜಾರಿ ಸ್ವಾಗತಿಸಿ ನಿರ್ವಹಿಸಿದರು.

Read These Next

ಜು.21 ರಿಂದ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಿಂದ ಚಾತುರ್ಮಾಸ್ಯ ವೃತಾಚರಣೆ ಆರಂಭ

ಭಟ್ಕಳ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ...

ಮನೆಯಂಗಳದಲ್ಲಿ 7 ಅಡಿ ಉದ್ದದ ಹೆಬ್ಬಾವು ಪತ್ತೆ: ಸುರಕ್ಷಿತವಾಗಿ‌ ಕಾಡಿಗೆ ಬಿಟ್ಟ ಉರಗ ಪ್ರೇಮಿಗಳು 

ಭಟ್ಕಳ ಕರಾವಳಿ ಭಾಗದಲ್ಲಿ ಮಳೆಯು  ಅಬ್ಬರಿಸುತ್ತಿದೆ. ಮಳೆಯಿಂದಾಗಿ ಕಾಡಿನಿಂದ ಮನೆಗಳತ್ತ ಹಾವುಗಳು ಬರುತ್ತಿದ್ದು ತಾಲೂಕಿನ ...