ಫಿಫಾ ವಿಶ್ವಕಪ್ 2018: ಸೌತ್ ಕೊರಿಯಾ vs ಸ್ವೀಡನ್: 60 ವಷರ್ಗಳ ಬಳಿಕ ಮೊದಲ ಪಂದ್ಯ ಗೆದ್ದ ಸ್ವೀಡನ್

Source: so news | By MV Bhatkal | Published on 18th June 2018, 10:26 PM | Sports News |

ಮಾಸ್ಕೋ: ಫಿಫಾ ವಿಶ್ವಕಪ್ 2018ರ 'ಎಫ್' ಗುಂಪಿನ ಸೌತ್ ಕೊರಿಯಾ ಹಾಗೂ ಸ್ವೀಡನ್ ತಂಡಗಳ ನಡುವಣ ಪಂದ್ಯದಲ್ಲಿ ಸ್ವೀಡನ್ 1-0 ಅಂತರದ ಜಯಗಳಿಸಿ ಶುಭಾರಂಭ ಮಾಡಿದೆ.
ಸ್ವೀಡನ್ ತಂಡದ ನಾಯಕ ಆಂಡ್ರಸ್ ಗ್ರಾನ್​ಕ್ವಿಸ್ಟ್​ ಅವರು 65ನೇ ನಿಮಿಷದಲ್ಲಿ ಸಿಡಿಸಿದ ಮೊದಲ ಗೋಲು ತಂಡಕ್ಕೆ ಜಯ ತಂದುಕೊಟ್ಟಿತು. ಪಂದ್ಯದ ಮೊದಲಾರ್ಧದಲ್ಲಿ ಎರಡೂ ತಂಡಗಳು ಕಠಿಣ ಹೋರಾಟ ನಡೆಸಿದರೂ ಯಾವುದೆ ಗೋಲು ದಾಖಲಾಗಿಲ್ಲ. 21ನೇ ನಿಮಿಷದಲ್ಲಿ ಸ್ವೀಡನ್ ತನ್ನ ಮೊದಲ ಖಾತೆ ತೆರೆಯುವ ಸನಿಹದಲ್ಲಿ ಇತ್ತಾದರು, ಸೌತ್ ಕೊರಿಯಾದ ಗೋಲ್ ಕೀಪರ್ ಅದ್ಭುತವಾಗಿ ತಡೆದು, ಗೋಲ್​ಗೆ ಅವಕಾಶ ನೀಡಲಿಲ್ಲ. ಬಳಿಕ 65ನೇ ನಿಮಿಷದಲ್ಲಿ ಗ್ರಾನ್​​​​​ಕ್ವಿಸ್ಟ್​​ ಅವರು ಸ್ಪಾಟ್ ಕಿಕ್​​ ಮೂಲಕ ಸಿಡಿಸಿದ ಗೋಲು ತಂಡದ ಜಯಕ್ಕೆ ನೆರವಾಯಿತು.
ಸೌತ್ ಕೊರಿಯಾ ಗೋಲಿಗಾಗಿ ಕೊನೆ ಹಂತದ ವರೆಗೂ ಹೋರಾಟ ನಡೆಸಿತಾದರು, ಚೆಂಡನ್ನು ನೆಟ್​ ಒಳಗೆ ಹಾಕಲು ಸಾಧ್ಯವಾಗಿಲ್ಲ. ಈ ಮೂಲಕ 60 ವರ್ಷಗಳ ಬಳಿಕ ಸ್ವೀಡನ್ ಗೆದ್ದು ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದೆ.

Read These Next

ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯ; ವಾರ್ನರ್, ಮಾರ್ಷ್ ಅಬ್ಬರದ ಬ್ಯಾಟಿಂಗ್

ಆಲ್‌ರೌಂಡರ್ ಮಿಚೆಲ್ ಮಾರ್ಷ್ (ಔಟಾಗದೆ 77, 50 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (53, 38 ಎಸೆತ, 4 ...

ಐತಿಹಾಸಿಕ ಸ್ವರ್ಣ ಗೆದ್ದ ಸುಮಿತ್, ಅವನಿ; ಭಾರತಕ್ಕೆ ಒಂದೇ ದಿನ 2 ಚಿನ್ನ ಸಹಿತ ಐದು ಪದಕ

ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ...