ಮತ್ತಿಬ್ಬರು ಸಂಸದರ ಅಮಾನತು; ಉಭಯ ಸದನಗಳಲ್ಲಿ ಸಸ್ಪೆಂಡ್ ಆದ ಸಂಸದರ ಸಂಖ್ಯೆ 143ಕ್ಕೆರಿಕೆ

Source: Vb | By I.G. Bhatkali | Published on 21st December 2023, 8:13 AM | National News |

 ಹೊಸದಿಲ್ಲಿ: ಲೋಕಸಭೆಯಲ್ಲಿ ಡಿಸೆಂಬರ್ 13ರಂದು ನಡೆದ ಭಾರೀ ಭದ್ರತಾ ಉಲ್ಲಂಘನೆ ಘಟನೆ ಬಗ್ಗೆ ಚರ್ಚೆಗೆ ಆಗ್ರಹಿಸಿ, ಸದನದಲ್ಲಿ ಕಲಾಪದ ಚಟುವಟಿಕೆಗಳಿಗೆ ಅಡ್ಡಿಪಡಿಸಿದ ಆರೋಪದಲ್ಲಿ ಬುಧವಾರ ಇನ್ನೂ ಇಬ್ಬರು ಲೋಕಸಭಾ ಸದಸ್ಯರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ.

ಇದೇ ಕಾರಣಕ್ಕಾಗಿ 49 ಮಂದಿ ಪ್ರತಿಪಕ್ಷ ಎಂಪಿಗಳನ್ನು ಅಮಾನತುಗೊಳಿಸಿದ ಮರುದಿನವೇ ಈ ವಿದ್ಯಮಾನ ನಡೆದಿದೆ. ಇದರೊಂದಿಗೆ ಡಿಸೆಂಬರ್ 14ರಿಂದೀಚೆಗೆ ಸಂಸತ್ ಭವನದ ಉಭಯ ಸದನಗಳಲ್ಲಿ ಅಮಾನತುಗೊಂಡ ಸಂಸದರ ಸಂಖ್ಯೆ 143ಕ್ಕೇರಿದೆ. ಇವರಲ್ಲಿ ಲೋಕಸಭಾದ 97 ಹಾಗೂ ರಾಜ್ಯಸಭಾದ 46 ಸದಸ್ಯರಿದ್ದಾರೆ.

ಬುಧವಾರದಂದು ಲೋಕಸಭಾ ಎಂಪಿಗಳಾದ ಥಾಮಸ್ ಚಾಝಿ ಕಡಾನ್ ಪ್ರತಿಪಕ್ಷ ಹಾಗೂ ಎ.ಎಂ. ಆರೀಫ್ ಅವರನ್ನು ಘೋಷಣಾ ಫಲಕಗಳನ್ನು ಪ್ರದರ್ಶಿಸಿದ ಹಾಗೂ ಸದನದ ಅಂಗಣವನ್ನು ಗೊಳಿಲಾಗಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಥಾಮಸ್ ಚಾಝಿಕಡಾನ್ ಅವರು ಕೇರಳಕಾಂಗ್ರೆಸ್ (ಮಾಣಿ) ಹಾಗೂ ಆರೀಫ್ ಅವರು ಸಿಪಿಎಂ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಡಿಸೆಂಬರ್ 13ರಂದು ಇಬ್ಬರು ಯುವಕರು ಪ್ರೇಕ್ಷಕರ ಗ್ಯಾಲರಿಯಿಂದ ಲೋಕಸಭೆಯ ಸದನಕ್ಕೆ ಜಿಗಿದು ಹೊಗೆಬಾಂಬ್ ಸಿಡಿಸಿದ ಘಟನೆಯು ಘೋರ ಭದ್ರತಾ ಲೋಪವಾಗಿದ್ದು, ಆ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷ ಸದಸ್ಯರು ಬಲವಾಗಿ ಆಗ್ರಹಿಸುತ್ತಿದ್ದಾರೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...