ಹೊಸದಿಲ್ಲಿ: ಮೂವರು ವಿದ್ಯಾರ್ಥಿ ಹೋರಾಟಗಾರರ ಜಾಮೀನಿಗೆ ತಡೆ ನೀಡಲು ಸುಪ್ರೀಂ ನಕಾರ

Source: VB | By S O News | Published on 19th June 2021, 5:13 PM | National News |

ಹೊಸದಿಲ್ಲಿ: ದಿಲ್ಲಿ ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ಒಳಸಂಚು ಆರೋಪಗಳಲ್ಲಿ ಮತ್ತು ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಯಡಿ ಕಳೆದ ವರ್ಷದ ಮೇ ತಿಂಗಳಿನಲ್ಲಿ ಬಂಧಿಸಲ್ಪಟ್ಟಿದ್ದ ವಿದ್ಯಾರ್ಥಿ ಹೋರಾಟಗಾರರಾದ ಜೆಎನ್‌ಯುನ ನತಾಶಾ ನರ್ವಾಲ್ (32), ದೇವಾಂಗನಾ ಕಲಿತಾ (31) ಹಾಗೂ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ಆಸಿಫ್ ಇಕ್ಬಾಲ್ ತನ್ಹಾ (25) ಅವರಿಗೆ ಜಾಮೀನು ಮಂಜೂರು ಮಾಡಿರುವ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ.

ಆದರೆ, ಯುಎಪಿಎ ಅನ್ನು ವ್ಯಾಖ್ಯಾ ನಿಸಲಾಗಿರುವ ರೀತಿಯಿಂದಾಗಿ ಈ ಪ್ರಕರಣವು ದೇಶಾದ್ಯಂತ ಪರಿಣಾಮವನ್ನು ಬೀರಬಹುದಾಗಿದೆ ಎಂದು ಬೆಟ್ಟು ಮಾಡಿದ ನ್ಯಾಯಮೂರ್ತಿಗಳಾದ ಹೇಮಂತ ಗುಪ್ತಾ ಮತ್ತು ವಿ.ರಾಮ ಸುಬ್ರಮಣಿಯನ್ ಅವರ ಪೀಠವು ಜಾಮೀನು ಆದೇಶವನ್ನು ತಾನು ಪರಿಶೀಲಿಸುವುದಾಗಿಯೂ ತಿಳಿಸಿತು. ಈ ಬಗ್ಗೆ ವಿಚಾರಣೆಯನ್ನು ಮುಂದಿನ ತಿಂಗಳು ನಿಗದಿಗೊಳಿಸಿದ ಅದು ಮೂವರು ವಿದ್ಯಾರ್ಥಿ ಹೋರಾಟಗಾರ ರಿಗೆ ನೋಟಿಸ್‌ಗಳನ್ನು ಹೊರಡಿಸಿತು. ತನ್ಮಧ್ಯೆ ಉಚ್ಚ ನ್ಯಾಯಾಲಯದ ಆದೇಶವನ್ನು ಇತರ ಪ್ರಕರಣಗಳಲ್ಲಿ ಪೂರ್ವನಿದರ್ಶನವಾಗಿ ಬಳಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತು.

ಮಂಗಳವಾರ ಪ್ರತಿಭಟನೆಯ ಹಕ್ಕು ಮತ್ತು ಭಯೋತ್ಪಾದಕ ಚಟುವಟಿಕೆಯ ನಡುವಿನ ಅಂತರವನ್ನು ವಿವರಿಸಿದ್ದ ದಿಲ್ಲಿ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದು, ಮೂವರೂ ಗುರುವಾರ ರಾತ್ರಿ ದಿಲ್ಲಿಯ ತಿಹಾರ್ ಜೈಲಿನಿಂದ ಬಿಡು ಗಡೆಗೊಂಡಿದ್ದಾರೆ.

Read These Next

ಹುಬ್ಬಳ್ಳಿ: ಹುಬ್ಬಳ್ಳಿಯ ಚರ್ಚ್‌ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ...

ಫೇಸ್ ಕ್ರೀಂನಲ್ಲಿ 24 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಯತ್ನ: ಏರ್ ಪೋರ್ಟ್ ನಲ್ಲಿ ಆರೋಪಿ ಬಂಧನ

ಹೈದರಾಬಾದ್: ಹೈದರಾಬಾದ್ ಆರ್ ಜಿ ಐ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಫೇಸ್ ಕ್ರೀಮ್ ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ...