ದಿಲ್ಲಿ ಅಬಕಾರಿ ನೀತಿ ಪ್ರಕರಣ; ಸಂಜಯ್ ಸಿಂಗ್‌ಗೆ ಜಾಮೀನು

Source: Vb | By I.G. Bhatkali | Published on 3rd April 2024, 8:22 PM | National News |

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.)ದಿಂದ ಬಂಧನಕ್ಕೆ ಒಳಗಾಗಿರುವ ಆಮ್ ಆದ್ಮ ಪಕ್ಷ (ಆಪ್)ದ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ.

ಅವರಿಗೆ ಜಾಮೀನು ನೀಡುವುದಕ್ಕೆ ಈ.ಡಿ. ವಿರೋಧ ವ್ಯಕ್ತಪಡಿಸಲಿಲ್ಲ.

ಸಿಂಗ್‌ರಿಗೆ ಜಾಮೀನು ನೀಡುವುದಕ್ಕೆ ತನ್ನ ಆಕ್ಷೇಪವಿಲ್ಲ ಎಂದು ಈ.ಡಿ. ಹೇಳಿದ ಬಳಿಕ, ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಪಿ.ಬಿ. ವರಳೆ ಸದಸ್ಯರಾಗಿರುವ ನ್ಯಾಯ ಪೀಠವೊಂದು ಜಾಮೀನು ನೀಡಿತು. ಅದೇ ವೇಳೆ, ಪ್ರಕರಣದ ಅರ್ಹತೆ ಬಗ್ಗೆ ತಾನು ಏನೂ ಹೇಳಿಲ್ಲ ಎಂಬುದಾಗಿಯೂ ನ್ಯಾಯಪೀಠವು ಸ್ಪಷ್ಟಿಕರಣ ನೀಡಿತು. ಸಿಂಗ್‌ ಜಾಮೀನು ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠವು, ಈ ವಿಷಯದಲ್ಲಿ ಜಾರಿ ನಿರ್ದೇಶನಾಲಯದ ನಿಲುವು ಏನು ಎಂಬುದಾಗಿ ಅದರ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜುರನ್ನು ಕೇಳಿತು.

2023 ಅಕ್ಟೋಬರ್ 4ರಂದು ಬಂಧಿಸಲ್ಪಟ್ಟಿರುವ ಸಿಂಗ್‌ ಬಂಧನ ಇನ್ನೂ ಅಗತ್ಯವಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಮಧ್ಯಾಹ್ನ ಊಟದ ಬಳಿಕ ನ್ಯಾಯಾಲಯಕ್ಕೆ ಮರಳಿದ ಸಾಲಿಸಿಟರ್ ಜನರಲ್ ರಾಜು, “ಜಾಮೀನಿನ ಅರ್ಹತೆಗಳನ್ನು ಗಣನೆಗೆ ತೆಗೆದುಕೊಳ್ಳದೆ, ನಾನು ಈ ಬಾರಿ ವಿನಾಯಿತಿ ನೀಡುತ್ತೇನೆ' ಎಂದು ಹೇಳಿದರು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಮ್ಎಲ್‌)ಯಡಿ ದಾಖಲಾಗುವ ಪ್ರಕರಣಗಳಲ್ಲಿ, ಬಂಧನದ ಅಧಿಕಾರ ಮತ್ತು ಬಂಧನದ ಅಗತ್ಯ- ಈ ಎರಡು ಪ್ರಶ್ನೆಗಳನ್ನು ಈ ಪ್ರಕರಣದಿಂದ ಉದ್ಭವಿಸಿವೆ ಎಂದು ಸಂಜಯ್ ಸಿಂಗ್ ಪರವಾಗಿ ಹಾಜರಾದ ವಕೀಲ ಎ.ಮ್. ಸಿಂಫ್ಟಿ ಹೇಳಿದರು.

ಮಾಫಿಸ್ಟ್ರಾಕ್ಷಿಯ ಹೇಳಿಕೆಗಳನ್ನು ಹೊರತುಪಡಿಸಿದರೆ ಸಿಂಗ್ ವಿರುದ್ಧ ಬೇರೆ ಏನೂ ಇಲ್ಲ, ಮಾಫಿ ಸ್ಪಾಕ್ಷಿಯು ತನ್ನ ಹೇಳಿಕೆಗಳನ್ನು ಯಾವಾಗ ಬೇಕಾದರೂ ಬದಲಿಸಬಹುದು ಎಂದು ಸಿಂಫ್ಟಿ ಹೇಳಿದರು. ಆಗ, ಸಿಂಗ್ ಸುಮಾರು ಆರು ತಿಂಗಳುಗಳಿಂದ ಕಸ್ಟಡಿಯಲ್ಲಿದ್ದಾರೆ ಎಂದು ಹೇಳಿದ ನ್ಯಾಯಪೀಠ, ಅವರ ಬಂಧನ ಮುಂದುವರಿಯುವುದು ಅಗತ್ಯವೇ ಎಂಬ ಬಗ್ಗೆ ಸೂಚನೆಗಳನ್ನು ಪಡೆದುಕೊಳ್ಳಿ ಎಂದು ಹೆಚ್ಚುವರಿ ಸಾಲಿಸಿಟ‌ರ್ ಜನರಲ್‌ಗೆ ಸೂಚಿಸಿತು. ಇದೇ ಪ್ರಕರಣದಲ್ಲಿ, ಇತರ ಆಪ್ ನಾಯಕರಾದ ಅರವಿಂದ ಕೇಜ್ರವಾಲ್, ಮನೀಶ್ ಸಿಸೋಡಿಯ ಮತ್ತು ಸತ್ಯೇಂದ್ರ ಜೈನ್ ಈಗಲೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...