ಕಾರವಾರ: ಜ. 24ರಂದು ಸುಗ್ಗು-ಹುಗ್ಗಿ ಕಾರ್ಯಕ್ರಮ

Source: S.O. News service | By S O News | Published on 22nd January 2021, 1:35 AM | Coastal News |

ಕಾರವಾರ: ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಜ. 24ರಂದು ಸಂಜೆ 4ಕ್ಕೆ ಮುಂಡಗೋಡ ತಾಲೂಕಿನ ಮುಡಸಾಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಯಲು ರಂಗ ಮಂದಿರದಲ್ಲಿ ಸುಗ್ಗಿ-ಹುಗ್ಗಿ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಧಾನ ಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗೌರವ ಘನ ಉಪಸ್ಥಿತಿಯಲ್ಲಿ ಜರುಗುವ ಕಾರ್ಯಕ್ರಮವನ್ನು ಕಾರ್ಮಿಕ ಮತ್ತು ಸಕ್ಕರೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಉದ್ಘಾಟಿಸಲಿದ್ದಾರೆ. ನಂತರ ಕಾರವಾರ ತಾಲೂಕಿನ ಅಮದಳ್ಳಿಯ ಚಂದ್ರಕಾಂತ ಆಗೇರ ಅವರ ತಂಡದಿಂದ ಗಾರುಡಿ ಗೊಂಬೆಗಳು, ಮುಂಡಗೋಡದ ಮಾರುತಿ ಕೀರ್ತಪ್ಪನವರ ಅವರ ತಂಡದಿಂದ ಡೊಳ್ಳು ಕುಣಿತ, ಭಟ್ಕಳದ ನಾಗಪ್ಪ ಗೊಂಡ ಅವರ ತಂಡದಿಂದ ಗೊಂಡರ ಧಕ್ಕೆ ಕುಣಿತ, ಸೋಮು ಗೌಡ ಅವರ ತಂಡದಿಂದ ಹಾಲಕ್ಕಿ ಸುಗ್ಗಿ ಕುಣಿತ, ಕಮಲೇಶ ಗುನಗಾ ಅವರ ತಂಡದಿಂದ ಚಂಡೆ ವಾದನ ಕಲೆಯ ಮೆರವಣಿಗೆ ಪ್ರದರ್ಶನ ನಡೆಯಲಿದೆ.

ಅಂಧರಾದ ಅನಂದ ಅವರ ತಂಡ ಕನ್ನಡ ಗಾಯನ, ಹಾವೇರಿಯ ವೀರಯ್ಯ ಸಂಕಿನಮಠ ಹಾಗೂ ಶಿರಸಿಯ ಗಣಪತಿ ಗೌಡ ಅವರ ತಂಡ ಜಾನಪದ ಗೀತೆಗಳನ್ನು, ಗದಗಿನ ಪ್ರಕಾಶ್ ಚಂದಣ್ಣವರ ಅವರ ತಂಡ ಜೋಗತಿ ನೃತ್ಯ, ಚಡವಳ್ಳಿಯ ಮಂಜುನಾಥ ಗುಲ್ಯಾಣವರ ಹಾಗೂ ಧಾರವಾಡದ ಮಹೇಶ್ ಹಿರೇಗೌಡರ ಅವರ ತಂಡ ವೀರಗಾಸೆ, ಹಳಿಯಾಳದ ಪ್ರಕಾಶ ಅವರ ತಂಡ ಗೊಂಬೆಯಾಟ, ಭಟ್ಕಳದ ನಯನಾ ಪ್ರಸನ್ನ ಅವರ ತಂಡ ಹಾಗೂ ಹಳಿಯಾಳದ ಅಕ್ಷತಾ ಅವರ ತಂಡ ನೃತ್ಯ ರೂಪಕ, ಕೊಣ್ಣೂರಿನ ಕಸ್ತೂರಿ ಹೋಳೆಗಾರ ಅವರ ತಂಡ ದೀಪ ನೃತ್ಯ, ರಮೇಶ ಕೊಪ್ಪದ ಅವರ ತಂಡ ಗೀಗಿ ಪದ, ಕಾರವಾರದ ಉಲ್ಲಾಸ ಗೌಡ ಅವರ ತಂಡ ಜಡೆ ಕೋಲಾಟ, ಹದಲಿಯ ನಾಗನಗೌಡ ಹಂಬಳ ಅವರ ತಂಡ ಡೊಳ್ಳು ಕುಣಿತ,

ಕಮಲವ್ವ ಓಣಿಕೇರಿ ಅವರ ತಂಡ ಸೋಬಾನೆ ಪದ, ಮಂಜುನಾಥ ರಾಣೋಜಿ ಅವತ ತಂಡ ಭಜನೆ ಪದ, ಕಲ್ಲಾಪುರದ ಸವಿತ್ರವ್ವ ಹುಜರತಿ ಅವರ ತಂಡ ಸುಗ್ಗಿ ಕುಣಿತ, ಆಂಕೋಲಾದ ಗೋವಿಂದ್ ಜಿ ಅವರ ತಂಡ ಯಕ್ಷಗಾನ, ಜಲೇಂದ್ರ ಬೊಬ್ರುಕರ್ ಅವರ ತಂಡದ ಕಲಾವಿದರು ಜಾನಪದ ನೃತ್ಯವನ್ನು ಪ್ರದರ್ಶಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಎನ್.ಜಿ. ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...