ಕಾರವಾರ: ತೋಟಗಾರಿಕೆ ಇಲಾಖೆಯಿಂದ ಪ್ಲಾಸ್ಟಿಕ್ ಹೊದಿಕೆಗಳಿಗೆ ಸಹಾಯಧನ

Source: S O News | By I.G. Bhatkali | Published on 8th November 2023, 10:59 PM | Coastal News |

ಕಾರವಾರ: ಪ್ರಸಕ್ತ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸರ್ಕಾರದಿಂದ ರೈತರ ಬೆಳೆಗಳನ್ನು ಸಂರಕ್ಷಿತ ವಾತಾವರಣದಲ್ಲಿ ಬೆಳೆಯಲು ಪ್ಲಾಸ್ಟಿಕ್ ಹೊದಿಕೆಗಳಿಗೆ ಸಹಾಯಧನ ನೀಡಲಾಗುತ್ತಿದೆ. 

ತೋಟದಲ್ಲಿ ಬೆಳೆಗಳ ಸುತ್ತಲೂ ನೆಲದ ಮೇಲೆ ಪ್ಲಾಸ್ಟಿಕ್ ಹೊದಿಕೆ ಹೊದಿಸುವುದರಿಂದ ಆನಾವಶ್ಯಕವಾಗಿ ಬೆಳೆಯುವ ಕಳೆಗಳ, ಕಸಗಳ ನಿಯಂತ್ರಿಸಿ ಮಣ್ಣಿನ  ತೇವಾಂಶ ಕಾಪಾಡುವುದಲ್ಲದೆ ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮ ಜೀವಿಗಳ ರಕ್ಷಣೆ ಮಾಡಿ ಬೆಳೆಗಳ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸುತ್ತದೆ. ತೋಟಗಾರಿಕೆ ಇಲಾಖೆಯಿಂದ ಪ್ಲಾಸ್ಟಿಕ್ ಹೊದಿಕೆಗಳ (Plastic mulching) ಅಳವಡಿಕೆಗೆ ವೆಚ್ಚ ಭರಿಸಿದ ರೂ. 32,000 ಹೆಕ್ಟರ್‍ಗೆ ಶೇ. 50% ರಿಯಾಯಿತಿಯಲ್ಲಿ ರೂ 16,000 ಹೆಕ್ಟರ್‍ಗೆ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದೆ. ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು.

ಅರ್ಹತೆ: ಫಲಾನುಭವಿಗಳು ಸ್ವಂತ ಹೆಸರಿನಲ್ಲಿ ಜಮೀನು ಹೊಂದಿದ RTC ಯಲ್ಲಿ ತೋಟಗಾರಿಕೆ ಬೆಳೆ ನಮೂದಾಗಿದ್ದೂ , ನೀರಾವರಿ ಸೌಲಭ್ಯ ಹೊಂದಿರ ಬೇಕು. ಅರ್ಜಿದಾರರು ನಿಗದಿತ ನಮೂನೆಯಲ್ಲಿ ಅರ್ಜಿ, ಆಧಾರ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಪ್ರತಿ, ಪ್ರಸ್ತುತ ವರ್ಷದ ಪಹಣಿ ಇತ್ಯಾದಿ ಹೆಚ್ಚಿನ  ಮಾಹಿತಿಗಾಗಿ ತೋಟಗಾರಿಕೆ ಇಲಾಖೆ, ಭಟ್ಕಳ್ ಕಚೇರಿ ಸಮಯದಲ್ಲಿ ಮುತ್ತೆಪ್ಪ ಗೋಟುರು,ಸಹಾಯಕ ತೋಟಗಾರಿಕೆ ಅಧಿಕಾರಿ, ಆರ್‍ಎಸ್‍ಕೆ ಸೂಸಗಡಿ ಪೋನ್ ನಂ. 9964337242, ಪ್ರವೀಣ ಎಂ, ಸಹಾಯಕ ತೋಟಗಾರಿಕೆ ಅಧಿಕಾರಿ, ಆರ್‍ಎಸ್‍ಕೆ ಮಾವಳ್ಳಿ ಪೋನ್ ನಂ. 903555882, ಕುಸುಮ ಎಂ. ದೇವಾಡಿಗ, ತೋಟಗಾರಿಕೆ ಸಹಾಯಕರು ಪೋನ್ ನಂ. 9742323890 ನ್ನು ಸಂಪರ್ಕಿಸುವಂತೆ ಭಟ್ಕಳದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹೆಚ್. ಕೆ. ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...