ತಂತ್ರಜ್ಞಾನದಲ್ಲಾಗುವ ಬದಲಾವಣೆಗೆ ವಿದ್ಯಾರ್ಥಿಗಳು ಹೊಂದಿಕೊಂಡು ಹೋಗಬೇಕು: ಜಿ.ವಿ ನಾಯ್ಕ್

Source: sonews | By Staff Correspondent | Published on 28th February 2020, 6:35 PM | Coastal News |

ಕಾರವಾರ: ವಿದ್ಯಾರ್ಥಿಗಳು ತಂತ್ರಜ್ಞಾನದಲ್ಲಿ ಆಗುವಂತಹ ಬದಲಾವಣೆಯೊಂದಿಗೆ ಹೊಂದಿಕೊಂಡು ಹೋಗುವುದನ್ನು ಕಲಿಯಬೇಕು ಎಂದು ಕಾರವಾರ ವಲಯ ಅರಣ್ಯ ಅಧಿಕಾರಿ ಜಿ.ವಿ ನಾಯ್ಕ್ ಅಭಿಪ್ರಾಯಪಟ್ಟರು. 
      
ಕಾರವಾರದ ಉಪ- ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ”ಯ ಪ್ರಯುಕ್ತ ಕಾರವಾರ ಶೈಕ್ಷಣಿಕ ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರ ಕಾರವಾರದ ಗೌರವ ಕಾರ್ಯದರ್ಶಿಗಳಾದ   ಡಾ|| ವಿ.ಎನ್ ನಾಯಕ್ ಮಾತನಾಡಿ ವಿಜ್ಞಾನಿಗಳಾಗಬೇಕಾದರೆ ಮೂಲ ವಿಜ್ಞಾನ ತಿಳಿದುಕೊಂಡು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನಿಂದ 30 ಪ್ರೌಢಶಾಲಾ ತಂಡಗಳು 6 ವಿಷಯಗಳ ವಿಭಾಗದಲ್ಲಿ ಸ್ಪರ್ಧಿಸಿದರು. 6 ವಿಷಯಗಳಲ್ಲಿ 5 ಪ್ರಥಮ ಬಹುಮಾನ ಆನಂದ ಆಶ್ರಮ ಶಾಲೆ ಭಟ್ಕಳ ಹಾಗೂ ಒಂದು ಸೆಂಟ್ ಮೈಕಲ್ಸ್ ಕಾನ್ವೆಂಟ್ ಸ್ಕೂಲ್ ಕಾರವಾರ, ದ್ವಿತೀಯ ಬಹುಮಾನ ಬಾಲಮಂದಿರ ಪ್ರೌಢಶಾಲೆ ಕಾರವಾರ, ಕಿತ್ತೂರು ರಾಣಿ ವಸತಿ ಶಾಲೆ ಅಂಕೋಲಾ, ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಕುಮಟಾ, ನಿರ್ಮಲಾ ಕಾನ್ವೆಂಟ್ ಸ್ಕೂಲ್ ಕುಮಟಾ, ಸೆಂಟ್ ಮೈಕಲ್ಸ್ ಕಾನ್ವೆಂಟ್ ಸ್ಕೂಲ್ ಕಾರವಾರ, ಸೆಂಟ್ ಜೋಸೆಫ್ ಪ್ರೌಢಶಾಲೆ ಕಾರವಾರ ತೃತೀಯ ನಿರ್ಮಲಾ ಕಾನ್ವೆಂಟ್ ಸ್ಕೂಲ್ ಕುಮಟಾ, ನ್ಯೂ ಹೈಸ್ಕೂಲ್ ಬಾಡ ಕಾರವಾರ, ಪಿ. ಎಮ್ ಹೈಸ್ಕೂಲ್ ಅಂಕೋಲಾ, ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆ ಹೊನ್ನಾವರ, ಜೈಹಿಂದ್ ಹೈಸ್ಕೂಲ್ ಅಂಕೋಲಾ ಮತ್ತು ವಿ.ಕೆ.ಸಿ ಗಲ್ಸ್ ಸ್ಕೂಲ್ ಅಂಕೋಲಾ ಹಾಗೂ ಸರಕಾರಿ ಪ್ರೌಢಶಾಲೆ ಅಂಕೋಲಾ ನಗರ ಅಂಕೋಲಾ ಇವರು ಪಡೆದರು ಹಾಗೂ ಕಾರವಾರ ತಾಲೂಕಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
 
ಡಾ|| ಸಂಜೀವ ದೇಶಪಾಂಡೆ ಸದಸ್ಯ ಕಾರ್ಯದರ್ಶಿ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರ ಇವರು ಸ್ವಾಗತಿಸಿ ಪ್ರಾಸ್ತಾವಿಸಿದರು. ಭಾಗ್ಯಶ್ರೀ ನಾಯ್ಕ ವಂದಿಸಿದರು. ಕವಿತಾ ಮೇಸ್ತ ಕಾರ್ಯಕ್ರಮವನ್ನು ನಿರೂಪಿಸಿದರು. ಇದೇ ಸಂದರ್ಭದಲ್ಲಿ ರಾಕೇಶ್ ರಾವ್ ಇವರು ನೀರ್ದೆಶಿಸಿದ The Climate Challenge ಎಂಬ ವಿಜ್ಞಾನ ಚಲನಚಿತ್ರವನ್ನು ಅನಾವರಣಗೊಳಿಸಲಾಯಿತು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...