ಮುಂಡಗೋಡ: ಛತ್ರಪತಿ ಶಿವಾಜಿ ಎಲ್ಲ ಧರ್ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ : ಎಲ್.ಟಿ.ಪಾಟೀಲ್

Source: S O News Service | By Office Staff | Published on 19th February 2020, 9:18 PM | Coastal News |

ಮುಂಡಗೋಡ : ಎಲ್ಲ ಧರ್ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಂದು ಧರ್ಮವನ್ನು ಉಳಿಸಿ ಸಂರಕ್ಷಣೆ ಮಾಡಿದ ಛತ್ರಪತಿ ಶಿವಾಜಿ. 17ನೇ ಶತಮಾನದಲ್ಲಿ ಶಿವಾಜಿ ಮಹರಾಜ  ಬರದೆ ಇರುತ್ತಿದ್ದರೆ ಹಿಂದು ಧರ್ಮವು ಉಳಿಯುತ್ತಿತ್ತಾ ಎಂಬ ಪ್ರಶ್ನೆ ಭಾರತವು ಸೇರಿದಂತೆ ಜಗತ್ತಿನಾಧ್ಯಂತ ಮೂಡುವಂತಾಗಿದೆ ಎಂದು ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ ಹೇಳಿದರು
ಅವರು ಮಿನಿವಿಧಾನ ಸೌಧದ ಸಭಾಂಗಣದಲ್ಲಿ ತಾಲೂಕಾಡಳಿತ, ತಾಲೂಕ ಪಂಚಾಯತ ಹಾಗೂ ಪಟ್ಟಣ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಶಿವಾಜಿ ಜಯಂತಿ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು
ಶಿವಾಜಿ ಮಹರಾಜ ಒಂದೇ ಸಮಾಜಕ್ಕೆ ಸಂಬಂದ ಪಟ್ಟವರಲ್ಲ ಭಾರತದಲ್ಲಿ ಹುಟ್ಟಿ ಬೆಳದ ಸರ್ವರಿಗೂ  ಸೇರಿದ ಮಹಾಪುರಷ. ಶಿವಾಜಿ ಜಯಂತಿ ಮಾಡಿದರೆ ಸಾಲದು ಅವರು ಹಾಕಿಕೊಟ್ಟ ಮಾರ್ಗದರ್ಶನಗಳು, ತತ್ವ ಸಿದ್ದಾಂತಗಳು ಜೀವನದಲ್ಲಿ ಅಳವಡಿಸಿಕೊಂಡಾಗ ಸರಕಾರದ ವತಿಯಿಂದ ಜಯಂತಿ ಆಚರಿಸುತ್ತಿವುದು ಸಾರ್ಥಕವಾಗುತ್ತದೆ. ಮುಂಡಗೋಡ ಪಟ್ಟಣದ ಶಿವಾಜಿ ವೃತ್ತದಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸುವಂತ  ಬಹಳ ದಿನಗಳ ಕನಸು ಸಾರ್ಥಕಮಾಡಲು ಎಲ್ಲರ ಸಹಕಾರ ಅಗತ್ಯವಿದೆ ಎಂದರು 
ಪಟ್ಟಣಪಂಚಾಯತ್ ಸದಸ್ಯ ಅಶೋಕ ಚಲವಾದಿ ಶಿವಾಜಿ ಮಹರಾಜರ ಕುರಿತು ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರೇಡ್ 2 ತಹಶೀಲ್ದಾರ ಗಣಪತಿ ಭಟ್ಟ ವಹಿಸಿದ್ದರು.
ಬಿಜೆಪಿ ತಾ.ಅಧ್ಯಕ್ಷ ನಾಗಭೂಷಣ ಹಾವಣಗೆ, ಮರಾಠ ಸಮಾಜ ಮುಖಂಡರಾದ ತಾ.ಪಂ ಸದಸ್ಯ ಜ್ಞಾನದೇವ ಗುಡಿಯಾಳ, ಪ.ಪಂ. ಸದಸ್ಯ ಶಿವರಾಜ ಸುಬ್ರಾಯ್, ವ್ಯಾ.ಪಿ.ಪಾಟೀಲ್, ಶ್ರೀಧರ ಡೋರಿ, ಪರಷುರಾಮ ತಹಶೀಲ್ದಾರ, ಪಿ.ಜಿ.ಪಾಟೀಲ, ಎಮ್.ಪಿ.ಕುಸೂರ, ದಲಿತ ಮುಖಂಡ ಚಿದಾನಂದ ಹರಿಜನ ಸೇರಿದಂತೆ ಅಧಿಕಾರಿಗಳಾದ ತಾ.ಪಂ ಇಒ ಪ್ರವೀಣ ಕಟ್ಟಿ, ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗೀಮಠ, ಕೃಷಿ ಇಲಾಖೆ ಎ.ಡಿ ಎಮ್.ಎಸ್ ಕುಲಕರ್ಣಿ ಕಂದಾಯ ಇಲಾಖೆ ಶಿರೇಸ್ತೆದಾರ ವಿಜಯಕುಮಾರ ಶೇಟ್ಟಪ್ಪನವರ ಸೇರಿದಂತೆ ಮುಂತಾದವರು ಇದ್ದರು
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...