ಮುಂಡಗೋಡ: ಮಳೆಯಿಂದ ಅವಘಡಗಳು ಸಂಭವಿಸುವ ಸ್ಥಳ ಬಗ್ಗೆ ಪೂರ್ವತಯಾರಿ ಮಾಡಿಕೊಳ್ಳಿ ಅಧಿಕಾರಿಗಳಿಗೆ ಸೂಚನೆ

Source: Nazir Tadapatri | By S O News | Published on 10th June 2021, 2:01 PM | Coastal News |

ಮುಂಡಗೋಡ: ಮಳೆಯಿಂದ ಪ್ರವಾಹದಿಂದ ಜಲಾಶಯ ಹಾಗೂ ಕೆರೆಕಟ್ಟೆಗಳು ಒಡೆದು ಅವಘಡ ಸಂಭವಿಸುವ ಸ್ಥಳ ಬಗ್ಗೆ ಮುನೆಚ್ಚರಿಕೆಯಾಗಿ ತಾಲೂಕಿನಲ್ಲಿ ಸಿದ್ದತೆ ಮಾಡಿಕೊಳ್ಳವಂತೆ ಶಿರಸಿ ಉಪವಿಭಾಗಧಿಕಾರಿ ಆಕೃತಿ ಬನ್ಸಾಲ್ ಅಧಿಕಾರಿಗಳಿಗೆ ಸೂಚಿಸಿದರು

ಬುಧವಾರ ಪಟ್ಟಣದ ಮಿನಿ ವಿಧಾನಸೌಧ ಸಭಾ ಭವನದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಜೊತೆ ತ್ರೈಮಾಸಿ ಸಭೆಯಲ್ಲಿ ಅವರು ಮಾತನಾಡಿದರು. ಮಾನ್ಸೂನ್ ಇರುವುದರಿಂದ ಜೂ.14 ರಿಂದ 3 ದಿನ ಉತ್ತಮಮಳೆಯಾಗುವ ಸಂಭವವಿದ್ದು ಪೂರ್ವ ಸಿದ್ದತೆ ಮಾಡಿಕೊಳ್ಳವಂತೆ ಹಾಗೂ ಪ್ರವಾಹವಾಗುವ ಗ್ರಾಮದ ಜನರಿಗಾಗಿ ಕಾಳಜಿ ಕೇಂದ್ರ ತೆರೆಯುವ ಸ್ಥಳಗಳನ್ನು ಮುನ್ನೆಚ್ಚರಿಗೆ ಗುರುತಿಸುವಂತೆ ತಿಳಿಸಿದ ಅವರು ಮಳೆ-ಗಾಳಿಯಿಂದ ರಸ್ತೆಗಳ ಮೇಲೆ ಮರಗಳು ಬಿದ್ದರೆ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಪ್ರಯಾಣಿಕರಿಗೆ ಮತ್ತು ವಾಹನಗಳಿಗೆ ತೊಂದರೆ ಆಗದಂತೆ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು. ಅಲ್ಲದೆ ಬೇಕಾದ ಎಲ್ಲ ಯಂತ್ರಗಳ ಹಾಗೂ ಕೆಲಸಗಾರರ ವ್ಯವಸ್ಥೆ ಮಾಡಿಕೊಂಡಿರಬೇಕು. ತಾಲೂಕಿನ ಎಲ್ಲ ಗ್ರಾ.ಪಂಗಳಲ್ಲಿ ಮಳೆಗಾಲದ ಪೂರ್ವ ಸಿದ್ದತೆಗಳ ಬಗ್ಗೆ ಡಿ.ಸಿ ಕಚೇರಿಯಿಂದ ಮಾಹಿತಿ ಕಳುಹಿಸಲಾಗಿದೆ. ಅವುಗಳ ಪಟ್ಟಿ ತಯಾರಿಸಿ ಡಿಸಿ ಕಚೇರಿಗೆ ಕಳುಹಿಸಿಕೊಡಬೇಕು. ಮಳೆಗಾಲದಲ್ಲಿ ತಾಲೂಕಿನಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ನೋಡಿಕೊಳ್ಳಿ

ಮತ್ತು ಬೇಕಾದ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ತಿಳಿಸಿದರು. ಕೋವಿಡ್-19 ತಡೆಯ ಕುರಿತು ಅತ್ಯಂತ ಕಾಳಜಿ ವಹಿಸಬೇಕು ಎಂದರು. ತಹಶೀಲ್ದಾರ ಶ್ರೀಧರ ಮುಂದಲಮನಿ, ಪಿಐ ಪ್ರಭುಗೌಡ ಡಿ.ಕೆ., ಆಡಳಿತ ವೈದ್ಯಾಧಿಕಾರಿ ಎಚ್.ಎಫ್.ಇಂಗಳೆ, ಗೇಡ್-2 ತಹಶೀಲ್ದಾರ ಜಿ.ಬಿ.ಭಟ್ಟ, ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಇದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...