ಭಟ್ಕಳಕ್ಕೆ ಬಂದ “ದೇಶ ಉಳಿಸಿ” ಸಂಕಲ್ಪ ಯಾತ್ರೆ; ದೇಶವನ್ನು ಅಧೋಗತಿಗೆ ದಬ್ಬಿದ ಬಿಜೆಪಿಯನ್ನು ದೂರ ಇಡುವಂತೆ ಕೆರೆ

Source: SOnews | By Staff Correspondent | Published on 7th April 2024, 1:20 AM | Coastal News |

ಭಟ್ಕಳ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊರಟ “ದೇಶ ಉಳಿಸಿ ಸಂಕಲ್ಪ ಯಾತ್ರೆ”  ಶುಕ್ರವಾರ ಭಟ್ಕಳ ತಲುಪಿತು.

ಈ ಸಂದರ್ಭದಲ್ಲಿ ಮಾತನಾಡಿದ ಆರ್.ನಾಗೇಶ, ಡಾ.ರಮೇಶ್, ವಿಷ್ಣುದೇವಾಡಿಗ ಕಳೆದ ೧೦ ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತನ್ನ ನಿಜ ಬಣ್ಣವನ್ನು ತೋರಿಸಿಕೊಟ್ಟಿದೆ. ದೇಶದ ಪರಿಸ್ಥಿತಿಯನ್ನು ಅಧೋಗತಿಗೆ ತಂದಿದ್ದು, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ನಿರೂದ್ಯೋಗ, ಭ್ರಷ್ಟಾಚಾರ, ಕಂಪನಿಗಳ ಲೂಟಿ, ಜನಸಾಮಾನ್ಯರ ಸುಲಿಗೆ, ಧಾರ್ಮಿಕ ದ್ವೇಷ ಕರ್ನಾಟಕ್ಕೆ ಅನ್ಯಾಯ ಇವೆಲ್ಲವೂ ಘನಂಧಾರಿ ಕಾರ್ಯಗಳೊಂದಿಗೆ ದೇಶವನ್ನು ಅಧೋಗತಿಯ ಕಡೆಗೆ ದಬ್ಬುತ್ತಿದೆ. ದೇಶವನ್ನು ಭ್ರಷ್ಟರಿಂದ ಉಳಿಸಿಕೊಳ್ಳುವ ಸಂಕಲ್ಪದೊಂದಿಗೆ ಯಾತ್ರಯೂ ಮುನ್ನುಗ್ಗುತ್ತಿದೆ ಎಂದರು. ಬಿಜೆಪಿ ಸರ್ಕಾರ ಈ ದೇಶದ ಸಂತ ಶರಣರ ಪರಂಪರಗೆ ಸಮಾನತೆ, ಸಹಭಾಳ್ವೆ ಸಾರುವ ಸಂವಿಧಾನಕ್ಕೆ, ದೇಶದ ಘನತೆಗೆ, ಜನರ ವಿಶ್ವಾಸ ದ್ರೋಹ ಮಾಡಿದೆ. ಬಿಜೆಪಿ ಮತ್ತೇ ಅಧಿಕಾರಕ್ಕೆ ಬರಲು ಯಾವುದೇ ಕಾರಣಕ್ಕೂ ಅವಕಾಶ ನೀಡಕೂಡದು, ಬಿಜೆಪಿ ಜಾತಿಜಗಳ ಹಚ್ಚಿ ಧರ್ಮ ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ, ದೇಶವನ್ನು ಭಾವೋದ್ರೇಕಗೊಳಿಸಿ ಮತಗಳನ್ನು ಕಬಳಿಸುವ ತಂತ್ರಗಾರಿಕೆಯ ಮಾರ್ಗವನ್ನು ಹುಡುಕುತ್ತಿದೆ.ನಾವು ಆಳುವ ಪಕ್ಷವನ್ನು ವಿರೋಧಿಸುತ್ತಿದ್ದೇವೆ ಎಂದ ಮಾತ್ರಕ್ಕೆ ವಿರೋಧ ಪಕ್ಷವನ್ನು ಕೊಂಡಾಡುತ್ತೇವೆ ಎಂದಲ್ಲ. ಜನ ವಿರೋಧಿ ಕೃತ್ಯ ಯಾರೇ ಮಾಡಲಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎಂದರು.

ರಾಜ್ಯದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೇಸ್ ಪಕ್ಷ ಗಟ್ಟಿಯಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸುವ ತೀರ್ಮಾನಕ್ಕೆ ನಾವು ಬಂದಿದ್ದೇವೆ ಎಂದರು.

ಭಟ್ಕಳ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ನಯನಾ ನಾಯ್ಕ ಮಾತನಾಡಿದರು. ರಮೇಶ್ ಅಂಕೋಲಾ, ತಲ್ಹಾ ಸಿದ್ದಿಬಾಪಾ, ಕಾಂಗ್ರೇಸ್ ಮುಖಂಡ ಟಿ.ಡಿ.ನಾಯ್ಕ, ಮೇಘನಾ ನಾಯ್ಕ, ಮಮತಾ, ನಾಗರತ್ನ ಮೊಗೇರ್ ಮತ್ತಿತರರು ಉಪಸ್ಥಿತರಿದ್ದರು.

Read These Next

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...