ರೋಟರಿ ಕ್ಲಬ್, ಕಾರವಾರ ವತಿಯಿಂದ ‘ಇಂಜಿನೀಯರ್ಸ್ ಡೇ’ ಆಚರಣೆ

Source: sonews | By Staff Correspondent | Published on 17th September 2020, 6:29 PM | Coastal News |

ಕಾರವಾರ ರೋಟರಿ ಕ್ಲಬ್ ಕಾರವಾರ ವತಿಯಿಂದ ಸರ್ ಎಂ. ವಿಶ್ವೇಶ್ವರಯ್ಯ ರವರ ಜನ್ಮದಿನಾಚರಣೆಯ ನಿಮಿತ್ತ “ಇಂಜಿನೀಯರ್ಸ್ ಡೇ” ಅಂಗವಾಗಿ  ನಗರದ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಪ್ರಾಂಶುಪಾಲರಾದ ಶಾಂತಾರಮ ಹೆಗಡೆ ರವರನ್ನು ಸನ್ಮಾನಿಸಲಾಯಿತು.  

ಅದೆ ರೀತಿ ಸರಕಾರಿ ಇಂಜಿನಿಯರಿಂಗ್ ಕಾಲೇಜು, ಮಾಜಾಳಿ, ಕಾರವಾರ ಅಲ್ಲಿಯೂ ಭೇಟಿಕೊಟ್ಟು ಪ್ರಾಂಶುಪಾಲಾರ ಡಾ. ಬಿ. ಶಾಂತಲಾರವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹಾಜರಿದ್ದರು.  

ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷ ರೋ. ಸುನೀಲ ಸೋನಿ, ವೊಕೇಶನಲ್ ಡೈರೆಕ್ಟರ್ ರೋ. ಮಿನಿನ ಪುಡ್ತಾಡೊ, ಪದಾಧಿಕಾರಿಗಳಾದ ರೋ. ನಾಗರಾಜ ಜೋಶಿ, ರೋ. ರಾಘವೇಂದ್ರ ಜಿ. ಪ್ರಭು, ರೋ. ಅಮರನಾಥ ಶೆಟ್ಟಿ, ರೋ. ಕೃಷ್ಣಾ ಕೆಳಸ್ಕರ, ರೋ. ಡಾ. ಸಮೀರಕುಮಾರ ನಾಯಕ, ರೋ. ಪಿ.ಎಸ್.ನಾಯ್ಕ ಉಪಸ್ಥಿತರಿದ್ದರು.

Read These Next

ಕಾರವಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ. ಬಿಜೆಪಿಗೆ ಜೆಡಿಎಸ್ ಬೆಂಬಲ ಘೋಷಣೆ : ಆನಂದ ಅಸ್ನೋಟಿಕರ್.

ಕಾರವಾರ : ನವೆಂಬರ್ ಒಂದರಂದು ಕಾರವಾರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಜೆ.ಡಿ.ಎಸ್.ನ ನಾಲ್ಕು ಮತ್ತು ...