ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ಉಚಿತ ತಪಾಸಣೆ

Source: sonews | By Staff Correspondent | Published on 30th March 2020, 7:26 PM | Coastal News |

ಭಟ್ಕಳ: ಮುರ್ಡೇಶ್ವರದ ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ನಡೆಸಲಾಗುವುದು ಎಂದು ಆರ್.ಎನ್.ಎಸ್. ಟ್ರಸ್ಟ್ ಅಧ್ಯಕ್ಷ ಡಾ. ಆರ್. ಎನ್. ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಜನರು ಕೊರೊನಾ ವೈರಸ್‍ನಿಂದ ಆಗಿರುವ ಲಾಕ್‍ಡೌನ್‍ನಿಂದಾಗಿ ತೀವ್ರ ತೊಂದರೆಯಲ್ಲಿರುವುದರಿಂದ ತಮ್ಮ ಮುರ್ಡೇಶ್ವರದ ಆರ್. ಎನ್. ಎಸ್. ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೂ ಕೂಡಾ ಉಚಿತ ತಪಾಸಣೆಯನ್ನು ಮಾಡಲು ತೀರ್ಮಾನಿಸಿದ್ದು ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯರೂ ಲಭ್ಯರಿರುತ್ತಾರೆ ಎಂದೂ ಅವರು ತಿಳಿಸಿದ್ದಾರೆ.  ಭಟ್ಕಳದ ಜನತೆ ತಮ್ಮ ಆರೋಗ್ಯ ಸಮಸ್ಯೆಗಾಗಿ ಮುರ್ಡೇಶ್ವರದ ಆರ್. ಎನ್. ಎಸ್. ಆಸ್ಪತ್ರೆಗೆ ಬಂದು ತಪಾಸಣೆ, ಚಿಕಿತ್ಸೆ ಪಡೆಯಬಹುದು ಎಂದೂ ತಿಳಿಸಲಾಗಿದೆ. 

Read These Next

ಮಾಜಿ ಶಾಸಕ ಮಾಂಕಾಳರ ನೆರವಿನಿಂದ ಭಟ್ಕಳದಿಂದ ಓಡಿಸ್ಸಾ ಕ್ಕೆ ಪ್ರಯಾಣ ಬೆಳೆಸಿದ 70 ಮೀನುಗಾರರು

ಭಟ್ಕಳ: ಸೇವಾ ಸಿಂಧು ಆ್ಯಫ್‍ನಲ್ಲಿ ಹೆಸರು ನೊಂದಾಯಿಸಿ ತಮ್ಮ ರಾಜ್ಯಕ್ಕೆ ಮರಳು  ಕಾಯುತ್ತಿದ್ದ ಒಡಿಸ್ಸಾದ 70 ಮೀನುಗಾರರು ಸೋಮವಾರದಂದು ...