ಕಾಮಗಾರಿಗಳನ್ನು ಪುನಃ ಪ್ರಾರಂಭಿಸಿ : ಸಿಇಒ ಎಮ್ ರೋಶನ್

Source: sonews | By Staff Correspondent | Published on 11th September 2019, 6:38 PM | Coastal News |

ಕಾರವಾರ: ಮಳೆ ಪ್ರಮಾಣ ಕಡಿಮೆಯಾಗುತ್ತ ಬಂದಿದ್ದು, ಮಳೆ ಕಡಿಮೆಯಾದ ತಕ್ಷಣ ಎಲ್ಲ ಇಲಾಖೆಗಳ ಸಿವಿಲ್ ಕಾಮಗಾರಿಗಳನ್ನು ಪ್ರಾರಂಭಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಮ್. ರೋಶನ್ ಅವರು ಸೂಚಿಸಿದರು. 

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಕೆ ಡಿ ಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ  ಮಾತನಾಡಿ ಮಳೆಗಾಲ ಹಿನ್ನಲೆಯಲ್ಲಿ ವಿವಿಧ ಇಲಾಖೆಗಳ ಸಿವಿಲ್ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಮುಂದಿನ ಒಂದು ತಿಂಗಳೊಳಗಾಗಿ ಕಾಮಗಾರಿಗಳನ್ನು ಪ್ರಾರಂಭಿಸಬೇಕೆಂದರು.  ಕುಡಯುವ ನೀರು ಮತ್ತು ನೈರ್ಮಲ್ಯ ಕಾರವಾರ ವಿಭಾಗವು, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕ್ರೀಯಾಯೋಜನೆ ರೂಪಿಸಿತ್ತು, ಆದರೆ ತೀವ್ರ  ಪ್ರವಾಹ ಉಂಟಾಗಿ ಕುಡಿಯುವ ನೀರಿನ ಕಾಮಗಾರಿ ಹಾಳಾಗಿರುವದರಿಂದ ಮುಂದಿನ 4 ದಿನದೊಳಗಾಗಿ ಕ್ರೀಯಾ ಯೋಜನೆಯಲ್ಲಿ ತಿದ್ದುಪಡಿ ಮಾಡಬೇಕೆಂದು ಅವರು ತಿಳಿಸಿದರು. 

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮತ್ತು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಯಾವ ಮಾಹಿತಿಯನ್ನೂ ಸ್ಪಷ್ಟ್‍ವಾಗಿ ನೀಡದೇ ಇರುವುದರಿಂದ, ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜನೀಯರರು ಮುಂದಿನ ಕೆಡಿಪಿ ಹಾಗೂ ಸಾಮಾನ್ಯ ಸಭೆಯಲ್ಲಿ ಪಾವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಎಲ್ಲ ಮಾಹಿತಿ ನೀಡಬೇಕೆಂದು ಎಚ್ಚರಿಕೆ ನೀಡಿದರು. 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿಯ ಕಾಮಗಾರಿಗಳನ್ನು ಅತ್ಯಂತ ಶೀಘ್ರದಲ್ಲಿ ಪೂರ್ಣಗೊಳಿಸಬೇಕಂದು ಇಲಾಖಾ ಅಧಿಕಾರಿಗೆ ಅವರು ಸೂಚಿಸಿದರು. 
 ಜಿಲ್ಲಾ ಅಕ್ಷರದಾಸೋಹವು ಕಂಪೌಂಡ ಹೊಂದಿರುವ ಜಿಲ್ಲೆಯಲ್ಲಿರುವಂತಹ ಸರಕಾರಿ ಶಾಲೆ, ಅಂಗನವಾಡಿ, ವಸತಿನಿಲಯಗಳಲ್ಲಿ ಕೈತೋಟ ನಿರ್ಮಾಣ ಮಾಡಲು ಒಂದು ಕ್ರೀಯಾ ಯೋಜನೆಯನ್ನು ರೂಪಿಸತಕ್ಕದ್ದು ಆ ಕ್ರೀಯಾ ಯೋಜನೆಗೆ ಜಿಲ್ಲಾ ಪಂಚಾಯತ್‍ಯಿಂದ ಅನುಮೋದನೆಯನ್ನು ನೀಡಲಾಗುವುದು ಎಂದು ತಿಳಿಸಿದರು. 

ಬಂದರು ಇಲಾಖೆ ಅಧಿಕಾರಿ ಮಾತನಾಡಿ ಕಾರವಾರ ಬಂದರಿನ ದಕ್ಷಣ ದಿಕ್ಕಿನ ಅಲೆ ತಡೆಗೋಡೆಯನ್ನು 145 ಮೀಟರ್ ವಿಸ್ತರಣೆ ಕುರಿತು ರೂ. 39 ಕೋಟಿ ಹಾಗೂ ಉತ್ತರ ದಿಕ್ಕಿನಲ್ಲಿ 280 ಮೀ. ಅಲೆ ತಡೆಗೋಡೆ ನಿಮಾಣ ಕಾಮಗಾರಿಗೆ ರೂ. 51 ಕೋಟಿ ಸೇರಿದಂತೆ ಒಟ್ಟು ರೂ 9ಒ ಕೋಟಿಗಳಾಗಿದ್ದು, 39 ಕೋಟಿ  ಅಂದಾಜು ಮೊತ್ತದ ದಕ್ಷಿಣ ದಿಕ್ಕಿನ ಅಲೆ ತಡೆಗೋಡೆ ವಿಸ್ತರಣೆ ಕಾಮಗಾರಿ ನಿರ್ವಹಿಸುವ ಕುರಿತು ಕ್ರಮವಹಿಸಲಾಗಿದ್ದು, ಉತ್ತರ ದಿಕ್ಕಿನಲ್ಲಿ ನಿರ್ಮಿಸಬೇಕಾದ ತಡೆಗೋಡೆ ಮೊದಲ ಹಂತದ 880 ಮೀ. ಉದ್ದದ ಅಲೆ ತಡೆಗೋಡೆ ಕಾಮಗಾರಿ ಪೂರ್ಣಗೊಂಡ ನಂತರ ನಿರ್ವಹಿಸಬೇಕಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೇರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂಧಿ ಉಪಸ್ಥಿತರಿದ್ದರು.   
  
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...