ರೋಟರಿ ಕ್ಲಬ್ ದಿಂದ ಪಲ್ಸ್ ಪೋಲಿಯೋ ಜಾಗೃತಿ ರ್ಯಾಲಿ

Source: S O News Service | By Office Staff | Published on 18th January 2020, 3:19 PM | Coastal News |

ಮುಂಡಗೋಡ :  ಜನವರಿ 19 ರಂದು  ದೇಶಾದ್ಯಂತ ನಡೆಯುವ  ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯವನ್ನು ಜನರಲ್ಲಿ ಜಾಗೃತಿ ಮೂಡಿಸಲು ರೋಟರಿ ಕ್ಲಬ್ ನವರು ಜಾಥವನ್ನು ಹಮ್ಮಿಕೊಂಡಿದ್ದರು
ಶುಕ್ರವಾರ ಬೆಳಗ್ಗೆ ರೋಟರಿ ಶಾಲೆಯ ಆವರಣದಲ್ಲಿ ರೋಟರಿ ಸದಸ್ಯರು ಆರೋಗ್ಯ ಇಲಾಖೆಯ ಆಡಳಿತ ವೈದ್ಯಾಧಿಕಾರಿ ಸೇರಿದಂತೆ ಆರೋಗ್ಯ ಸಹಾಕಿಯರು ಹಾಗೂ ಆಶಾಕಾರ್ಯಕರ್ತೆರು ಹಾಗೂ ರೋಟರಿ ಶಾಲೆ ವಿದ್ಯಾರ್ಥಿಗಳು ಸೇರಿದರು. ತಹಶೀಲ್ದಾರ ಶ್ರೀಧರ ಮುಂದಲಮನಿ ಜಾಥಾಕ್ಕೆ ಚಲಾನೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ ಂ5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ  ಕಾರ್ಯಕ್ರಮವನ್ನು  ಸಾರ್ವಜನಿಕರಿಗೆ ಅರಿವು ಜಾಗೃತಿ  ಮೂಡಿಸಲು ರೋಟರಿ ಕ್ಲಬ್‍ನವರು ಪ್ರಯತ್ನವು ಶ್ಲಾಘೀನಿಯ. ಎಂದರು. ನಮ್ಮ ತಾಲೂಕಿನಲ್ಲಿ ನೂರಕ್ಕು ನೂರರಷ್ಟು ಯಶಸ್ವಿಯಾಗುತ್ತದೆ ಎಂದರು. ನಂತರ ರೋಟರಿ ಶಾಲೆಯಿಂದ  ಜಾಗೃತಿ ಮೂಡಿಸುತ್ತ ರ್ಯಾಲಿ ಪ್ರಾರಂಭಗೊಂಡಿತು ರ್ಯಾಲಿ 5 ವರ್ಷದ ಮಕ್ಕಳ ಒಳಗಿನ ಮಕ್ಕಳಿಗೆ ಪೊಲೀಯೋ ಹಾಕಿಸಿ ಭಾರತವನ್ನು ಪೋಲಿಯೋ ಮುಕ್ತಮಾಡಿ ಎಂದು ಘೋಷಣೆ ಕೂಗುತ್ತಾ ಜಾಗೃತಿ ಮೂಡಿಸುತ್ತಾ  ಬಂಕಾಪುರ ರಸ್ತೆ, ಶಿರಸಿ ರಸ್ತೆ, ಅಂಬೇಡ್ಕರ ಓಣಿ, ಯಲ್ಲಾಪುರ ರಸ್ತೆ, ಬಸವನ ಬೀದಿ, ಹುಬ್ಬಳ್ಳಿ ರಸ್ತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ  ರೋಟರಿ ಶಾಲೆಗೆ ಬಂದು ಪೂರ್ಣಗೊಳಿಸಿತು.
    ರ್ಯಾಲಿಯಲ್ಲಿ ಪಟ್ಟಣದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಎಚ್.ಎಫ್.ಇಂಗಳೆ,  ರೋಟರಿ ಕ್ಲಬ್ ಅಧ್ಯಕ್ಷ ಪ್ರಶಾಂತ ಬಾಡಕರ, ಕಾರ್ಯದರ್ಶಿ ಬೈಜು ವಿ. ಜೆ., ಖಜಾಂಚಿ ಉಮ್ಮಚಗಿ, ರೋಟರಿ ಸದಸ್ಯರು ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯ ಶ್ರೀಶೈಲ್ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಈ ರ್ಯಾಲಿಯಲ್ಲಿ ಭಾಗವಹಿಸಿದ್ದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...