ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಭಯ ಹೋಗಲಾಡಿಸಲು ಫೆ. 19 ರಂದು ವಾರ್ತಾ ಸ್ಪಂದನ

Source: S O News Service | By Office Staff | Published on 17th February 2020, 7:49 PM | Coastal News |
  • ನೇರ ಫೋನ್ ಇನ್ ಹಾಗೂ ಮಾಧ್ಯಮ ಸಂವಾದ ಕಾರ್ಯಕ್ರಮ

ಕಾರವಾರ: ಇದೇ ಮಾರ್ಚ್ 4 ರಿಂದ ಭವಿಷ್ಯ ರೂಪಿಸುವ ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಲಿವೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ, ಆತಂಕ, ಗೊಂದಲ, ಪಾಲಕರಲ್ಲಿ ತಮ್ಮ ಮಕ್ಕಳ ಭವಿಷ್ಯ ಕುರಿತ ಚಿಂತೆ ಮೂಡುವುದು ಸಹಜ. ಇವುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಫೆಬ್ರವರಿ 19 ರಂದು ‘ವಾರ್ತಾ ಸ್ಪಂದನ - ನೇರ ಫೋನ್ ಇನ್ ಹಾಗೂ ಮಾಧ್ಯಮ ಸಂವಾದ ಕಾರ್ಯಕ್ರಮ ಹಮ್ಮಿಕೊ
ಂಡಿರುತ್ತದೆ.
      
ಅಂದು ಬೆಳಿಗ್ಗೆ 11:30 ರಿಂದ 12:30 ರವರೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಪಾಲಕರು, ಪಿಯು ಕಾಲೇಜಿನ ಉಪನ್ಯಾಸಕರು, ಮಾರ್ಚ್ 4 ರಿಂದ 27 ರವರೆಗೆ ನಡೆಯುವ ಪರೀಕ್ಷೆಗೆ ಸಂಬಂಧಸಿದ ಪ್ರಶ್ನೆಗಳನ್ನು ಜಿಲ್ಲಾ ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕರಾದ ಎಸ್.ಎನ್.ಹೆಗಡೆ, ಕುಮಟಾ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ನಾಯ್ಕ ಹಾಗೂ ಶಿರಸಿ ಮಾರಿಕಾಂಬ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲರಾದ ಬಾಲಚಂದ್ರ ಭಟ್ ಇವರು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. 

ವಿದ್ಯಾರ್ಥಿಗಳು, ಪಾಲಕರು, ಉಪನ್ಯಾಸಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ದೂರವಾಣಿ ಸಂಖ್ಯೆ: 08382-226344ಗೆ ಕರೆ ಮಾಡುವ ಮೂಲಕ ನೇರವಾಗಿ ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆಯಬಹುದಾಗಿರುತ್ತದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...