ತಾಲೂಕು ಮಟ್ಟ ದಸರಾ ಕ್ರೀಡಾಕೂಟದಲ್ಲಿ ನ್ಯೂ ಇಂಗ್ಲಿಷ್ ಪಿಯು ಕಾಲೇಜ್ ವಿದ್ಯಾರ್ಥಿಗಳ ಸಾಧನೆ

Source: sonews | By Staff Correspondent | Published on 18th September 2019, 5:10 PM | Coastal News |

ಭಟ್ಕಳ: ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಯುವ ಸಬಲಿಕರಣ ಹಾಗೂ ಕ್ರೀಡಾ ಇಲಾಖೆ, ಉ.ಕ., ತಾಲೂಕಾ ಪಂಚಾಯತ್  ಭಟ್ಕಳ ಮತ್ತು ತಾಲೂಕಾ ಯುವ ಒಕ್ಕೂಟ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಶಿರಾಲಿಯ ತಟ್ಟಿಹಕ್ಕಲ ಕ್ರೀಡಾಂಗಣದಲ್ಲಿ ನಡೆದ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ದಿ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜು ಭಟ್ಕಳದ ವಿದ್ಯಾರ್ಥಿಗಳು ಭಾಗವÀಹಿಸಿ ಅತ್ಯುತ್ತಮ ಪ್ರದರ್ಶನ ತೋರಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. 

ಛಾಯಾ ನಾಯ್ಕ 100 ಮತ್ತು 200 ಮೀ ಓಟದಲ್ಲಿ ಪ್ರಥಮ, ಜಾನಕಿ ಗೊಂಡ ಎತ್ತರ ಜಿಗಿತದಲ್ಲಿ ಪ್ರಥಮ, ತ್ರಿವಿಧ ಜಿಗಿತದಲ್ಲಿ ದ್ವಿತೀಯ, ವೈಷ್ಣವಿ ಹರಿದಾಸ 800 ಮೀ ಓಟದಲ್ಲಿ ಪ್ರಥಮ, ನಿಖಿತಾ ನಾಯ್ಕ 1500 ಮೀ ಓಟದಲ್ಲಿ ಪ್ರಥಮ, 800 ಮೀ ಓಟದಲ್ಲಿ ತೃತೀಯ, ಲತಾ ದೇವಡಿಗ 400 ಮೀ ಓಟದಲ್ಲಿ ದ್ವಿತೀಯ, ವತ್ಸಲಾ ನಾಯ್ಕ 1500 ಮೀ ಓಟದಲ್ಲಿ ದ್ವಿತೀಯ, ಪ್ರಿಯಾ ದೇವಾಡಿಗ ಗುಂಡು ಎಸೆತದಲ್ಲಿ ದ್ವಿತೀಯ, ಪೂಜಾ ನಾಯ್ಕ ಉದ್ದ ಜಿಗಿತದಲ್ಲಿ ದ್ವಿತೀಯ, ತ್ರಿವಿಧÀ ಜಿಗಿತದಲ್ಲಿ ತೃತೀಯ, ಅಡೆತಡೆ ಓಟದಲ್ಲಿ ತೃತೀಯ, ಸಿಂಧೂ ನಾಯ್ಕ ಚಕ್ರ ಎಸೆತದಲ್ಲಿ ದ್ವಿತೀಯ, ಭರ್ಚಿ ಎಸೆತದಲ್ಲಿ ತೃತೀಯ ಮತ್ತು ಅನನ್ಯ ಭಟ್ ದ್ವಿತೀಯ, ಹರ್ಷಿತಾ ಮೊಗೇರ ಗುಂಡು ಎಸೆತದಲ್ಲಿ ತೃತೀಯ, ದಿಪೀಕಾ ಮೊಗೇರ ಉದ್ದ ಜಿಗಿತದಲ್ಲಿ ತೃತೀಯ, ಸುಜಯ್ ಭಂಡಾರಿ ಅಡೆತÀಡೆ ಓಟದಲ್ಲಿ ದ್ವಿತೀಯ. ಹಾಗೂ ಗುಂಪು ಆಟವಾದ 4óx100 ರಿಲೇ ಓಟದಲ್ಲಿ ಛಾಯಾ ನಾಯ್ಕ, ಪೂಜಾ ನಾಯ್ಕ, ದೀಪಿಕಾ ಮೊಗೇರ, ಜಾನಕಿ ಗೊಂಡ ಪ್ರಥಮ,   ವಾಲಿಬಾಲ್ ಪಂದ್ಯದಲ್ಲಿ ಜಾನಕಿ, ಅನನ್ಯ, ಹವಿಷಾ, ಶಾರದಾ, ಸಿಂಧೂ, ರಕ್ಷಿತಾ ಮತ್ತು ರಮ್ಯಾ ದ್ವಿತೀಯ, ಕಬ್ಬಡಿ ಪಂದ್ಯದಲ್ಲಿ ಶಾರದಾ, ರಕ್ಷಿತಾ, ಸಿಂಧು, ಅಕ್ಷತಾ, ಪೂಜಾ, ದೀಪಿಕಾ, ನಿಶಾ, ಸಹನಾ, ಗಹನಾ, ವಿನುತಾ, ವತ್ಸಲಾ, ಪ್ರಿಯಾ, ಯೋಗಿತಾ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಭಟ್ಕಳ ಏಜ್ಯುಕೇಶನ್ ಟ್ರಸ್ಟನ ಅಧ್ಯಕ್ಷ ಡಾ.ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟಿ  ಆರ್.ಜಿ.ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಪ್ರಾಂಶುಪಾಲ ವಿರೇಂದ್ರ ಶ್ಯಾನಭಾಗ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...