ಬಕ್ರೀದ ಹಬ್ಬದ ಶಾಂತಿ ಪಾಲನ ಸಭೆ; ಸರ್ಕಾರದ ಕಟ್ಟುನಿಟ್ಟಿನ ಕ್ರಮ ಪಾಲಿಸುವಂತೆ ತಹಸಿಲ್ದಾರ್ ಮನವಿ 

Source: sonews | By Staff Correspondent | Published on 28th July 2020, 7:47 PM | Coastal News |

ಮುಂಡಗೋಡ  : ತಹಶೀಲ್ದಾರ ಕಚೇರಿಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಪಾಲನ ಹಾಗೂ ಹಬ್ಬದ ಪೂರ್ವ ಭಾವಿ ಸಭೆ ನಡೆಯಿತು.

ತಹಶೀಲ್ದಾರ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಪಾಲನ ಸಭೆಯಲ್ಲಿ ಸರಕಾರ ಬಕ್ರೀದ್ ಹಬ್ಬದ ಸಲುವಾಗಿ  ಹೊರಡಿಸಿರುವ ನಿಯಮಾವಳಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸಭೆಯಲ್ಲಿ ಹಾಜರಿದ್ದ ಪಟ್ಟಣದ ಐದು ಮಸೀದಿಗಳ ಅಧ್ಯಕ್ಷರಿಗೆ ತಹಶೀಲ್ದಾರ ಶ್ರೀಧರ ಮುಂದಲಮನೆ ತಿಳಿಸಿದರು ತಾವು ಸರಕಾರದ ನಿಯಾಮಳಿ ಪಾಲಿಸುತ್ತೇವೆ ಮಸೀದಿಗಳನ್ನು ಸನಿಟೈಸ್‍ರ ಮಾಡುತ್ತೇವೆ ಹಬ್ಬದ ವಿಶೇಷ ನಮಾಜನ್ನು ಬೆಳಗ್ಗೆ  9 ರಿಂದ 11 ಒಳಗಾಗಿ ಮುಗಿಸುತ್ತೇವೆ. ಪಟ್ಟಣದ ಪ್ರತಿಯೊಂದು ಮಸೀದಿಗಳಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 10 ವರ್ಷದ ಒಳಗಿನ ಮಕ್ಕಳು ಮಸೀದಿಗಳಿಗೆ ಬರದೆ ಮನೆಯಲ್ಲಿಯೇ ನಮಾಜ ಮಾಡುವಂತೆ ಅನೌನ್ಸ್ ಮಾಡುತ್ತೇವೆ ಎಂದು ಐದು ಮಸೀದಿಗಳ ಅಧ್ಯಕ್ಷರು ತಹಶೀಲ್ದಾರರಿಗೆ ತಿಳಿಸಿದರು. 

ಈ ಸಂದರ್ಭದಲ್ಲಿ ಇನ್ಸಪೇಕ್ಟರ ಪ್ರಭುಗೌಡ ಡಿ.ಕೆ ನೂರಾನಿ ಮಸ್ಜೀದ ಅಧ್ಯಕ್ಷ ಮಹ್ಮದಸಲೀಂ ನಂದಿಗಟ್ಟಿ, ಮದೀನಾ ಮಸೀದಿನ ಅಧ್ಯಕ್ಷ ನೂರಹ್ಮದ ಗಡವಾಲೆ, ರಜಾಕೀಯ ಮಸೀದಿ ಅಧ್ಯಕ್ಷ ನಜೀರಅಹ್ಮದ ದರ್ಗಾವಾಲೆ, ಬೀಲಾಲ್ ಮಸೀದಿ ಅಧ್ಯಕ್ಷ ಮುನ್ನಾ ಶಬಾಲ ಮುಸ್ಲೀಂ ಮುಖಂಡ ನೂರಹ್ಮದ ಬೇಗ ಸೇರಿದಂತೆ ಮುಂತಾದವರು ಇದ್ದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...