ಬುಲ್ಡೋಜರ್ ಕಾರ್ಯಾಚರಣೆಗೆ ಅಂತ್ಯ ಹಾಡಬೇಕಾಗಿದೆ; ಬಿಹಾರದಲ್ಲಿ ಮಹಿಳೆಯ ಮನೆ ಧ್ವಂಸ; ಪೊಲೀಸರ ಕೃತ್ಯಕ್ಕೆ ಪಟ್ನಾ ಹೈಕೋರ್ಟ್ ಕೆಂಡಾಮಂಡಲ

Source: Vb | By I.G. Bhatkali | Published on 6th December 2022, 1:55 PM | National News |

ಪಟ್ನಾ: ಭೂಮಾಫಿಯಾದ ಕುಮಕ್ಕಿ ನಿಂದಾಗಿ ಮಹಿಳೆಯೊಬ್ಬರ ನಿವಾಸವನ್ನು ನೆಲಸಮಗೊಳಿಸಿದ್ದಾರೆನ್ನಲಾದ ನೆಲಸಮಗೊಳಿಸಿದ್ದಾರೆನಲಾದ ಬಿಹಾರ ಪೊಲೀಸರ ವಿರುದ್ಧ ಪಟ್ನಾ ಹೈಕೋರ್ಟ್ ಕಿಡಿಕಾರಿದೆ. ಬುಲ್ಡೋಜರ್‌ಗಳಿಂದ ಮನೆಗಳನ್ನು ಧ್ವಂಸಗೊಳಿಸುವುದು ಈಗ ಒಂದು 'ತಮಾಷೆ' ಅಥವಾ 'ಸಾರ್ವಜನಿಕ ಪ್ರದರ್ಶನ' ಆಗಿಬಿಟ್ಟಿದೆ ಎಂದು ಅದು ಆಕ್ರೋಶ ವ್ಯಕ್ತಪಡಿಸಿದೆ.

ಮಹಿಳೆಯ ಮನೆಯನ್ನು ಅಕ್ರಮವಾಗಿ ನೆಲಸಮಗೊಳಿಸಲಾಗಿದೆಯೆಂದು ತನಗೆ ಮನವರಿಕೆಯಾದಲ್ಲಿ ಈ ಕೃತ್ಯದಲ್ಲಿ ಶಾಮೀಲಾದ ಪ್ರತಿಯೊಬ್ಬ ಅಧಿಕಾರಿಯ ಜೇಬಿನಿಂದ 5 ಸಾವಿರ ರೂ.ಗಳನ್ನು ಸಂತ್ರಸ್ತೆಗೆ ಪಾವತಿಸುವಂತೆ ಮಾಡುವುದಾಗಿಯೂ ಪ್ರಕರಣದ ಆಲಿಕೆ ನಡೆಸಿದ ನ್ಯಾಯಾಧೀಶ ಸಂದೀಪ್ ಕುಮಾರ್ ತಿಳಿಸಿದರು. ಮುಂದಿನ ಆಲಿಕೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕೆಂದೂ ಅವರು ಸೂಚನೆ ನೀಡಿದರು.

ಪ್ರಕರಣದ ವಿಚಾರಣೆಯನ್ನು ನವೆಂಬರ್ 24ರಂದು ನಡೆಸಲಾಗಿತ್ತಾದರೂ, ನ್ಯಾಯಾಲಯ ಕಲಾಪದ ವೀಡಿಯೊ ದೃಶ್ಯಗಳು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತೆಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ವರದಿಯ ಅಧ್ಯಯನ ನಡೆಸಿದ ನ್ಯಾಯಮೂರ್ತಿ ಕುಮಾರ್ ಅವರು ಬಿಹಾರ ಪೊಲೀಸರು ಕಾನೂನಿನ ಪ್ರಕ್ರಿಯೆಯನ್ನು ಅನುಸರಿಸದೆ ಪೊಲೀಸರು ಮಹಿಳೆಯ ಮನೆಯನ್ನು ಧ್ವಂಸಗೊಳಿಸಿದ್ದಾರೆಂದು ಅಭಿಪ್ರಾಯಿಸಿದರು. ಸರಕಾರಿ ಅಧಿಕಾರಿಗಳು ಕೆಲವು ಭೂಮಾಫಿಯಾದ ಜೊತೆ ಕೈಜೋಡಿಸಿದ್ದಾರೆಂದು ಅವರು ಹೇಳಿದ್ದಾಗಿ ಕಾನೂನು ಸುದ್ದಿ ಜಾಲತಾಣ 'ಲೈವ್ ಲಾ' ವರದಿ ಮಾಡಿದೆ. ಭೂಮಾಫಿಯಾದ ಕುಮ್ಮಕ್ಕಿನ ಮೇರೆಗೆ ಜಮೀನನ್ನು ತೆರವುಗೊಳಿಸುವುದಕ್ಕಾಗಿ ಬೆದರಿಸಲು ಮಹಿಳೆ ಹಾಗೂ ಆಕೆಯ ಕುಟುಂಬದ ವಿರುದ್ದ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆಯೆಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಅರ್ಜಿದಾರರನ್ನು ರಕ್ಷಿಸಲು ತಾನಿರುವುದಾಗಿ 3 ನ್ಯಾಯಾಧೀಶರು ಭರವಸೆ ನೀಡಿದರು.

“ನಾನು ನಿಮ್ಮನ್ನು ರಕ್ಷಿಸಲು ಬಂದಿದ್ದೇನೆಯೇ ಹೊರತು ತೊಂದರೆ ಕೊಡುವುದಕ್ಕಲ್ಲ' ಎಂದು ಸಂತ್ರಸ್ತ ಮಹಿಳೆಗೆ ನ್ಯಾಯಮೂರ್ತಿ ಕುಮಾರ್ ಸಾಂತ್ವನ ನುಡಿದರು. ಆಕೆಯ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿದರು ಹಾಗೂ ಈ ಪ್ರಕರಣದಲ್ಲಿ ಆಕೆಯನ್ನು ಹಾಗೂ ಆಕೆಯ ಕುಟುಂಬ ಸದಸ್ಯರನ್ನು ಬಂಧಿಸದಂತೆ ಪೊಲೀಸರಿಗೆ ಆದೇಶಿಸಿದರು.

ಬಿಜೆಪಿ ಆಡಳಿತದ ಉತ್ತರಪ್ರದೇಶದಲ್ಲಿ ಶಂಕಿತ ಅಪರಾಧಿಗಳನ್ನು ಗುರಿಯಿರಿಸಲು ಪೊಲೀಸರು ಅವರ ಆಸ್ತಿಗಳನ್ನು ನೆಲಸಮಗೊಳಿಸಲು ಬುಲ್ಡೋಜರ್‌ಗಳನ್ನು ಬಳಸಿಕೊಳ್ಳುವ ಪ್ರವೃತ್ತಿಯು ವಿವಾದಕ್ಕೆ ಗ್ರಾಸವಾಗಿತ್ತು.

ಈ ವರ್ಷದ ಆರಂಭದಲ್ಲಿ ದಿಲ್ಲಿಯ ಉಪನಗರದಲ್ಲಿ ಕೋಮುಗಲಭೆ ಭುಗಿಲೆದ್ದ ಬಳಿಕ ಬಿಜೆಪಿ ಆಡಳಿತದ ದಿಲ್ಲಿ ನಗರಪಾಲಿಕೆಯ ಅಧಿಕಾರಿಗಳು ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಅಧಿಕವಾಗಿರುವ ಪ್ರದೇಶಗಳಲ್ಲಿ ಬುಲ್ಡೋಜರ್‌ಗಳನ್ನು ಅನಧಿಕೃತ ಕಟ್ಟಡಗಳ ನೆಲಸಮ ಕಾರ್ಯಾಚರಣೆ ನಡೆಸಿದ್ದುದು ಸುಪ್ರೀಂಕೋರ್ಟ್‌ನ ಕೆಂಗಣ್ಣಿಗೆ ಕಾರಣವಾಗಿತ್ತು.

Read These Next

ಡೆಹ್ರಾಡೂನ್: ಕ್ರೈಸ್ತ ಪ್ರಾರ್ಥನಾ ಸಭೆಯ ಮೇಲೆ ಸಂಘ ಪರಿವಾರದಿಂದ ದಾಳಿ; ಏಳು ಜನರಿಗೆ ಹಲ್ಲೆ

ಸಂಘ ಪರಿವಾರ ಕಾರ್ಯಕರ್ತರ ಗುಂಪೊಂದು ರವಿವಾರ ಇಲ್ಲಿ ಕ್ರೈಸ್ತ ಪ್ರಾರ್ಥನಾ ಸಭೆ ನಡೆಯುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದೆ. ಕನಿಷ್ಠ ...

ಲೋಕಸಭಾ ಚುನಾವಣೆಯ ಬಳಿಕ ಮುಸ್ಲಿಮರ ವಿರುದ್ಧ ಗುಂಪು ದಾಳಿ ಪ್ರಕರಣದಲ್ಲಿ ಹೆಚ್ಚಳ; ಜಮಾಅತೆ ಇಸ್ಲಾಮೀ ಹಿಂದ್ ಕಳವಳ

ಹೊಸದಿಲ್ಲಿ : ದೇಶದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರದ ಪ್ರಕರಣಗಳು ಅಧಿಕಗೊಂಡಿದ್ದು, ಅದರಲ್ಲೂ ಲೋಕಸಭಾ ಚುನಾವಣೆಯ ಬಳಿಕ ...

ಬ್ರಿಟಿಷ್ ಯುಗದ ಕಾನೂನುಗಳಿಗೆ ತೆರೆ; ಇಂದಿನಿಂದ ಮೂರು ನೂತನ ಕ್ರಿಮಿನಲ್ ಕಾಯ್ದೆಗಳು ಜಾರಿ

ಸೋಮವಾರ, ಜುಲೈ 1ರಂದು ಮೂರು ನೂತನ ಕ್ರಿಮಿನಲ್ ಕಾನೂನುಗಳು ದೇಶಾದ್ಯಂತ ಜಾರಿಗೊಳ್ಳಲಿದ್ದು ಬ್ರಿಟಿಷ್ ಯುಗದ ಕಾನೂನುಗಳು ಅಸ್ತಿತ್ವ ...