ಕೇರಳ: ಆರೆಸ್ಸೆಸ್ ನಾಯಕನ ನಿವಾಸದಲ್ಲಿ 770 ಕಿ.ಗ್ರಾಂ. ಸ್ಫೋಟಕ ಪತ್ತೆ

Source: VB | Published on 31st March 2024, 11:48 AM | National News |

ಕಣ್ಣೂರು: ಮಹತ್ವದ ಕಾರ್ಯಾಚರಣೆಯೊಂದ ರಲ್ಲಿ ಕೇರಳ ಪೊಲೀಸರು ಕಣ್ಣೂರು ಜಿಲ್ಲೆಯ ಪೊಯಿಲೂರು ನಲ್ಲಿರುವ ಸ್ಥಳೀಯ ಆರೆಸ್ಸೆಸ್ ನಾಯಕ ಹಾಗೂ ಆತನ ಸಂಬಂಧಿಯ ನಿವಾಸದಿಂದ 770 ಕಿ.ಗ್ರಾಂ. ಸ್ಫೋಟಕವನ್ನು ಪತ್ತೆ ಹಚ್ಚಿದ್ದಾರೆ.

ಸ್ಥಳೀಯ ಆರೆಸ್ಸೆಸ್ ನಾಯಕ ವಡೆಕ್ಕಯಿಲ್ ಪ್ರಮೋದ್ ಹಾಗೂ ಆತನ ಸಂಬಂಧಿ ವಡೆಕ್ಕಯಿಲ್ ಶಾಂತಾ ಅವರ ನಿವಾಸದಲ್ಲಿ ಈ ಸ್ಪೋಟಕಗಳು ಪತ್ತೆಯಾಗಿದೆ. ವಶಪಡಿಸಿಕೊಳ್ಳಲಾದ ಸ್ಫೋಟಕಗಳೊಂದಿಗೆ ಪ್ರಮೋದ್‌ಗೆ ನಂಟು ಇದೆ ಎಂದು ನಂಬಲಾಗಿದೆ.

ಪೊಲೀಸರು ಸ್ವೀಕರಿಸಿದ ರಹಸ್ಯ ಮಾಹಿತಿಯ ಆಧಾರದಲ್ಲಿ ಕೊಲವಲ್ಲೂರು ಪೊಲೀಸ್ ಇನ್‌ಸ್ಪೆಕ್ಟರ್ ಸುಮೀತ್ ಕುಮಾರ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಸೋಬಿನ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಗಣನೀಯ ಪ್ರಮಾಣದ ಸ್ಫೋಟಕವನ್ನು ವಶಪಡಿಸಿಕೊಂಡಿರುವುದು. 

ಪೊಲೀಸರು ಕಾನೂನು ಕ್ರಮಗಳನ್ನು ಪ್ರಾರಂಭಿಸಲು ಪ್ರೇರಣೆ ನೀಡಿದೆ. ಈ ಘಟನೆಗೆ ಸಂಬಂಧಿಸಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.

"ಸ್ಪೋಟಕಗಳನ್ನು ಅಕ್ರಮವಾಗಿ ವಿತರಿಸಲು ಉದ್ದೇಶಿಸ ಲಾಗಿತ್ತು ಎಂದು ಪ್ರಾಥಮಿಕ ತನಿಖೆ ಸೂಚಿಸಿದೆ'' ಎಂದು ಕೊಲವಲ್ಲೂರು ಪೊಲೀಸರು ತಿಳಿಸಿದ್ದಾರೆ. "ಈ ಕಳವಳಕಾರಿ ಬೆಳವಣಿಗೆಯ ನಡುವೆ ಈ ಪ್ರದೇಶದಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗುತ್ತಿದೆ'' ಎಂದು ಅವರು ಹೇಳಿದ್ದಾರೆ.

“ವಾರ್ತಾ ಭಾರತಿ'ಯೊಂದಿಗೆ ದೂರವಾಣಿಯಲ್ಲಿ ಮಾತ ನಾಡಿದ ಕೊಲವಲ್ಲೂರು ಎಸ್‌ಎಚ್‌ಒ, ಸ್ಫೋಟಕ ಪತ್ತೆಯಾಗಿ ರುವ ವರದಿ ಸತ್ಯ. ಆದರೆ, ಈ ಸ್ಪೋಟಕಗಳನ್ನು ಯುಗಾದಿ ಹಬ್ಬದ ಸಂದರ್ಭ ಪಟಾಕಿಗಳಲ್ಲಿ ಬಳಸುವ ಉದ್ದೇಶದಿಂದ ಸಂಗ್ರಹಿಸಿ ಇಡಲಾಗಿತ್ತು. ಪ್ರಮೋದ್‌ನನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಪ್ರಮೋದ್ ಆರೆಸ್ಸೆಸ್‌ನೊಂದಿಗೆ ನಂಟು ಹೊಂದಿದ್ದಾನೆ. ಅಲ್ಲದೆ, ಆತ ಆರೆಸ್ಸೆಸ್‌ನ ಓರ್ವ ಸ್ಥಳೀಯ ನಾಯಕ ಎಂದು ಎಎಚ್‌ಒ ದೃಢಪಡಿಸಿದ್ದಾರೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ ಇಷ್ಟು ಬೃಹತ್ ಪ್ರಮಾಣದ ಸ್ಫೋಟಕ ಪತ್ತೆಯಾಗಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಕಳೆದ ವರ್ಷ ಆರೆಸೆಸ್‌ಗೆ ರೆಸ್ಸೆಸ್‌ಗೆ ಸೇರಿದ ಯುವಕ ವಿಷ್ಣು (20) ಕಣ್ಣೂರು ಸಮೀಪದ ಎರಂಜೋಲಿಪಾಲಂನ ಸಮೀಪ ಬಾಂಬ್ ತಯಾರಿಸುತ್ತಿದ್ದ ಸಂದರ್ಭ ಅದು ಸ್ಪೋಟಗೊಂಡಿತ್ತು. ಇದರಿಂದ ಆತನ ಕೈಗೆ ಗಾಯಗಳಾಗಿತ್ತು.

Read These Next

ತಿಹಾರ್ ಜೈಲಿನಿಂದ ಹೊರಬಂದ ಕೇಜ್ರಿವಾಲ್ ಸರ್ವಾಧಿಕಾರದಿಂದ ದೇಶವನ್ನು ರಕ್ಷಿಸಬೇಕಿದೆ: ದಿಲ್ಲಿ ಸಿಎಂ

ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಬಳಿಕ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರು ಶುಕ್ರವಾರ ತಿಹಾರ್ ಜೈಲಿನಿಂದ ...

ಕೇಜ್ರವಾಲ್‌ಗೆ ಜೂ.1ರವರೆಗೆ ಮಧ್ಯಂತರ ಜಾಮೀನು; ಮುಖ್ಯಮಂತ್ರಿ ಕಚೇರಿಗೆ ಹೋಗಬಾರದು: ಸುಪ್ರೀಂ ಕೋರ್ಟ್

ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ...

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...