ಹೊಸದಿಲ್ಲಿ: ಲಸಿಕೆಯ ಮೊದಲ ಡೋಸ್ ಪಡೆದಿರುವುದು ಶೇ.27 ಭಾರತೀಯರು ಮಾತ್ರ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರದ ಅಫಿಡವಿಟ್

Source: VB | By S O News | Published on 28th June 2021, 6:16 PM | National News |

ಹೊಸದಿಲ್ಲಿ: ಕೋವಿಡ್ ಲಸಿಕೆ ಪಡೆಯಲು ಅರ್ಹರಾದ ಎಲ್ಲಾ ವಯಸ್ಕರಲ್ಲಿ ಶೇ.27ಕ್ಕಿಂತ ಸ್ವಲ್ಪ ಹೆಚ್ಚು ಮಂದಿ ಮಾತ್ರ ಮೊದಲ ಡೋಸ್ ಲಸಿಕೆ ಪಡೆದು ಕೊಂಡಿದ್ದಾರೆ ಎಂದು ಕೇಂದ್ರ ಸರಕಾರ ಶನಿವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸುಪ್ರೀಂ ಕೋರ್ಟ್‌ಗೆ ಶನಿವಾರ ರಾತ್ರಿ ಸಲ್ಲಿಸ ಲಾದ ಅಫಿಡವಿಟ್‌ನಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ, ಆದ್ಯತೆ ಜನಸಂಖ್ಯೆ (45 ವರ್ಷ ಹಾಗೂ ಅದಕ್ಕಿಂತ ಹೆಚ್ಚು)ಯ ಶೇ.44.2 ಹಾಗೂ 18-44 ಪ್ರಾಯ ಗುಂಪಿನಲ್ಲಿ ಶೇ.13ರಷ್ಟು ವಯಸ್ಥರು ತಮ್ಮ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದೆ. ದೇಶಾದ್ಯಂತ ಪ್ರತಿ 10 ಲಕ್ಷ ಜನರಿಗೆ 2.13 ಲಕ್ಷಕ್ಕೂ ಅಧಿಕ ಜನರು ಮೊದಲ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ. ಆದರೆ, ಬುಡಕಟ್ಟು ಜಿಲ್ಲೆಗಳಲ್ಲಿ 2.19 ಲಕ್ಷ ಜನರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.

ಇದು ಆನ್‌ಲೈನ್ ಪೋರ್ಟಲ್ ಕೋವಿನ್‌ನಲ್ಲಿ ನೋಂದಣಿ ಕಡ್ಡಾಯ ಮಾಡುವುದರಿಂದ ಡಿಜಿಟಲ್ ವಿಭಜನೆಯಾಗುತ್ತದೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಲಸಿಕೆಗಳು ಲಭ್ಯವಾಗಲು ಕಷ್ಟವಾಗುತ್ತದೆ ಎಂಬ ಕಳವಳವನ್ನು ನಿವಾರಿಸಿದೆ.

ಲಸಿಕೆ ಪಡೆಯಲು ಕೋವಿನ್‌ನಲ್ಲಿ ಮುಂಚಿತವಾಗಿ ಸ್ವ-ನೋಂದಣಿ ಹಾಗೂ ಭೇಟಿ ಕಾಯ್ದಿರಿಸುವುದು ಕಡ್ಡಾಯವಲ್ಲ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಲು ಸಾಧ್ಯವಾಗದವರಿಗೆ ವಾಕ್-ಇನ್-ನೋಂದಣಿ ಹಾಗೂ ಭೇಟಿ ಸ್ಥಳಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಲಸಿಕೆ ಬೇಡವೇ ಬೇಡ ಎಂದ ಶೇ.12ರಷ್ಟು ಮಂದಿ!

ಹೊಸದಿಲ್ಲಿ: ದೇಶದಲ್ಲಿ ಕೋವಿಡ್ ಸಮೀಕ್ಷೆ ಮೂರನೇ ಅಲೆಯು ಅಪ್ಪಳಿಸುವ ಸಾಧ್ಯತೆಯ ನಡುವೆಯೇ ಈವರೆಗೆ ಲಸಿಕೆ ಹಾಕಿಸಿಕೊಂಡಿರದ ಭಾರತೀಯರಲ್ಲಿ ಶೇ.12ರಷ್ಟು ಜನರು ತಮಗೆ ಲಸಿಕೆ ಬೇಡವೇ ಬೇಡ ಎಂದು ಹೇಳಿದ್ದರೆ, ಶೇ.12ರಷ್ಟು ಜನರು ಅಡ್ಡಪರಿಣಾಮಗಳ ಭೀತಿಯಿಂದಾಗಿ ಲಸಿಕೆಯನ್ನು ಹಾಕಿಸಿಕೊಳ್ಳಲು ಯೋಜಿಸಿಲ್ಲ ಎಂದು ಜನಾಭಿಪ್ರಾಯ ಸಂಗ್ರಹ ಸಂಸ್ಥೆ ಲೋಕಲ್ ಸರ್ಕಲ್ಸ್ ನಡೆಸಿರುವ ಹೊಸ ಸಮೀಕ್ಷೆಯು ತಿಳಿಸಿದೆ.

ಶೇ.29ರಷ್ಟು ಜನರು ಶೀಘ್ರವೇ ಲಸಿಕೆಯ ಮೊದಲ ಡೋಸ್‌ನ್ನು ಪಡೆದುಕೊಳ್ಳಲು ಉದ್ದೇಶಿಸಿದ್ದರೆ, ಶೇ.24ರಷ್ಟು ಜನರು ಈಗ ಲಭ್ಯವಿರುವ ಲಸಿಕೆಗಳು ಇತ್ತೀಚಿನ ಮತ್ತು ಭವಿಷ್ಯದ ಕೊರೋನ ವೈರಸ್ ಪ್ರಭೇದಗಳ ವಿರುದ್ಧ ಸಾಕಷ್ಟು ರಕ್ಷಣೆಯನ್ನು ಒದಗಿಸುತ್ತವೆಯೇ ಎನ್ನುವ ಬಗ್ಗೆ ಇನ್ನೂ ಮನದಟ್ಟಾಗದಿರುವುದರಿಂದ ಈಗಲೇ ಲಸಿಕೆಯನ್ನು ಪಡೆಯುವ ಬಗ್ಗೆ ಆಲೋಚಿಸಿಲ್ಲ.

ಹೆಚ್ಚಿನ ಮಾಹಿತಿಗಳು ಅಥವಾ ಬೇರೆ ಲಸಿಕೆಗಳು ಲಭ್ಯವಾದರೆ ಅವರು ಲಸಿಕೆ ಹಾಕಿಸಿಕೊಳ್ಳಲು ಮನಸ್ಸು ಮಾಡಬಹುದು ಎಂದು ಸಮೀಕ್ಷಾ ವರದಿಯು ತಿಳಿಸಿದೆ.

ತಮಗಿರುವ ರೋಗಗಳು ತಾವು ಲಸಿಕೆ ಪಡೆಯುವುದಕ್ಕೆ ಅಡ್ಡಿಯಾಗಿವೆ ಎಂದು ಸಮೀಕ್ಷೆಗೊಳಗಾದವರ ಪೈಕಿ ಶೇ..23ರಷ್ಟು ಜನರು ಹೇಳಿದ್ದಾರೆ.

ದೇಶದ 279 ಜಿಲ್ಲೆಗಳ 8,949 ಜನರನ್ನು ಸಮೀಕ್ಷೆಗೊಳಪಡಿಸಲಾಗಿದ್ದು, ಈ ಪೈಕಿ ಶೇ.65ರಷ್ಟು ಪುರುಷರಿದ್ದರೆ, ಶೇ.35ರಷ್ಟು ಮಹಿಳೆಯರಾಗಿದ್ದರು. ಶೇ.48ರಷ್ಟು ಜನರು ಮೊದಲ,ಶೇ.24ರಷ್ಟು ಜನರು ಎರಡನೇ ದರ್ಜೆಯ ನಗರಗಳಿಗೆ ಸೇರಿದ್ದರೆ, ಶೇ.28ರಷ್ಟು

ಜನರು 3 ಮತ್ತು 4ನೇ ದರ್ಜೆಯ ನಗರಗಳು ಹಾಗೂ ಗ್ರಾಮೀಣ ಜಿಲ್ಲೆಗಳಿಗೆ ಸೇರಿದವರಾಗಿದ್ದರು.

33 ಕೋಟಿ ಜನರು ಲಸಿಕೆಯನ್ನು ಪಡೆಯದಿರಬಹುದು ಎಂದು ತಿಳಿಸಿರುವ ವರದಿಯು, ಭಾರತದಲ್ಲಿ 94 ಕೋಟಿ ವಯಸ್ತ ಜನಸಂಖ್ಯೆಯಿದೆ ಮತ್ತು 24 ಕೋಟಿ ಜನರು ತಮ್ಮ ಮೊದಲ ಡೋಸ್ ಪಡೆದಿದ್ದಾರೆ ಎಂದು ಪರಿಗಣಿಸಿದರೆ,70 ಕೋಟಿ ವಯಸ್ಕರು ಇನ್ನೂ ಲಸಿಕೆಯನ್ನು ಹಾಕಿಸಿಕೊಂಡಿಲ್ಲ ಎಂದು ಬೆಟ್ಟುಮಾಡಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...