ಭಟ್ಕಳ: ಮುರುಡೇಶ್ವರದಲ್ಲಿ ಜಾನುವಾರು ಕಳ್ಳತನ ಯತ್ನ; ಓರ್ವನ ಬಂಧನ ; ನಾಲ್ವರು ಪರಾರಿ

Source: S O News Service | By I.G. Bhatkali | Published on 21st November 2020, 1:00 PM | Coastal News |

ಭಟ್ಕಳ: ಮೇಯಲು ಬಿಟ್ಟ ಜಾನುವಾರುವೊಂದನ್ನು ಮರಕ್ಕೆ ಕಟ್ಟಿ ಹಾಕಿ, ರಾತ್ರಿ ವೇಳೆ ವಾಹನದಲ್ಲಿ ಕದ್ದೊಯ್ಯಲು ಯತ್ನಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲು ಯಶಸ್ವಿಯಾಗಿರುವ ಘಟನೆ ತಾಲೂಕಿನ ಮುರುಡೇಶ್ವರ ಕೈಕಿಣಿ ಮುಡಕೇರಿ ರೇಲ್ವೇ ಬಿಡ್ಜ್ ಹತ್ತಿರ ಗುರುವಾರ ರಾತ್ರಿ ನಡೆದಿದೆ. 

ಬಂಧಿತನನ್ನು ಮುರುಡೇಶ್ವರ ನಿವಾಸಿ ಯಾಸೀನ್ ದೊನ್ನಾ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ  ಪರಾರಿಯಾಗಿದ್ದು, ಆರೋಪಿಗಳನ್ನು  ಹನ್ಮಂತ ಗೋಪಾಲ ನಾಯ್ಕ,  ಅನುರಾಜ್ ನಾರಾಯಣ ನಾಯ್ಕ ಸಭಾತಿ,  ಮಾದೇವ ನಾಯ್ಕ ಎಂದು ಹೆಸರಿಸಲಾಗಿದೆ.

ಈ ಕುರಿತು ಜಾನುವಾರು ಮಾಲಕ ಕೈಕಿಣಿ ಮುಡಕೇರಿಯ ಚಂದ್ರಶೇಖರ ವಿಷ್ಣು ನಾಯ್ಕ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. 
 

Read These Next

ಭಟ್ಕಳ ರಾ. ಹೆದ್ದಾರಿ ಪಕ್ಕದಲ್ಲಿ ಸಂಚಾರಕ್ಕೆ ತೊಂದರೆ. ಅಮ್ಯೂಸಮೆಂಟ್ ಫಾರ್ಕ್ ಬೇಡ: ಪುರಸಭಾ ಸದಸ್ಯ ಮನವಿ.

ಭಟ್ಕಳ : ರಾಷ್ಟ್ರೀಯ ಹೆದ್ದಾರಿ 66 ಜೈನ್ ‌ಲಾಡ್ಜ್ ಹಿಂಬದಿಯಲ್ಲಿ ಆಟಿಕೆ ವಸ್ತುಗಳ ಪ್ರದರ್ಶನಕ್ಕೆ ತಯಾರಿ ನಡೆದಿದ್ದು ಕರೋನಾ ...

ದಕ್ಷಿಣಕನ್ನಡ: ಕಾಲೇಜು ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು. ಹೋಂ ಕ್ವಾರೆಂಟೈನಲ್ಲಿರುವಂತೆ ಸೂಚನೆ.

ಮಂಗಳೂರು : ಕಾಲೇಜುಗಳು ಆರಂಭವಾಗಿ ವಾರವಾಗಿದ್ದು, ದ.ಕ.ದಲ್ಲಿ 29 ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್‌ ಪತ್ತೆಯಾಗಿದೆ. ಇದರಲ್ಲಿ ...