ಮುಂಡಗೋಡ: ಜಾತ್ಯಾತೀತ ಜನತಾ ದಳ ಪದಾಧಿಕಾರಿಗಳ ಆಯ್ಕೆ

Source: Nazeer Tadapatri | By I.G. Bhatkali | Published on 25th September 2021, 6:08 PM | Coastal News |

ಮುಂಡಗೋಡ : ಜಾತ್ಯಾತೀತ ಜನತಾ ದಳದ ತಾಲೂಕಾ ನೂತನ ಪದಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ಆದೇಶ ಹೊರಡಿಸಿದ್ದಾರೆ.

ಅಲ್ಪ ಸಂಖ್ಯಾತ ಜಿಲ್ಲಾಧ್ಯಕ್ಷರಾಗಿ ಶಿರಸಿಯ ಸೈಯ್ಯದ ಮುಜೀಜ ಮಹ್ಮದಅಲಿ,  ಯಲ್ಲಾಪುರ ಕ್ಷೇತ್ರಧ್ಯಕ್ಷರಾಗಿ ಮುತ್ತಣ್ಣ ಸಂಗೂರ ಮಠ, ಮುಂಡಗೋಡ ತಾಲೂಕಾ ಅಧ್ಯಕ್ಷರಾಗಿ ತುಕಾರಾಮ ಗುಡಕರ, ಪ್ರಧಾನ ಕಾರ್ಯದರ್ಶಿಗಳಾಗಿ ಬಶೀರಹ್ಮದ ಗುರನಳ್ಳಿ, ತಾಲೂಕ ಉಪಾಧ್ಯಕ್ಷರಾಗಿ ನಾಗರಾಜ ತಳವಾರ ಮತ್ತು ಕಾರ್ಯದರ್ಶಿಯಾಗಿ ಅಬ್ದುಲ್‍ಇಸಾಕ ಗುಡ್ನಾನವರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಜಾತ್ಯಾತೀತ ಜನತಾದಳದ ನಾಯಕರಾದ ಶಶಿಭೂಷಣ ಹೆಗಡೆ, ಸೂರಜ ನಾಯ್ಕ್, ಜಿಲ್ಲಾಪ್ರಧಾನ ಕಾರ್ಯದರ್ಶಿ ಮುನಾಫ ಮಿರ್ಜಾನಕರ, ಜಿಲ್ಲಾ ಉಪಾಧ್ಯಕ್ಷ  ಪಿ.ಟಿ, ನಾಯ್ಕ್, ರಾಜೇಶ್ವರ ಹೆಗಡೆ, ಮುಜೀಬ ಶೇಖ ಹಾಗೂ ಯಲ್ಲಾಪುರ, ಮುಂಡಗೋಡ ಕ್ಷೇತ್ರದ ಕಾರ್ಯಕರ್ತರ ಒಪ್ಪಿಗೆ ಮೇರೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ತಿಳಿಸಿದ್ದಾರೆ.

Read These Next

ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಅ.28 ರಿಂದ ಸಂತಾನಹರಣ ಶಸ್ತ್ರ ಚಿಕಿತ್ಸೆ

ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಅ.28 ರಿಂದ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದ್ದು, ನಗರ ಪ್ರದೇಶದಲ್ಲಿ ...

ಕಾರವಾರ: ಹೊಸದಾಗಿ ಪ್ರದೇಶ ಬಯಸುವ 5 ರಿಂದ 10 ನೇ ತರಗತಿಯೊಳಗಿನ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ ಹೊಸದಾಗಿ ಪ್ರದೇಶ ಬಯಸುವ 5 ರಿಂದ 10 ನೇ ...

ಕಾರವಾರ: ನೆಹರು ಯುವ ಕೇಂದ್ರ ವತಿಯಿಂದ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆ

ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ಸಹಕಾರದ ಮೆರೆಗೆ ನೆಹರು ಯುವ ಕೇಂದ್ರ ವತಿಯಿಂದ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ...