ಬೆಳೆ ವಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲು ಸರ್ಕಾರದ ಆದೇಶ

Source: S.O. News service | By S O News | Published on 15th June 2021, 11:56 PM | Coastal News |

ಕಾರವಾರ: ಮುಂಗಾರು ಹಂಗಾಮಿನಲ್ಲಿ 2021-22ನೇ ಸಾಲಿನ ಪರಿಷ್ಕøತ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲು ಸರ್ಕಾರದ ಆದೇಶದ ಪ್ರಕಾರ ಅಧಿಸೂಚನೆ ಹೊರಡಿಸಲಾಗಿದ್ದು, ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಬೆಳೆ ವಿಮಾ ಸೌಲಭ್ಯವಿರುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಡಿಕೆ ಬೆಳೆಯ ವಿಮಾ ಮೊತ್ತರೂ. 1,28,000 ಪ್ರತಿ ಹೆಕ್ಟೇರ್‍ಆಗಿದ್ದು, ರೈತರು ಭರಿಸುವ ಪ್ರೀಮಿಯಂ ಮೊತ್ತ ಶೇ 5 ರಂತೆರೂ. 6,400 ಪ್ರತಿ ಹೆಕ್ಟೇರ್‍ಆಗಿರುತ್ತದೆ. ಕಾಳುಮೆಣಸು ಬೆಳೆಯ ವಿಮೆ ಮೊತ್ತರೂ. 47,000 ಪ್ರತಿ ಹೆಕ್ಟೇರ್‍ಗೆ ಆಗಿದ್ದು, ರೈತರು ರೂ.2,350/ ಹೆಕ್ಟೇರ್‍ಗೆ (ವಿಮಾ ಮೊತ್ತದ 5%) ಪಾವತಿಸಬೇಕಾಗುತ್ತದೆ.ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ವಿಮಾ ಕಂತನ್ನು ಪಾವತಿಸಲು ಜೂನ್ 30 ಕೊನೆಯ ದಿನವಾಗಿರುತ್ತದೆ.

ಬೆಳೆ ಸಾಲ ಪಡೆಯುವ ರೈತರು ವಿಮೆಗೆ ಒಳಪಡಲು ಇಚ್ಚೆ ಇಲ್ಲದೇ ಇದ್ದಲ್ಲಿ ಆ ಪ್ರಕಾರವಾಗಿ ಲಿಖಿತವಾಗಿ ಅಂತಿಮ ದಿನಾಂಕದ 7 ದಿನದ ಮೊದಲು ತಮ್ಮ ಸಾಲವಿರುವ ಬ್ಯಾಂಕಿನ ಶಾಖೆಗೆ ಮಾಹಿತಿ ನೀಡಬೇಕಿರುತ್ತದೆ.

ನಿಗದಿತ ಅರ್ಜಿ ನಮೂನೆ, ಬ್ಯಾಂಕ್ ಪಾಸ್ ಪುಸ್ತಕದ ಯಥಾ ಪ್ರತಿ, ಬೆಳೆ ನಮೂದಿರುವ ಪಹಣಿ ಪತ್ರಿಕೆ, ಸ್ವಯಂದೃಢೀಕರಣ ಮತ್ತು ಆಧಾರ್ ಕಾರ್ಡ್‍ನ ಪ್ರತಿಯೊಂದಿಗೆ ಸಂಬಂಧಿತ ಬ್ಯಾಂಕ್

ಶಾಖೆಯಲ್ಲಿ ಅಂತಿಮ ದಿನಾಂಕದ ಒಳಗಾಗಿ ನೊಂದಾವಣೆ ಮಾಡಿಕೊಳ್ಳಬಹುದಾಗಿದೆ.

ರೈತರು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನತೋಟಗಾರಿಕಾ ಇಲಾಖೆಯ ಕಛೇರಿ ಅಥವಾ ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...