ಡಿಜಿಟಲ್ ಇಂಡಿಯಾ ಯೋಜನೆಯಿಂದ ತಡೆ ರಹಿತ ಸಂಪರ್ಕ

Source: sonews | By Staff Correspondent | Published on 29th March 2019, 1:11 AM | Coastal News |

ಭಟ್ಕಳ: ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಅಂಗವಾಗಿ ಹಳ್ಳಿಹಳ್ಳಿಗಳಿಗೆ ತಡೆರಹಿತ ಸಂಪರ್ಕ ಒದಗಿಸಲಾಗಿದ್ದು,  ಆ್ಯಪ್‍ಗಳ ಇಕೋಸಿಸ್ಟಂ ಮೂಲಕ ಲೈವ್ ಟಿವಿ ಹಾಗೂ ಕ್ಯಾಚ್ ಅಪ್ ಟಿವಿ ಸೌಲಭ್ಯವನ್ನು ಗ್ರಾಹಕರು ಆಸ್ವಾದಿಸಲು ಜಿಯೊ ಡಿಜಿಟಲ್ ಲೈಫ್ ಅವಕಾಶ ಕಲ್ಪಿಸಿದೆ.ಸಂಚಾರದಲ್ಲಿರುವಾಗಲೂ ಜಿಯೊ ಗ್ರಾಹಕರು ಲೈವ್ ಟಿವಿ ವೀಕ್ಷಿಸಬಹುದಾಗಿದೆ. ಸಿನಿಮಾ, ಮನೋರಂಜನೆ, ಸುದ್ದಿ, ಕ್ರೀಡೆ ಹೀಗೆ ಹಲವು ಬಗೆಯ ಮನೋರಂಜನೆಯನ್ನು 600ಕ್ಕೂ ಹೆಚ್ಚು ವಾಹಿನಿಗಳ ಗುಚ್ಛದ ಮೂಲಕ ಜಿಯೊ ಟಿವಿಯಲ್ಲಿ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಶ್ವದ ಎಲ್ಲೆಡೆಯ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಲು ಗ್ರಾಹಕರು ಆರಿಸಿಕೊಳ್ಳಬಹುದಾದ 16 ಭಾಷೆಗಳ 200ಕ್ಕೂ ಹೆಚ್ಚು ಸುದ್ದಿವಾಹಿನಿಗಳು ಜಿಯೊ ಟಿವಿ ಆ್ಯಪ್‍ನಲ್ಲಿವೆ. ಗ್ರಾಹಕರ ಆಸಕ್ತಿಗೆ ಅನುಗುಣವಾಗಿ ಸುದ್ದಿ, ಸಿನಿಮಾ, ಸಂಗೀತ, ಕ್ರೀಡೆ, ಜೀವನಶೈಲಿ, ಭಕ್ತಿ ಮತ್ತಿತರ ಪ್ರಕಾರಗಳ 30 ಜನಪ್ರಿಯವಾಹಿನಿಗಳ ಗುಚ್ಛದಿಂದ ತಮಗೆ ಬೇಕಾದ್ದನ್ನು ಆರಿಸಿಕೊಳ್ಳಬಹುದಾಗಿದೆ ಎಂದು ವಿವರಿಸಿದೆ.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...